ಪುರಸಭೆ ಖಾಲಿ ನಿವೇಶನ ನೀಡುವಂತೆ ಕರವೇ ಮನವಿ

KannadaprabhaNewsNetwork |  
Published : Jul 27, 2024, 12:50 AM IST
ಪೊಟೋ-ಪಟ್ಟಣದಲ್ಲಿನ ಪುರಸಭೆಯ ಖಾಲಿ ಜಾಗೆಯನ್ನು ವಿವಿಧ ಹಿಂದುಳಿದ ಸಮುದಾಯಗಳಿಗೆ ನೀಡಬೇಕು ಎಂದು ಕರವೇ ಸಂಗಟನೆಯ ಸದಸ್ಯರು ಪುರಸಭೆಯ ಮುರ್ಖಐಆಧಿಕಾಗ್ಳಿಗೆ ಮನವಿ ಸಲ್ಲಿಸಿದರು/  | Kannada Prabha

ಸಾರಾಂಶ

ಪುರಸಭೆಯ ಅಧಿಕಾರಿಗಳು ಈ ಕುರಿತು ಸೂಕ್ತ ನಿರ್ದೇಶನ ತೆಗೆದುಕೊಂಡು 3 ದಿನದಲ್ಲಿ ನಮಗೆ ಮಾಹಿತಿ ನೀಡಬೇಕು

ಲಕ್ಷ್ಮೇಶ್ವರ: ಪಟ್ಟಣದಲ್ಲಿ ಹಲವಾರು ದಶಕಗಳಿಂದ ವಾಸ ಮಾಡುತ್ತಿರುವ ವಿವಿಧ ಸಮುದಾಯಗಳ ಜನರ ಅಭಿವೃದ್ಧಿಯ ಹಿತದೃಷ್ಟಿಯಿಂದ ಪುರಸಭೆಯ ಒಡೆತನದಲ್ಲಿಯ ಖಾಲಿ ನಿವೇಶನ ನೀಡುವ ಮೂಲಕ ಅವರ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಲಕ್ಷ್ಮೇಶ್ವರ ತಾಲೂಕು ಕರವೇ ಪ್ರವೀಣಶೆಟ್ಟಿ ಬಣದ ಅಧ್ಯಕ್ಷ ಮಹೇಶ ಕಲಘಟಗಿ ಪುರಸಭೆಯ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದರು.

ಪಟ್ಟಣದಲ್ಲಿ ವಿವಿಧ ಸಮುದಾಯಗಳ ಜನರು ವಾಸ ಮಾಡುತ್ತಿದ್ದು, ಹಲವು ಸಮುದಾಯಗಳ ಜನರು ತೀರಾ ಹಿಂದುಳಿಂದ ವರ್ಗಕ್ಕೆ ಸೇರಿದ ಜನರಾಗಿದ್ದು, ಒಂದು ಹೊತ್ತಿನ ಊಟಕ್ಕೂ ಪರದಾಡುವಂತ ಸ್ಥಿತಿ ಇದೆ. ಇಂತಹ ಸಣ್ಣ ಸಮುದಾಯಗಳ ಹಾಗೂ ಇತರೇ ಸುಮಾರು 40ಕ್ಕೂ ಹೆಚ್ಚು ಸಮುದಾಯಗಳಿಗೆ ಪುರಸಭೆಯ ವ್ಯಾಪ್ತಿಯಲ್ಲಿನ ಜಾಗೆಯಲ್ಲಿ ಖಾಲಿ ನಿವೇಶನ ಹಾಗೂ ಮಳಿಗೆ ನೀಡುವುದರಿಂದ ಆ ಸಮುದಾಯಗಳ ಸಮಾಜದ ಮುಖ್ಯವಾಹಿನಿಗೆ ಬರಲು ನೆರವಾಗುತ್ತದೆ, ಆದ್ದರಿಂದ ಪುರಸಭೆಯ ಅಧಿಕಾರಿಗಳು ಈ ಕುರಿತು ಸೂಕ್ತ ನಿರ್ದೇಶನ ತೆಗೆದುಕೊಂಡು 3 ದಿನದಲ್ಲಿ ನಮಗೆ ಮಾಹಿತಿ ನೀಡಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಈ ವೇಳೆ ಪುರಸಭೆಯ ಕಂದಾಯ ನಿರೀಕ್ಷಕ ಅಜ್ಜಪ್ಪಗೌಡರ ಮಾತನಾಡಿ, ಮುಖ್ಯಾಧಿಕಾರಿಗಳು ಜಿಲ್ಲಾಧಿಕಾರಿಗಳ ಕಚೇರಿಗೆ ಹೋಗಿದ್ದು, ಅವರು ಬಂದ ನಂತರ ಅವರ ಗಮನಕ್ಕೆ ತರುವ ಕಾರ್ಯ ಮಾಡುತ್ತೇವೆ ಎಂದು ಹೇಳಿದರು.

ಈ ವೇಳೆ ಸಂಘಟನೆಯ ಮಲ್ಲನಗೌಡ ಪಾಟೀಲ, ಚಂದ್ರು ಪಾಣಿಗಟ್ಟಿ, ಈಶ್ವರಗೌಡ ಪಾಟೀಲ, ಶ್ರೇಯಾಂಕ ಹಿರೇಮಠ, ಪ್ರವೀಣ ದಶಮನಿ, ಅಮರೇಶ ಗಾಂಜಿ, ಮುರಳಿಧರ ಮಲಸಮುದ್ರ, ಮಲ್ಲೇಶ ಡಂಬಳ, ಜಕಣಾಚಾರಿ ಮೇದೂರ, ಶಶಿ ಗೋಸಾವಿ, ನಿಖಿಲ್ ಗೋಸಾವಿ,ಸಂಜೀವ ಗೋಸಾವಿ, ಕಿರಣ ಗೋಸಾವಿ, ಬಸನಗೌಡ ಮನ್ನಂಗಿ, ತೇಜು ಉದ್ದನಗೌಡರ, ಪುರಸಭೆಯ ಸಿಬ್ಬಂದಿ ಹನಮಂತ ನಂದೆಣ್ಣವರ, ಮಂಜುಳಾ ಹೂಗಾರ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕ್ಷೇತ್ರದ ಕೆಲಸವನ್ನು ತಲೆಮೇಲೆ ಹೊತ್ತು ಮಾಡುವೆ
ಜಾತಿ ವೈಷಮ್ಯಕ್ಕೆ ಅವಕಾಶವಿಲ್ಲ:ಡಾ. ತೌಫೀಕ್‌ ಪಾರ್ಥನಳ್ಳಿ