ಕುದೂರು: ಹದಿನಾರು ಹಳ್ಳಿಯ ಜನರು ರಾಜ್ಯದ ಯಾವುದೇ ಮೂಲೆಯಲ್ಲಿದ್ದರೂ ಕರಡಿಗುಚ್ಚಮ್ಮ ಜಾತ್ರೆಗೆ ಆಗಮಿಸಿ ಸಂಭ್ರಮಿಸುತ್ರಾರೆ. ಊರಿಗೇ ಊರೇ ಉತ್ಸಾಹದಿಂದ ನೆರೆದು ತಮ್ಮ ಭಕ್ತಿ ಸಮರ್ಪಿಸುವ ಜನಸ್ತೋಮವನ್ನು ನೋಡುವುದೆ ಚಂದ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿದರು.
ಕಳ್ಳಿಪಾಳ್ಯದ ಮುನೇಶ್ವರ ಸ್ವಾಮಿ ದೇವಾಲಯದ ಶ್ರೀರಂಗನಾಥ ಸ್ವಾಮೀಜಿ ಮಾತನಾಡಿ, ಹೊರಗಡೆ ಆಡಂಬರ ಇದ್ದರೂ ಒಳಗೆ ಸರಳವಾಗಿರಬೇಕು. ಭಗವಂತ ಭಕ್ತಿ ಪ್ರಿಯನೇ ಹೊರತು ಹೊಗಳು ಭಟ್ಟಂಗಿಗಳ, ಸಿರಿವಂತಿಕೆ ದೌಲತ್ತಿಗೆ ಒಲಿಯುವವನಲ್ಲ. ಆದ್ದರಿಂದ ಜಾತ್ರೆ ಸಂಭ್ರಮದಿಂದ ಕೂಡಿರಬೇಕೆ ಹೊರತು ಅದು ನಮಗಳಿಗೆ ವಿಲಾಸದಂತೆ ಗೋಚರಿಸಬಾರದು ಎಂದು ಹೇಳಿದರು.
ಪಾಲನಹಳ್ಳೀ ಮಠದ ಶ್ರೀ ಸಿದ್ದರಾಜ ಸ್ವಾಮೀಜಿ ಮಾತನಾಡಿ, ಎತ್ತಿನ ಬಂಡಿಗಳಿಗೆ ಬಣ್ಣಗಳಿಂದ ಸಿಂಗಾರ ಮಾಡಿ ಬುರುಜು ಕಟ್ಟಿಕೊಂಡು ವಯಸ್ಸಿನ ಅಂತರವನ್ನು ಮರೆದು ಕುಣಿದು ಕುಪ್ಪಳಿಸಿ ಆನಂದಿಸುವ ಆನಂದಕ್ಕೆ ಎಷ್ಟು ಬೆಲೆ ಕಟ್ಟಲು ಸಾಧ್ಯವಾಗುತ್ತದೆ ಹೇಳಿ. ಮನುಷ್ಯ ಒಮ್ಮೊಮ್ಮೆ ಹೀಗೆ ಆನಂದದ ದಾರಿ ಹಿಡಿದು ಸಾಗಬೇಕು. ಅಂತಹ ಹಾದಿಗಳು ಜಾತ್ರೆ, ಸಂತೆ, ದೇವಾಲಯ, ಪ್ರಕೃತಿ ಮಡಿಲಿನಲ್ಲಿ ಸಿಗುತ್ತದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಶಾಸಕ ಎಚ್.ಸಿ.ಬಾಲಕೃಷ್ಣ ಬುರುಜು ಕಟ್ಟಿದ್ದ ಎತ್ತಿನ ಗಾಡಿಗಳನ್ನು ಓಡಿಸಿ ಸಂಭ್ರಮಿಸಿದರು.
3.ಕರಡಿಗುಚ್ಚಮ್ಮನ ಜಾತೆಯಲ್ಲಿ ಶಾಸಕ ಎಚ್.ಸಿ.ಬಾಲಕೃಷ್ಣ ಎತ್ತಿನಗಾಡಿಯ ಬುರುಜು ಓಡಿಸಿ ಸಂಭ್ರಮಿಸಿದರು.
4.ಕರಡಿಗುಚ್ಚಮ್ಮ ದೇವಿಯ ಸುಂದರ ಅಲಂಕಾರ.