ಕಾಂತೂರು-ಮೂರ್ನಾಡು ಮಹಿಳಾ ತಂಡ ರಾಷ್ಟ್ರಮಟ್ಟಕ್ಕೆ ಆಯ್ಕೆ

KannadaprabhaNewsNetwork |  
Published : Dec 24, 2024, 12:47 AM IST
ಚಿತ್ರ : 22ಎಂಡಿಕೆ3 :  ಕಾಂತೂರು-ಮೂರ್ನಾಡು ಮಹಿಳಾ ತಂಡವು ಥ್ರೋಬಾಲ್ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಪಡೆಯಿತು.  | Kannada Prabha

ಸಾರಾಂಶ

ಕಾಂತೂರು ಮೂರ್ನಾಡು ಮಹಿಳಾ ತಂಡವು ಥ್ರೋಬಾಲ್‌ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದೆ.

ಕನ್ನಡಪ್ರಭ ವಾರ್ತೆ ಮೂರ್ನಾಡು

ಇತ್ತೀಚಿಗೆ ನಡೆದ ರಾಜ್ಯ ಮಟ್ಟದ 16 ನೇ ಈಶ ಗ್ರಾಮೋತ್ಸವದ ಪಂದ್ಯಾಟದಲ್ಲಿ ಕಾಂತೂರು-ಮೂರ್ನಾಡು ಮಹಿಳಾ ತಂಡವು ಥ್ರೋಬಾಲ್ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಚಿಕ್ಕಬಳ್ಳಾಪುರದ ಸದ್ಗುರು ಸನ್ನಿಧಿಯಲ್ಲಿ ಆಯೋಜಿಸಲಾಗಿದ್ದ ಈಶ ಗ್ರಾಮೋತ್ಸವದಲ್ಲಿ ಥ್ರೋಬಾಲ್ ಪಂದ್ಯಾಟದಲ್ಲಿ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ 14 ತಂಡಗಳ ನಡುವೆ ರೋಮಾಂಚಕ ಪ್ರದರ್ಶನಗಳು ನಡೆದು, ಕೊಡಗು ಜಿಲ್ಲೆಯ ಕಾಂತೂರು-ಮೂರ್ನಾಡು ಮಹಿಳಾ ತಂಡ ಮತ್ತು ಮರಗೋಡು ಬ್ಲಾಕ್ ಪ್ಯಾಂಥರ್ಸ್ ಮಹಿಳಾ ಕ್ಲಬ್ ತಂಡಗಳು ಫೈನಲ್‌ಗೆ ಪ್ರವೇಶಿಸಿತು.

ಈ ಎರಡು ತಂಡಗಳ ನಡುವೆ ನಡೆದ ಪಂದ್ಯಾಟದಲ್ಲಿ ಕಾಂತೂರು-ಮೂರ್ನಾಡು ಮಹಿಳಾ ತಂಡ ವಿಜಯ ಸಾಧಿಸಿತು. ಈ ತಂಡವು ಇದೇ ತಿಂಗಳು 28ರಂದು ಕೊಯಂಬತ್ತೂರಿನ ಈಶ ಯೋಗ ಕೇಂದ್ರದಲ್ಲಿ ನಡೆಯುವ ರಾಷ್ಟ್ರಮಟ್ಟದ ಗ್ರ್ಯಾಂಡ್ ಫಿನಾಲೆಯಲ್ಲಿ ಭಾಗವಹಿಸಲಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈಲ್ವೆ ಪರೀಕ್ಷೆಯಲ್ಲಿ ಮತ್ತೆ ಕನ್ನಡಕ್ಕೆ ಕೊಕ್
ಓಡಿ ಹೋದ ಹೇಡಿ ಎನಿಸಿಕೊಳ್ಳುವುದಿಲ್ಲ. ಅಲ್ಲೇ ರಾಜಕೀಯ ಅಸ್ತಿತ್ವ ಕಂಡುಕೊಳ್ಳುತ್ತೇನೆ : ನಿಖಿಲ್‌