ಏಪ್ರಿಲ್ 10ರಿಂದ ಕನ್ಯಾಡಿ ಕ್ಷೇತ್ರ ಪ್ರತಿಷ್ಠಾ ಜಾತ್ರಾ ಮಹೋತ್ಸವ

KannadaprabhaNewsNetwork |  
Published : Apr 02, 2024, 01:05 AM IST
ಕನ್ಯಾಡಿ | Kannada Prabha

ಸಾರಾಂಶ

ಧರ್ಮಸ್ಥಳ ಸಮೀಪದ ಕನ್ಯಾಡಿ ಶ್ರೀರಾಮ ಕ್ಷೇತ್ರ ಮಹಾ ಸಂಸ್ಥಾನಂ ನಿತ್ಯಾನಂದ ನಗರದ 64 ನೇ ವರ್ಷದ ಶ್ರೀ ರಾಮ ತಾರಕ ಸಪ್ತಾಹ, ಕ್ಷೇತ್ರದ ಪ್ರತಿಷ್ಠಾ ಜಾತ್ರಾ ಮಹೋತ್ಸವ ಮತ್ತು ಮಹಾ ಬ್ರಹ್ಮ ರಥೋತ್ಸವ 10ರಿಂದ 17 ರ ವರೆಗೆ ನಡೆಯಲಿದೆ.ಇದರ ಪೂರ್ವ ತಯಾರಿ ಪ್ರಯುಕ್ತ ಸಮಾಲೋಚನಾ ಸಭೆ ಇತ್ತೀಚೆಗೆ ನಡೆಯಿತು.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಕನ್ಯಾಡಿ ಶ್ರೀರಾಮ ಕ್ಷೇತ್ರ ಮಹಾ ಸಂಸ್ಥಾನಂ ನಿತ್ಯಾನಂದ ನಗರದ 64 ನೇ ವರ್ಷದ ಶ್ರೀ ರಾಮ ತಾರಕ ಸಪ್ತಾಹ, ಕ್ಷೇತ್ರದ ಪ್ರತಿಷ್ಠಾ ಜಾತ್ರಾ ಮಹೋತ್ಸವ ಮತ್ತು ಮಹಾ ಬ್ರಹ್ಮ ರಥೋತ್ಸವ 10ರಿಂದ 17 ರ ವರೆಗೆ ನಡೆಯಲಿದೆ.ಇದರ ಪೂರ್ವ ತಯಾರಿ ಪ್ರಯುಕ್ತ ಸಮಾಲೋಚನಾ ಸಭೆ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಉಪಸ್ಥಿತಿಯಲ್ಲಿ ಶ್ರೀ ರಾಮ ಕ್ಷೇತ್ರದಲ್ಲಿ ಭಾನುವಾರ ನಡೆಯಿತು.

ಸಭೆಯಲ್ಲಿ ತಾಲೂಕಿನ ವಿವಿಧ ಗ್ರಾಮಗಳ ಪ್ರಮುಖರು, ಶ್ರೀ ರಾಮ ಕ್ಷೇತ್ರ ಸೇವಾ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು. 7 ದಿನಗಳಲ್ಲಿ ನಡೆಯುವ ಭಜನೆ, 5 ದಿನಗಳಲ್ಲಿ ನಡೆಯುವ ರಥೋತ್ಸವ, ಅಲಂಕಾರ, ಉಟೋಪಚಾರ, ಕಾರ್ಯಕ್ರಮದ ಯಶಸ್ವಿಗೆ ವಿವಿಧ ಗ್ರಾಮದ ಪ್ರಮುಖರಿಗೆ ಜವಾಬ್ದಾರಿ ಹಂಚಲಾಯಿತು. ಬಳಿಕ ಸ್ವಾಮೀಜಿ ಆಶೀರ್ವಚನ ನೀಡಿದರು.

ಟ್ರಸ್ಟಿ ತುಕಾರಾಮ ಸಾಲಿಯಾನ್ ನಿರೂಪಿಸಿದರು. ಶ್ರೀನಿವಾಸ್ ರಾವ್, ತಿಮ್ಮಪ್ಪ ಗೌಡ ಬೆಳಾಲು, ಪ್ರಶಾಂತ್ ಪಾರೆಂಕಿ, ಪುರುಷೋತ್ತಮ ಧರ್ಮಸ್ಥಳ, ಪ್ರೀತಂ ಡಿ., ಮನೋಹರ್ ರಾವ್, ಅಣ್ಣಿ ಪೂಜಾರಿ, ಜಯಶಂಕರ್ ಉಜಿರೆ, ಕೃಷ್ಣಪ್ಪ ಗುಡಿಗಾರ್, ಜಾರಪ್ಪ ಪೂಜಾರಿ ಬೆಳಾಲು ಗಂಗಾಧರ ಸಾಲಿಯಾನ್ ಬೆಳಾಲು, ದಯಾನಂದ ಪಿ. ಬೆಳಾಲು, ಸೋಮನಾಥ್ ಧರ್ಮಸ್ಥಳ, ಸಚಿನ್, ಸುನಿಲ್ ಕನ್ಯಾಡಿ, ಪ್ರವೀಣ್ ಆರ್ಲ, ಅಣ್ಣಿ ಗೌಡ, ಸುಜಾತಾ ಅಣ್ಣಿ ಪೂಜಾರಿ, ಸುದರ್ಶನ್ ಕನ್ಯಾಡಿ, ರಾಘವೇಂದ್ರ, ಸಚಿನ್ ಧರ್ಮಸ್ಥಳ,ಮೋಹನ ಪೂಜಾರಿ ಮಾಯ,ಕ್ಷೇತ್ರದ ಭಕ್ತರು, ಸಿಬ್ಬಂದಿ ಹಾಜರಿದ್ದರು.

ಪುತ್ತೂರು ವಾರ್ಷಿಕ ಜಾತ್ರೋತ್ಸವ ಗೊನೆ ಮುಹೂರ್ತ:

ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ವಾರ್ಷಿಕ ಜಾತ್ರೋತ್ಸ ೧೦ರಿಂದ 19ರ ತನಕ ವೈಭವದಿಂದ ನಡೆಯಲಿದ್ದು, ಜಾತ್ರೋತ್ಸವದ ಪ್ರಯುಕ್ತ ಗೊನೆ ಮುಹೂರ್ತ ಕಾರ್ಯಕ್ರಮ ಸೋಮವಾರ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆಯಿತು.

ಬೆಳಗ್ಗೆ ಪೂರ್ವಶಿಷ್ಟ ಸಂಪ್ರದಾಯದಂತೆ ದೇವಳದ ಸತ್ಯಧರ್ಮ ನಡೆಯಲ್ಲಿ ಪ್ರಾರ್ಥನೆ ಸಲ್ಲಿಸಿ, ಬಳಿಕ ವಾದ್ಯಗಳೊಂದಿಗೆ ತೆರಳಿ ಗೊನೆ ಮುಹೂರ್ತ ನೆರವೇರಿಸಲಾಯಿತು. ದೇವಳದ ಪ್ರಧಾನ ಅರ್ಚಕ ವೇ.ಮೂ. ವಿ.ಎನ್.ಭಟ್ ಹಾಗೂ ಇನ್ನೋರ್ವ ಪ್ರಧಾನ ಅರ್ಚಕ ವಸಂತ ಕೆದಿಲಾಯ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು.

ಶಾಸಕ ಅಶೋಕ್ ಕುಮಾರ್ ರೈ, ದೇವಳದ ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಅಧ್ಯಕ್ಷ ಮುಳಿಯ ಕೇಶವ ಪ್ರಸಾದ್, ನಗರಸಭಾ ಸದಸ್ಯ ಪಿ.ಜಿ. ಜಗನ್ನಿವಾಸ್ ರಾವ್ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!