ಬೆಳಗಾವಿ ಜಿಲ್ಲಾಸ್ಪತ್ರೆಗೆ ಭೇಟಿ ಬಸ್ ನಿರ್ವಾಹಕ ಯೋಗಕ್ಷೇಮ ವಿಚಾರಿಸಿದ ಕರವೇ ಸ್ವಾಭಿಮಾನಿ ಸೇನೆ

KannadaprabhaNewsNetwork |  
Published : Feb 27, 2025, 02:02 AM ISTUpdated : Feb 27, 2025, 01:06 PM IST
ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಿರ್ವಾಹಕ ಮಹಾದೇವಪ್ಪ ಅವರನ್ನು ಕರವೇ ಸ್ವಾಭಿಮಾನಿ ಸೇನೆ ಪದಾಧಿಕಾರಿಗಳು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. | Kannada Prabha

ಸಾರಾಂಶ

ಕರವೇ ಸ್ವಾಭಿಮಾನಿ ಸೇನೆ ಖಾನಾಪುರ ತಾಲೂಕು ಸಮಿತಿಯ ಪದಾಧಿಕಾರಿಗಳು ಬುಧವಾರ ಬೆಳಗಾವಿ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ, ಇತ್ತೀಚಿಗೆ ಹಲ್ಲೆಗೊಳಗಾದ ಬೆಳಗಾವಿ ನಗರ ಸಾರಿಗೆ ನಿರ್ವಾಹಕರಾದ ಮಹದೇವಪ್ಪ ಹಾಗೂ ಬಸ್ ಚಾಲಕರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದರು.  

 ಖಾನಾಪುರ : ಕರವೇ ಸ್ವಾಭಿಮಾನಿ ಸೇನೆ ಖಾನಾಪುರ ತಾಲೂಕು ಸಮಿತಿಯ ಪದಾಧಿಕಾರಿಗಳು ಬುಧವಾರ ಬೆಳಗಾವಿ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ, ಇತ್ತೀಚಿಗೆ ಹಲ್ಲೆಗೊಳಗಾದ ಬೆಳಗಾವಿ ನಗರ ಸಾರಿಗೆ ನಿರ್ವಾಹಕರಾದ ಮಹದೇವಪ್ಪ ಹಾಗೂ ಬಸ್ ಚಾಲಕರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದರು. ಸಂಘಟನೆಯ ತಾಲೂಕು ಸಮಿತಿಯ ಅಧ್ಯಕ್ಷ ಶ್ರವಣ ಲಮಾಣಿ ಹಾಗೂ ಕಾರ್ಯಕರ್ತರು ಬಸ್ ನಿರ್ವಾಹಕ ಮಹಾದೇವಪ್ಪ ಬೇಗ ಚೇತರಿಸಿಕೊಳ್ಳುವಂತೆ ಕನ್ನಡಾಂಬೆಯಲ್ಲಿ ಪ್ರಾರ್ಥಿಸಿದರು.  

ಶ್ರವಣ ಲಮಾಣಿ ಮಾತನಾಡಿ, ಕನ್ನಡದಲ್ಲಿ ಮಾತನಾಡಿದ್ದಕ್ಕೆ ನಿರ್ವಾಹಕರ ಮೇಲೆ ಹಲ್ಲೆ ಮಾಡಿರುವುದು ಖಂಡನೀಯ, ಬೆಳಗಾವಿ ಜಿಲ್ಲೆ ಸೇರಿದಂತೆ ರಾಜ್ಯದ ಗಡಿಯುದ್ದಕ್ಕೂ ಮರಾಠಿ ಭಾಷಿಕರೊಂದಿಗೆ ಕನ್ನಡಿಗರು ಸೌಹಾರ್ದ ಮನೋಭಾವನೆಯಿಂದ ಬಾಳುತ್ತಿದ್ದಾರೆ. ಆದರೆ, ಕೆಲವು ಕಿಡಿಗೇಡಿಗಳು ಅನವಶ್ಯಕವಾಗಿ ಗೊಂದಲ ಸೃಷ್ಟಿ ಮಾಡಿ, ಮಹಾರಾಷ್ಟ್ರ ಹಾಗೂ ಕರ್ನಾಟಕ ರಾಜ್ಯದ ಗಡಿ ವಿವಾದವನ್ನು ಜೀವಂತವಾಗಿಟ್ಟುಕೊಳ್ಳಲು ನೋಡುತ್ತಿದ್ದಾರೆ ಎಂದು ಕಿಡಿಕಾರಿದರು.

ಈ ಸಂದರ್ಭದಲ್ಲಿ ಮಂಜುನಾಥ ಉಪಾಸಿ, ಡಿಲಾವರ್ ಗೋರಿ, ರಿಯಾನ ತೇಲಗಿ, ಸುನಿಲ್ ಗಾಡಗಿಕೊಪ್ಪ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈಲ್ವೆ ಪರೀಕ್ಷೆಯಲ್ಲಿ ಮತ್ತೆ ಕನ್ನಡಕ್ಕೆ ಕೊಕ್
ಓಡಿ ಹೋದ ಹೇಡಿ ಎನಿಸಿಕೊಳ್ಳುವುದಿಲ್ಲ. ಅಲ್ಲೇ ರಾಜಕೀಯ ಅಸ್ತಿತ್ವ ಕಂಡುಕೊಳ್ಳುತ್ತೇನೆ : ನಿಖಿಲ್‌