ಮಂಗಳೂರು: ಪಂಡರಪುರದ ಚೈತನ್ಯ ಸದ್ಗುರು ಹರಿಪ್ರಸಾದ ಶರದಸ್ವಾಮಿ ಶಿವೂರಕರ ನೇತೃತ್ವ ಮತ್ತು ಬ್ರಹ್ಮನಾಂದ ಸರಸ್ವತಿಜೀ ಮಹಾರಾಜ ಸ್ವಾಮೀಜಿ ಸಾನಿಧ್ಯದಲ್ಲಿ ಶ್ರೀ ಗ್ರಂಥರಾಜ ಜ್ಞಾನೇಶ್ವರಿಯ ಸಾಮುದಾಯಿಕ ಪಾರಾಯಣ ಹಾಗೂ ಅಖಂಡ ಹರಿನಾಮ ಸಪ್ತಾಹ ಕನ್ಯಾಡಿಯಲ್ಲಿ ಜೂ. 7ರಿಂದ 13ರವರೆಗೆ ನಡೆಯಲಿದೆ ಎಂದು ಪಾರಾಯಣ ಸೇವಾ ಸಮಿತಿಯ ಅಧ್ಯಕ್ಷ ಆರ್.ಟಿ. ಪಾಟೀಲ ತಿಳಿಸಿದರು.ಅವರು ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಧರ್ಮಸ್ಥಳದ ನಿತ್ಯಾನಂದ ನಗರ ಕನ್ಯಾಡಿಯ ಶ್ರೀ ರಾಮ ಕ್ಷೇತ್ರದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಜೂ. 7ರಂದು ಬೆಳಗ್ಗೆ 7 ಗಂಟೆಗೆ ಗ್ರಂಥರಾಜ ಜ್ಞಾನೇಶ್ವರೀ ಬಿಡುಗಡೆ ನಡೆಯಲಿದೆ. ಪ್ರತಿದಿನ ಪ್ರಾತಃಕಾಲ 4.30ರಿಂದ 6ರವರೆಗೆ ಕಾಕಡಾರತಿ, ಬೆಳಗ್ಗೆ 7ರಿಂದ 11ರ ವರೆಗೆ ಸಾಮೂದಾಯಿಕ ಪಾರಾಯಣ, 11ರಿಂದ 1ರ ವರೆಗೆ ಕೀರ್ತನೆ, ಸಂಜೆ 4.30ರಿಂದ 6ರ ವರೆಗೆ ಪ್ರವಚನ ಮತ್ತು ನಾಮಜಪ, ರಾತ್ರಿ 7ರಿಂದ 9ರ ವರೆಗೆ ಕೀರ್ತನೆ, ರಾತ್ರಿ 11ರಿಂದ 1 ಗಂಟೆಯವರೆಗೆ ಜಾಗರಣೆ ನಡೆಯಲಿದೆ ಎಂದರು.
ಮಹಾಮಂಡೇಶ್ವರ 1008 ಶ್ರೀ ಸ್ವಾಮಿಸದ್ಗುರು ಬ್ರಹ್ಮಾನಂದ ಸರಸ್ವತಿಜೀ ಮಹಾರಾಜ, ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದರು, ಕೊಂಡೆಯುರು ಮಠದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ, ಆರ್‌ಎಸ್‌ಎಸ್‌ನ ಸುಬ್ಬರಾಯ ನಂದೋಡಿ, ನ.ಸೀತಾರಾಮ್, ಡಾ.ವಾಮನ ಶೆಣೈ, ವೆಂಕಟೇಶ್ವರ ಮಹಾರಾಜ ತೊಂಡಿಕಟ್ಟಿ ಮೊದಲಾದವರು ವಿಶೇಷ ಪ್ರವಚನಕಾರಾಗಿ ಭಾಗವಹಿಸುವರು.
ಪಂಡರಪುರದ 720 ವರ್ಷಗಳ ಹಳೆಯ ವಾರ್ಖರಿ ಸಂಪ್ರದಾಯವನ್ನು ದಕ್ಷಿಣ ಭಾಗಗಳಿಗೆ ಪರಿಚಯ ಮಾಡಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ ಎಂದರು. ಚೈತನ್ಯ ಸದ್ದುರು ಹರಿಪ್ರಸಾದ ಮಹಾರಾಜ, ನಾರಾಯಣ ಬಿ.ಸಿ., ಕೆಂಜರಡ್ಡಿ, ವಿನೋದ್ ಕುಮಾರ್, ರಮೇಶ್ ಇದ್ದರು.