ಕನ್ನಡಪ್ರಭ ವಾರ್ತೆ ಮುಂಡಗೋಡ
ಬಸ್ ಘಟಕದ ಆವರಣ ಕಾಂಕ್ರೀಟಿಕರಣಗೊಳ್ಳದೆ ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ಮಳೆಗಾಲದಲ್ಲಂತೂ ಕೊಳಚೆ ಗುಂಡಿಯಂತಾಗುತ್ತದೆ. ಕ್ರೇನ್ ಮೂಲಕ ವಾಹನಗಳನ್ನು ಘಟಕದಿಂದ ಹೊರತರುವ ಸ್ಥಿತಿ ಎದುರಾಗಲಿದೆ. ಈ ಹಿನ್ನೆಲೆ ಇಲ್ಲಿಯ ಅವರಣವನ್ನು ಸಂಪೂರ್ಣವಾಗಿ ಕಾಂಕ್ರೀಟಿಕರಣಗೊಳಿಸಿ ವಾಹನಗಳ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಡಬೇಕು.
ಘಟಕದಿಂದ ಈಗ ಹಲವು ಮಾರ್ಗಗಳಲ್ಲಿ ಸಂಚರಿಸಲು ಯಲ್ಲಾಪುರ, ಹಾನಗಲ್, ಸಿರಸಿ ಸೇರಿದಂತೆ ಸುತ್ತಮುತ್ತಲ ಘಟಕದ ಸುಮಾರು ೧೧ ಹಳೆಯ ಬಸ್ ಒದಗಿಸಲಾಗಿದ್ದು, ಈ ಹಳೆಯ ಬಸ್‌ಗಳು ಅಲ್ಲಲ್ಲಿ ಕೆಟ್ಟು ನಿಲ್ಲುತ್ತಿದ್ದು, ದುರಸ್ತಿಗೆ ಒಳಗಾಗುತ್ತಿವೆ. ಇದರಿಂದ ಪ್ರಯಾಣಿಕರ ಸಂಚಾರ ದುಸ್ತರವಾಗುತ್ತಿದೆ. ಕನಿಷ್ಠ ೨೦ ಹೊಸ ಬಸ್‌ಗಳನ್ನು ಮುಂಡಗೋಡ ಘಟಕಕ್ಕೆ ಒದಗಿಸಬೇಕು.ಪಟ್ಟಣದ ಬಸ್ ನಿಲ್ದಾಣಕ್ಕೆ ಅವಶ್ಯವಿರುವ ನಿಲ್ದಾಣಾಧಿಕಾರಿ ನೇಮಿಸಲು ಸೂಕ್ತ ಕ್ರಮ ಕೈಗೊಳ್ಳಬೇಕಲ್ಲದೆ, ಬಸ್ ಘಟಕಕ್ಕೆ ಅತೀ ಅವಶ್ಯವಿರುವ ವಾಹನ ನಿರೀಕ್ಷಕರನ್ನು ವಿಳಂಬಕ್ಕೆ ಅವಕಾಶವಿಲ್ಲದಂತೆ ಹುದ್ದೆ ಮಂಜೂರಾತಿಗೆ ಅನುಗುಣವಾಗಿ ನೇಮಿಸಬೇಕು. ಅಲ್ಲದೇ ಮುಂಡಗೋಡ ವಾಹನ ನಿಲ್ದಾಣದಲ್ಲಿರುವ ಶೌಚಾಲಯಗಳ ಸಮರ್ಪಕ ನಿರ್ವಹಣೆ ಇಲ್ಲದ ಕಾರಣ ಗಬ್ಬೆದ್ದು ನಾರುತ್ತಿವೆ. ಹೊಸದಾಗಿ ಅಭಿವೃದ್ಧಿಯತ್ತ ಹೆಜ್ಜೆ ಹಾಕುತ್ತಿರುವ ಮುಂಡಗೋಡ ಸಾರಿಗೆ ಬಸ್ ಘಟಕಕ್ಕೆ ಅಗತ್ಯವಾದ ಅನೂಕೂಲತೆಗಳನ್ನು ಕಲ್ಪಿಸಲು ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ತಾಲೂಕಿನ ಜನತೆಗೆ ಹಾಗೂ ಪ್ರಯಾಣಿಕರ ನೆರವಿಗೆ ಧಾವಿಸುವಂತೆ ವಿನಂತಿಸಲಾಗಿದೆ.
ಈ ಸಂದರ್ಭ ಕರವೇ ಸ್ವಾಭಿಮಾನಿ ಸೇನೆ ಜಿಲ್ಲಾಧ್ಯಕ್ಷ ಜಗದೀಶ ದೈವಜ್ಞ, ಎ.ಎಸ್. ವಾದಿರಾಜ, ರಾಮು ಗೌಳಿ, ವಿರುಪಾಕ್ಷಿ ಸಾಗರ, ಬಸವರಾಜ ಕಾಳೆ, ಈರಪ್ಪ ಕುರುಬರ, ದುರ್ಗಪ್ಪ ಬೋವಿ, ಮಾರುತಿ ಬೋವಿ, ರಾಜೇಶ ಸುಣಗಾರ, ಮಲ್ಲಪ್ಪ ಮಿಶ್ರಿಕೋಟಿ, ಪ್ರಕಾಶ ಕೆರೆಹೊಲ್ದವರ, ಅರುಣ, ಹಜರತಖಾನ ಪಠಾಣ, ರಾಜೇಸಾಬ ಕಾಪೆಂಟರ್ ಮುಂತಾದವರಿದ್ದರು.