ಕನ್ನಡಿಗರು ಮಾತೃಭಾಷೆಗೆ ಮೊದಲ ಆದ್ಯತೆ ನೀಡಿ: ಎಸ್.ಜಿ.ನಂಜಯ್ಯನಮಠ

KannadaprabhaNewsNetwork |  
Published : Dec 19, 2024, 12:32 AM IST
ಪಟ್ಟಣಕ್ಕೆ ಆಗಮಿಸಿದ ನಾಡಧ್ವಜದ ಮೇಲೆ ಕನ್ನಡದ ಹಸ್ತಾಕ್ಷರ ವಿಶೇಷ ಅಭಿಯಾನದ ಕರಪತ್ರಗಳನ್ನು ಮಾಜಿ ಶಾಸಕ ಎಸ್.ಜಿ.ನಂಜಯ್ಯನಮಠ ಪ್ರದರ್ಶಿಸಿದರು. | Kannada Prabha

ಸಾರಾಂಶ

ಕನ್ನಡಿಗರು ಮಾತೃಭಾಷೆಗೆ ಮೊದಲು ಆದ್ಯತೆ ಕೊಟ್ಟು, ನಂತರ ಇತರೆ ಭಾಷೆಗಳನ್ನು ವ್ಯಾವಹರಿಕವಾಗಿ ಕಲಿಯಬಹುದು ಎಂದು ಮಾಜಿ ಶಾಸಕ ಎಸ್.ಜಿ.ನಂಜಯ್ಯನಮಠ ಹೇಳಿದರು.

ಕನ್ನಡಪ್ರಭ ವಾರ್ತೆ ಅಮೀನಗಡ

ಕನ್ನಡಿಗರು ಮಾತೃಭಾಷೆಗೆ ಮೊದಲು ಆದ್ಯತೆ ಕೊಟ್ಟು, ನಂತರ ಇತರೆ ಭಾಷೆಗಳನ್ನು ವ್ಯಾವಹರಿಕವಾಗಿ ಕಲಿಯಬಹುದು ಎಂದು ಮಾಜಿ ಶಾಸಕ ಎಸ್.ಜಿ.ನಂಜಯ್ಯನಮಠ ಹೇಳಿದರು.

ಪಟ್ಟಣದಲ್ಲಿ 87ನೇ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಮಿತ್ತ ಸುವರ್ಣ ಕರ್ನಾಟಕ ವಿಶೇಷ ಪ್ರಶಸ್ತಿ ಪುರಸ್ಕೃತ ಡಾ.ಸಿತಿಮಾ ವಜ್ಜಲ ಅವರು ಹಮ್ಮಿಕೊಂಡಿರುವ ನಾಡಧ್ವಜದ ಮೇಲೆ ಕನ್ನಡದ ಹಸ್ತಾಕ್ಷರ ವಿಶೇಷ ಅಭಿಯಾನ, ಇಳಕಲ್ಲಿನಿಂದ ಅಮೀನಗಡ ಪಟ್ಟಣಕ್ಕೆ ಆಗಮಿಸಿದಾಗ ಅಮೀನಗಡದಲ್ಲಿ ಅದನ್ನು ಸ್ವಾಗತಿಸಿ, ತಾವು ಹಸ್ತಾಕ್ಷರ ಮೂಡಿಸಿ ಮಾತನಾಡಿ, ಕಳೆದ ಹತ್ತು ವರ್ಷಗಳ ಹಿಂದೆ ನಾನೂ ಆಂಗ್ಲ ಭಾಷೆಯಲ್ಲಿ ಸಹಿ ಮಾಡುತ್ತಿದ್ದೆ. ವಿದೇಶಕ್ಕೆ ಹೋದಾಗಲೂ ಕನ್ನಡದಲ್ಲೇ ಸಹಿ ಮಾಡಿದ್ದೇನೆ. ಪ್ರತಿಯೊಬ್ಬರೂ ಕನ್ನಡದಲ್ಲೇ ಸಹಿ ಮಾಡುವ ಮೂಲಕ ಮಾತೃಭಾಷೆಗೆ ಹೆಚ್ಚು ಒತ್ತು ನೀಡಬೇಕು ಸಿತಿಮಾವಜ್ಜಲ ಅವರ ಈ ಅಭಿಯಾನ ಕನ್ನಡಿಗರಿಗೆ ಹೆಚ್ಚು ಕನ್ನಡಾಭಿಮಾನ ಮೂಡಿಸುವಂತಿದೆ ಎಂದರು.

ಅಭಿಯಾನದ ನೇತೃತ್ವವಹಿಸಿ ಮಾತನಾಡಿದ ಡಾ.ಸಿತಿಮಾ ವಜ್ಜಲ, ಕನ್ನಡಿಗರು ಹೆಚ್ಚು ಕನ್ನಡದಲ್ಲೇ ಸಹಿ ಮಾಡುವುದನ್ನು ಕಲಿಯಲೆಂಬ ಉದ್ದೇಶದಿಂದ ಈ ಅಭಿಯಾನ ಹಮ್ಮಿಕೊಂಡಿದೆ. ಇಳಕಲ್ಲಿನ ಕಂಠಿ ವೃತ್ತದಿಂದ ಪ್ರಾರಂಭಗೊಂಡು, ಹುನಗುಂದ, ಅಮೀನಗಡ, ಬಾಗಲಕೋಟೆ, ಬೀಳಗಿ, ವಿಜಯಪುರ, ಯಾದಗಿರಿ, ಬಳ್ಳಾರಿ, ಹೊಸಪೇಟೆ ಮೂಲಕ, ಮಂಡ್ಯದಲ್ಲಿ ಜರಗುವ ಸಮ್ಮೇಳನದಲ್ಲಿ ಪಾಲ್ಗೂಳ್ಳಲಿದೆ ಎಂದರು.

ಹುನಗುಂದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಲ್ಲಿಕಾರ್ಜುನ ಸಜ್ಜನ ಡಾ.ಸಿತಿಮಾ ವಜ್ಜಲ ಅವರಿಗೆ ಶಾಲು ಹೊದಿಸಿ ಅಮೀನಗಡದ ಪ್ರಸಿದ್ಧ ವಿಜಯಾ ಕರದಂಟು ನೀಡಿ ಸನ್ಮಾನಿಸಿ ಪ್ರಯಾಣ ಶುಭವಾಗಲೆಂದ ಕೋರಿದರು. ಕಸಾಪ ವಲಯ ಘಟಕದ ಅಧ್ಯಕ್ಷ ನರಸಿಂಹಮೂರ್ತಿ, ಹೆಸ್ಕಾಂ ಶಾಖಾಧಿಕಾರಿ ಗೋಪಾಲ ಪೂಜಾರಿ, ನಿವೃತ್ತ ಉಪನ್ಯಾಸಕ ಅಶೋಕ ಚಿಕ್ಕಗಡೆ, ಶಂಕರ ಬೆಲ್ಲದ, ವಿಶ್ವನಾಥ ಬೀಳಗಿ, ಗ್ಯಾನಪ್ಪ ಘಟ್ಟಿಗನೂರ, ಶಂಕ್ರಪ್ಪ ಮೇಟಿ, ಹನಮಂತಗೌಡ ಮಾಚಾ, ಮಲ್ಲಿಕಾರ್ಜುನ ಶಿರಹಟ್ಟಿ, ಶಬ್ಬೀರ ಇನಾಂದಾರ, ಮಹಾಂತೇಶ ಅರಳಿ ಮುಂತಾದವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಲು ಸಾಲು ರಜೆ, ಪ್ರವಾಸಿ ತಾಣ ರಷ್‌
ಭೂಮಿ ಮಾರಿದ ಇನ್ಫಿ ಬಗ್ಗೆ ಕಾರ್ತಿ ತೀವ್ರ ಆಕ್ರೋಶ