ಕೊಳ್ಳೇಗಾಲ: ಪಟ್ಟಣದ ಹೋಟೆಲ್‌ಗಳಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆಯ (ಪ್ರವೀಣ್ ಶೆಟ್ಟಿ ಬಣದ) ಕಾರ್ಯಕರ್ತರು ಸೋಮವಾರ ನಗರಸಭೆ ಆರೋಗ್ಯಾಧಿಕಾರಿಗಳಿಗೆ ಲಿಖಿತ ಮನವಿ ಸಲ್ಲಿಸಿದರು.
ನಗರಸಭೆ ಆಯುಕ್ತರು ಈ ಸಂಬಂಧ ಗಮನಹರಿಸಬೇಕು, ಕೊಳ್ಳೇಗಾಲದ ಅನೇಕ ಹೋಟೆಲ್‌ಗಳಲ್ಲಿ ಪ್ಲಾಸ್ಟಿಕ್ ಕವರ್‌ನಲ್ಲಿ ಬಿಸಿ ತಿಂಡಿಯನ್ನು ಪ್ಯಾಕ್ ಮಾಡಲಾಗುತ್ತಿದೆ. ಇದು ಅನಾರೋಗ್ಯಕ್ಕೆ ಕಾರಣವಾಗುತ್ತಿದ್ದು ಸರ್ಕಾರ ಪ್ಲಾಸ್ಟಿಕ್ ನಿಷೇಧ ಮಾಡಿದ್ದರೂ ಕೂಡ ಪ್ಲಾಸ್ಟಿಕ್ ಬಳಕೆ ಮಾಡಿ ಬಿಸಿ ತಿಂಡಿ ಹಾಕಲಾಗುತ್ತಿದೆ. ಆರೋಗ್ಯ ಇಲಾಖೆಯ ಅಧಿಕಾರಿಗಳು , ನಗರಸಭೆ, ತಾಲೂಕು ಆಡಳಿತ ಈ ಸಂಬಂಧ ತಕ್ಷಣವೇ ಹೋಟೆಲ್‌ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಲೈಸೆನ್ಸ್ ಹಾಗೂ ಫುಡ್ ಸರ್ಟಿಫಿಕೇಟ್ ಇಲ್ಲದ ಹೋಟೆಲ್‌ಗಳನ್ನು ರದ್ದು ಮಾಡಬೇಕು ಮತ್ತು ಪ್ಲಾಸ್ಟಿಕ್ ಬಳಕೆಯ ಕುರಿತಾಗಿ ಕಾನೂನು ಅರಿವು ಮೂಡಿಸಿ ಬಳಿಕ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಕರವೇ( ಪ್ರವೀಣ್ ಶೆಟ್ಟಿ ಬಣದ) ಜಿಲ್ಲಾ ಉಪಾಧ್ಯಕ್ಷರು ಸೆಮೀ ಷರೀಪ್, ತಾಲೂಕು ಉಪಾಧ್ಯಕ್ಷ ರವಿಕುಮಾರ್ ಹೊಸಹಂಪಾಪುರ, ಯೂನಸ್ ಪಾಷ, ಹೊಸ ಹಂಪಾಪುರ ಗ್ರಾಮ ಘಟಕ ಉಪಾಧ್ಯಕ್ಷ ಶ್ರೀಧರ್, ಚಂದನ್, ಸಿದ್ದರಾಜು ದೊಡ್ಡಿಂದುವಾಡಿ, ಪ್ರಜ್ವಲ್ ಇನ್ನಿತರಿದ್ದರು.