ಕನ್ನಡಪ್ರಭ ವಾರ್ತೆ ತುಮಕೂರುಲೆ, ಸಂಸ್ಕೃತಿ, ಶೈಕ್ಷಣಿಕ, ಬ್ಯಾಂಕಿಗೆ, ನೀರಾವರಿ ಸೇರಿದಂತೆ ಇಡೀ ನಾಡಿನ ಸಮಗ್ರ ಅಭಿವೃದ್ದಿಯಲ್ಲಿ ಮೈಸೂರು ದೊರೆ ಶ್ರೀನಾಲ್ವಡಿ ಕೃಷ್ಣ ರಾಜ ಒಡೆಯರ್ ಶ್ರಮ ಇರುವುದನ್ನು ಕಾಣಬಹುದು ಎಂದು ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿ ಜಿಲ್ಲಾ ಉಪಾಧ್ಯಕ್ಷ ಡಿ.ಕೆ.ಇಂದ್ರಕುಮಾರ್ ಹೇಳಿದರು.
ನಗರದ ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿ ಕಚೇರಿಯಲ್ಲಿ ಮೈಸೂರು ದೊರೆಯಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ 140ನೇ ಜಯಂತಿ ಆಚರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.ಬರದ ನಾಡಾಗಿದ್ದ ಮೈಸೂರು ಪ್ರಾಂತ್ಯಕ್ಕೆ ತನ್ನ ಕುಟುಂಬದ ಒಡೆವೆಗಳನ್ನು ಮಾರಾಟ ಮಾಡಿ, ಕನ್ನಂಬಾಡಿ ಕಟ್ಟೆಯನ್ನು (ಕೆ.ಆರ್.ಎಸ್) ಕಟ್ಟುವ ಮೂಲಕ ಆ ಭಾಗದ ಜನರು ನೀರಾವರಿ ಬೆಳೆ ಬೆಳೆಯುವಂತೆ ಮಾಡಿದರು. ಮೈಸೂರು ಬ್ಯಾಂಕು, ಭದ್ರಾವತಿ ಉಕ್ಕು ಕಾರ್ಖಾನೆ, ಮೈಸೂರು ವಿಶ್ವವಿದ್ಯಾಲಯ ಸೇರಿದಂತೆ ಹಲವಾರು ಪ್ರಥಮಗಳಿಗೆ ಕರ್ನಾಟಕ ಮುನ್ನುಡಿ ಬರೆಯುವಂತೆ ಮಾಡಿದ್ದ ನಮ್ಮ ಮಹಾರಾಜರು. ಅವರ ಹೆಸರು ರಾಜ್ಯದ ಪ್ರತಿ ಮನೆಗಳಲ್ಲಿಯೂ ಚಿರಸ್ಥಾಯಿಯಾಗಿದೆ ಎಂದು ಹೇಳಿದರು.ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರಸಮಿತಿ ಜಿಲ್ಲಾಧ್ಯಕ್ಷ ಎನ್.ಕೆ.ನಿಧಿಕುಮಾರ್ ಮಾತನಾಡಿ, ಆಡಳಿತದಲ್ಲಿ ಮೇಲ್ವರ್ಗದವರ ಹೆಚ್ಚು ಇದ್ದದಂತಹ ಸಂದರ್ಭದಲ್ಲಿ ತಳ ಸಮುದಾಯ ಮತ್ತು ಹಿಂದುಳಿದ ವರ್ಗಗಳಿಗೆ ಪ್ರಾತಿನಿಧ್ಯ ಸಿಗಬೇಕೆಂಬ ಕಾರಣಕ್ಕೆ ೧೯೦೩ರಲ್ಲಿ ಮಿಲ್ಲರ್ ಆಯೋಗವನ್ನು ರಚಿಸಿದ್ದರು ಎಂದರು.
ಆಡಳಿತದಲ್ಲಿ ಹಿಂದುಳಿದ ವರ್ಗಗಳಿಗೆ ಪ್ರಾಧ್ಯಾನತೆ ನೀಡುವ ಮೂಲಕ ಭಾರತದಲ್ಲಿಯೇ ಶಾಹು ಮಹಾರಾಜ್ ನಂತರ ಮೀಸಲಾತಿ ಕಲ್ಪಿಸಿದ ರಾಜಪ್ರಭುತ್ವ ಮೈಸೂರು ದೊರೆಗಳದ್ದಾಗಿದೆ. ಬಡವರಿಗಾಗಿ ಭೂಮಿ ಹಂಚಿದ್ದಲ್ಲದೆ, ಅನೇಕ ಒಳ್ಳೆಯ ಕಾರ್ಯಕ್ರಮಗಳನ್ನು ಜಾರಿ ಮಾಡಿ, ಮನುಕುಲದ ಉದ್ದಾರಕ್ಕೆ ಶ್ರಮಿಸಿದ್ದಾರೆ. ರಾಜಪ್ರಭುತ್ವದಲ್ಲಿಯೂ ಪ್ರಜಾಪ್ರಭುತ್ವದ ಮಾದರಿ ಆಡಳಿತ ನೀಡಿದ ಏಕೈಕ ದೊರೆ ನಾಲ್ವಡಿ ಕೃಷ್ಣರಾಜ ಒಡೆಯರ್ ಎಂದು ಬಣ್ಣಿಸಿದರು.ಕಾರ್ಮಿಕ ಘಟಕದ ಜಿಲ್ಲಾ ಅಧ್ಯಕ್ಷ ನಾರಾಯಣ್. ಎಸ್, ಯುವ ಘಟಕದ ಜಿಲ್ಲಾ ಅಧ್ಯಕ್ಷ ಗೋವಿಂದರಾಜ್.ಕೆ, ಓಬಿಸಿ ಘಟಕದ ಜಿಲ್ಲಾ ಅಧ್ಯಕ್ಷ ರಾಮಚಂದ್ರುರಾವ್.ಎಸ್., ಅಲ್ಪಸಂಖ್ಯಾತರ ಘಟಕದ ತುಮಕೂರು ಜಿಲ್ಲಾ ಅಧ್ಯಕ್ಷರು ಶಬ್ಬೀರ್ ಅಹ್ಮದ್, ಅಲ್ಪಸಂಖ್ಯಾತರ ಘಟಕದ ತುಮಕೂರು ನಗರ ಅಧ್ಯಕ್ಷ ರಫೀಕ್ ಅಹ್ಮದ್, ತುಮಕೂರು ತಾಲೂಕು ಗೌರವಾಧ್ಯಕ್ಷ ಗಂಗಾಧರ್ ಜಿ ಆರ್., ಆಟೋ ಘಟಕದ ತಾಲೂಕು ಅಧ್ಯಕ್ಷ ಶ್ರೀನಿವಾಸ್ ದಿಬ್ಬೂರು, ಗಂಗಾಧರ್, ಟೈಲರ್ ಜಗದೀಶ್, ಶಿವಣ್ಣ ನಾಗರಾಜ್ ಉಪಸ್ಥಿತರಿದ್ದರು.