ಕರಂಬಳ್ಳಿ ದೇವಸ್ಥಾನ: ಯೋಧರ ಕ್ಷೇಮಕ್ಕಾಗಿ ಪ್ರಾರ್ಥನೆ

KannadaprabhaNewsNetwork |  
Published : May 10, 2025, 01:19 AM IST
9ಕರಂಬಳ್ಳಿ | Kannada Prabha

ಸಾರಾಂಶ

ಭಾರತ ಮತ್ತು ಪಾಕಿಸ್ತಾನ ದೇಶಗಳ ನಡುವೆ ಯುದ್ಧ ಪ್ರಾರಂಭವಾಗಿರುವುದರಿಂದ ದೇಶವನ್ನು ಕಾಯುವ ಯೋಧರ ಕ್ಷೇಮಕ್ಕಾಗಿ ಇಲ್ಲಿನ ಕರಂಬಳ್ಳಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆ ಆಯೋಜಿಸಲಾಗಿತ್ತು.

ಕನ್ನಡಪ್ರಭ ವಾರ್ತೆ ಉಡುಪಿ

ಭಾರತ ಮತ್ತು ಪಾಕಿಸ್ತಾನ ದೇಶಗಳ ನಡುವೆ ಯುದ್ಧ ಪ್ರಾರಂಭವಾಗಿರುವುದರಿಂದ ದೇಶವನ್ನು ಕಾಯುವ ಯೋಧರ ಕ್ಷೇಮಕ್ಕಾಗಿ ಇಲ್ಲಿನ ಕರಂಬಳ್ಳಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆ ಆಯೋಜಿಸಲಾಗಿತ್ತು.

ಈ ಸಂದರ್ಭದಲ್ಲಿ ನಗರಸಭಾ ಸದಸ್ಯ ಗಿರಿಧರ್ ಆಚಾರ್ಯ, ಅರ್ಚಕರು ನವೀನ್ ಐತಾಳ್, ಪ್ರಮುಖರಾದ ರಮೇಶ್ ಬಾರಿತ್ತಾಯ, ಎಂ. ಆರ್. ಪೈ ಅಂಬಾಗಿಲು, ಗೀತಾ ಎನ್. ಸೇರಿಗಾರ್, ಕಿಶೋರ್ ಕುಮಾರ್, ಗೋಪಾಲ್ ಪೂಜಾರಿ, ವಾಗಿಶ್ ಭಟ್, ಚಂದ್ರಶೇಖರ್ ನಾಯ್ಕ್, ಭಾಸ್ಕರ್ ಶೆಟ್ಟಿಗಾರ್, ಸಿಎ ಶ್ರೀಪತಿ ಭಟ್, ರವಿ ಪೂಜಾರಿ, ಕುಮಾರ್ ಪೂಜಾರಿ, ಗುಲಾಬಿ ಪೂಜಾರಿ, ಗಿರೀಶ್ ದೇವಾಡಿಗ ಮತ್ತು ವಿಪ್ರ ಭಜನಾ ಮಂಡಳಿಯವರು ಉಪಸ್ಥಿತರಿದ್ದರು

ಬನ್ನಂಜೆ ದೇವಳದಲ್ಲಿ ಪ್ರಾರ್ಥನೆ:

ಪಹಲ್ಗಾಮ್ ನಲ್ಲಿ ಅಮಾಯಕ ಹಿಂದೂಗಳ ಮಾರಣಹೋಮಗೈದ ಉಗ್ರರ ವಿರುದ್ಧ ‘ಆಪರೇಶನ್ ಸಿಂದೂರ್‌’ ಯಶಸ್ವಿ ಕಾರ್ಯಾಚರಣೆ ನಡೆಸಿದ ಭಾರತೀಯ ವೀರ ಯೋಧರ ಶ್ರೇಯಸ್ಸಿಗಾಗಿ ಶಾಸಕ ಯಶ್ಪಾಲ್ ಸುವರ್ಣ ಅವರ ನೇತೃತ್ವದಲ್ಲಿ ಬಿಜೆಪಿ ಉಡುಪಿ ನಗರ ಹಾಗೂ ದೇಶಾಭಿಮಾನಿಗಳ ವತಿಯಿಂದ ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯಿತು.

ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತ, ಶತ್ರು ರಾಷ್ಟ್ರ ಪಾಕಿಸ್ತಾನ ಮತ್ತು ಉಗ್ರರಿಗೆ ತಕ್ಕ ಶಾಸ್ತಿ ಮಾಡಿರುವ ಬಗ್ಗೆ ಪಟಾಕಿ ಸಿಡಿಸಿ, ಸಾರ್ವಜನಿಕರಿಗೆ ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!