ಕರಾಟೆ: ಕಾಶಿಯಲ್ಲಿ ಕರ್ನಾಟಕಕ್ಕೆ ಪದಕಗಳ ರಾಶಿ

KannadaprabhaNewsNetwork | Published : Jan 2, 2025 12:33 AM

ಸಾರಾಂಶ

ಡಿಸೆಂಬರ್ 28 ಮತ್ತು 29 ರಂದು ಉತ್ತರ ಪ್ರದೇಶದ ವಾರಾಣಸಿಯ ಬನಾರಸ್ ಹಿಂದೂ ಯುನಿವರ್ಸಿಟಿ ಇಂಡೋರ್ ಸ್ಟೇಡಿಯಂನಲ್ಲಿ ನಡೆದ 22ನೇ ಆಲ್ ಇಂಡಿಯಾ ಇಂಟರ್‌ ಸ್ಕೂಲ್ ಮತ್ತು ಸೀನಿಯರ್ ಕರಾಟೆ ಚಾಂಪಿಯನ್‌ಶಿಪ್‌ ಫೆಡರೇಷನ್ ಕಪ್ ಪಂದ್ಯಾವಳಿಯಲ್ಲಿ ಕರ್ನಾಟಕದಿಂದ ಪಾಲ್ಗೊಂಡಿದ್ದ 18 ವಿದ್ಯಾರ್ಥಿಗಳು ಪದಕಗಳ ರಾಶಿಯನ್ನೇ ಬೇಟೆಯಾಡುವ ಮೂಲಕ ರನ್ನರ್‌ ಅಪ್‌ ಪಡೆದುಕೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಡಿಸೆಂಬರ್ 28 ಮತ್ತು 29 ರಂದು ಉತ್ತರ ಪ್ರದೇಶದ ವಾರಾಣಸಿಯ ಬನಾರಸ್ ಹಿಂದೂ ಯುನಿವರ್ಸಿಟಿ ಇಂಡೋರ್ ಸ್ಟೇಡಿಯಂನಲ್ಲಿ ನಡೆದ 22ನೇ ಆಲ್ ಇಂಡಿಯಾ ಇಂಟರ್‌ ಸ್ಕೂಲ್ ಮತ್ತು ಸೀನಿಯರ್ ಕರಾಟೆ ಚಾಂಪಿಯನ್‌ಶಿಪ್‌ ಫೆಡರೇಷನ್ ಕಪ್ ಪಂದ್ಯಾವಳಿಯಲ್ಲಿ ಕರ್ನಾಟಕದಿಂದ ಪಾಲ್ಗೊಂಡಿದ್ದ 18 ವಿದ್ಯಾರ್ಥಿಗಳು ಪದಕಗಳ ರಾಶಿಯನ್ನೇ ಬೇಟೆಯಾಡುವ ಮೂಲಕ ರನ್ನರ್‌ ಅಪ್‌ ಪಡೆದುಕೊಂಡಿದ್ದಾರೆ.

ದೆಹಲಿ, ಪಶ್ಚಿಮ ಬಂಗಾಳ, ಹರ್ಯಾಣ, ಆಸ್ಸಾಂ, ಮಣಿಪುರ, ಜಾರ್ಖಂಡ್, ಬಿಹಾರ, ತಮಿಳುನಾಡು, ಪಂಜಾಬ್ ಸೇರಿದಂತೆ 17 ರಾಜ್ಯಗಳಿಂದ ಸುಮಾರು 2500ಕ್ಕೂ ಹೆಚ್ಚು ಕರಾಟೆ ಪಟುಗಳ ಪಾಲ್ಗೊಂಡಿದ್ದರು. ಕರ್ನಾಟಕದ ಕರಾಟೆ ಪಟುಗಳು ಕಟಾ ಮತ್ತು ಕುಮಿಟೆ ವಿಭಾಗಗಳಲ್ಲಿ ಸ್ಪರ್ಧಿಸಿ 8 ಚಿನ್ನದ ಪದಕ, 12 ಬೆಳ್ಳಿ ಪದಕ ಹಾಗೂ 09 ಕಂಚು ಒಟ್ಟು 29 ಪದಕಗಳನ್ನು ಬಾಚಿಕೊಳ್ಳುವ ಮೂಲಕ ಚಾಂಪಿಯನ್‌ಶಿಪ್‌ನಲ್ಲಿ ರನ್ನರ್ ಅಪ್ ಪ್ರಶಸ್ತಿಯನ್ನು ಕರ್ನಾಟಕ ತಂಡ ಪಡೆದುಕೊಂಡಿದೆ.

ಕರ್ನಾಟಕದ ವಿದ್ಯಾರ್ಥಿಗಳ ಸಾಧನೆಗೆ ಭಾರತದ ಡಬ್ಲ್ಯುಕೆಎಫ್‌ ಮುಖ್ಯ ರೇಫ್ರಿ ಹಾನ್ಸಿ ಪ್ರೇಮಜಿತ್ ಸೇನ್, ನಾರ್ಥ್‌ ಇಂಡಿಯಾ ಕರಾಟೆ ಅಸೋಸಿಯೇಷನ್ ಅಧ್ಯಕ್ಷ ಹಾನ್ಸಿ ರಜನಿಶ್ ಚೌಧರಿ, ಬಾಗಲಕೋಟೆ ಶಾಸಕ ಎಚ್.ವೈ ಮೇಟಿ, ಜಿಲ್ಲಾಧಿಕಾರಿ ಜಾನಕಿ ಕೆ.ಎಂ, ಜಿಪಂ ಸಿಇಒ ಶಶಿಧರ ಕುರೇರ, ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಜಿ.ಜಿ ಡೂಗನವರ, ಮೇಲ್ವಿಚಾರಕ ರಂಗಪ್ಪ ಕ್ಯಾಲಕೊಂಡ, ಕ್ರೀಡಾ ಇಲಾಖೆಯ ಸಿಬ್ಬಂದಿ ವರ್ಗ ಹಾಗೂ ಪಾಲಕರು ಮೆಚ್ಚುಗೆ ವ್ಯಕ್ತಪಡಿಸಿ ಸಾಧಕರಿಗೆ ಅಭಿನಂದಿಸಿದ್ದಾರೆ ಎಂದು ರಾಜ್ಯದ ಮುಖ್ಯ ಕೋಚ್ ಎಸ್.ಆರ್.ರಾಠೋಡ ತಿಳಿಸಿದ್ದಾರೆ. ಚಾಂಪಿಯನ್‌ಶಿಪ್‌ನಲ್ಲಿ ಪದಕಗಳನ್ನು ಜಯಿಸಿ ತಾಯ್ನಾಡಿಗೆ ಬಂದಿಳಿದ ವಿದ್ಯಾರ್ಥಿಗಳನ್ನು ಬಾಗಲಕೋಟೆ ರೈಲ್ವೆ ನಿಲ್ದಾಣದಲ್ಲಿ ಅದ್ಧೂರಿಯಾಗಿ ಕರಾಟೆ ಅಭಿಮಾನಿಗಳು ಹಾಗೂ ಪಾಲಕರು ಸ್ವಾಗತಿಸಿದರು. ಪದಕ ಪಡೆದ ಕ್ರೀಡಾಪಟುಗಳು:

ಮಹಮ್ಮದ್ ಮಾಜ್ ಗಲಗಲಿ (2 ಚಿನ್ನ), ಆನಂದ ನಾಯ್ಕ್ (ಚಿನ್ನ ಮತ್ತು ಬೆಳ್ಳಿ), ಶ್ರೇಯಸ್‌ ನಾಗರವಳ್ಳಿ (ಚಿನ್ನ ಮತ್ತು ಬೆಳ್ಳಿ), ಅರುಣ ಧನ್ನೂರ (ಚಿನ್ನ ಮತ್ತು ಬೆಳ್ಳಿ), ಪ್ರಭುಸ್ವಾಮಿ ಆರಾಧ್ಯಮಠ (ಚಿನ್ನ ಮತ್ತು ಕಂಚು), ಸಾಗರ ಚವ್ಹಾಣ (ಚಿನ್ನ), ಪ್ರಜ್ವಲ ರಾಠೋಡ (ಚಿನ್ನ), ಸಾತ್ವಿಕ ಶೇಬನ್ನವರ (2 ಬೆಳ್ಳಿ), ಸಾಗರಕುಮಾರ ಮರಕುಂಬಿ (ಬೆಳ್ಳಿ ಮತ್ತು ಕಂಚು), ರಾಮಕೃಷ್ಣ ದಾಸರ (ಬೆಳ್ಳಿ ಮತ್ತು ಕಂಚು), ಸಾಯಿಪ್ರಸಾದ ಪೂಜಾರಿ (ಬೆಳ್ಳಿ ಮತ್ತು ಕಂಚು), ಶರಣಗೌಡ ಪಾಟೀಲ (ಬೆಳ್ಳಿ), ಕರಣ ರಾಠೋಡ (ಬೆಳ್ಳಿ), ಅಕ್ಷಿತ ರಾಠೋಡ (ಬೆಳ್ಳಿ), ಜಯಂತ ಗೋರಗುಂಡಗಿ (ಬೆಳ್ಳಿ), ಈಶ್ವರಯ್ಯ ಗುರುಶಾಂತನವರ (2 ಕಂಚು), ತನ್ಮಯ ರಾವ್ (2 ಕಂಚು), ಯಶವಂತ ನಾಯಕ (2 ಕಂಚು) ಪಡೆದಿದ್ದಾರೆ. ಪಂದ್ಯಾವಳಿಯಲ್ಲಿ ಕರ್ನಾಟಕದಿಂದ ರೇಫ್ರಿಯಾಗಿ ಚೀಫ್‌ ಕೋಚ್ ಎಸ್.ಆರ್ ರಾಠೋಡ, ಶಾಂತು ಚವ್ಹಾಣ, ಸಾಗರಕುಮಾರ ಮರಕುಂಬಿ, ರಾಮಕೃಷ್ಣ ದಾಸರ ಮತ್ತು ಆನಂದ ನಾಯ್ಕ ಭಾಗವಹಿಸಿದ್ದರು.

Share this article