ನಾಪೋಕ್ಲು: ಕಾರ್ಗಿಲ್ ವಿಜಯೋತ್ಸವ ಆಚರಣೆ

KannadaprabhaNewsNetwork |  
Published : Jul 28, 2024, 02:06 AM IST
ನಾಪೋಕ್ಲು ಲಯನ್ಸ್  ಕ್ಲಬ್ ವತಿಯಿಂದ ಆಯೋಜಿಸಲಾಗಿದ್ದ ಕಾರ್ಗಿಲ್ ವಿಜಯೋತ್ಸವ ಆಚರಣೆ ಕಾರ್ಯಕ್ರಮಅಂಗವಾಗಿ ಪೇರೂರು ಗ್ರಾಮದ ನಿವೃತ್ತ ಸುಬೇದಾರ್ ಪಾಲೆಯಡ  ಡಾಲು ಪೂಣಚ್ಚ ಅವರನ್ನು ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಸೈನಿಕರ ತ್ಯಾಗ ಬಲಿದಾನ ಪ್ರತಿನಿತ್ಯ ಸ್ಮರಿಸಬೇಕಾಗಿದೆ ಎಂದು ಲಯನ್ಸ್‌ ಕ್ಲಬ್‌ ಅಧ್ಯಕ್ಷೆ ಬಿದ್ದಾಟಂಡ ಮೇರಿ ಚಿಟ್ಟಿಯಪ್ಪ ತಿಳಿಸಿದರು. ಕಾರ್ಗಿಲ್‌ ವಿಜಯೋತ್ಸವ ಆಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ನಮ್ಮ ಸೈನಿಕರು ದೇಶದ ರಕ್ಷಣೆಗಾಗಿ ನಿರಂತರವಾಗಿ ಹೋರಾಟ ನಡೆಸುತ್ತಾರೆ. ಸೈನಿಕರ ತ್ಯಾಗ ಬಲಿದಾನವನ್ನು ಪ್ರತಿದಿನ ಸ್ಮರಿಸಬೇಕಾಗಿದೆ ಎಂದು ಲಯನ್ಸ್ ಕ್ಲಬ್ ನ ಅಧ್ಯಕ್ಷೆ ಬಿದ್ದಾಟಂಡ ಮೇರಿ ಚಿಟ್ಟಿಯಪ್ಪ ಹೇಳಿದರು.

ಇಲ್ಲಿನ ಲಯನ್ಸ್ ಕ್ಲಬ್ ವತಿಯಿಂದ ಆಯೋಜಿಸಲಾಗಿದ್ದ ಕಾರ್ಗಿಲ್ ವಿಜಯೋತ್ಸವ ಆಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಈ ಸಂದರ್ಭ ಪೇರೂರು ಗ್ರಾಮದ ನಿವೃತ್ತ ಸುಬೇದಾರ್ ಪಾಲೆಯಡ ಡಾಲು ಪೂಣಚ್ಚ ಅವರ ನಿವಾಸಕ್ಕೆ ತೆರಳಿ ಅವರನ್ನು ಸನ್ಮಾನಿಸಲಾಯಿತು. ಲಯನ್ಸ್ ಕ್ಲಬ್ ನೂತನ ಅಧ್ಯಕ್ಷೆ ಬಿದ್ದಾಟಂಡ ಮೇರಿ ಚಿಟ್ಟಿಯಪ್ಪ, ಕಾರ್ಯದರ್ಶಿ ಕುಂಚಟ್ಟಿರ ರೇಷ್ಮಾ ಉತ್ತಪ್ಪ, ಕೋಶಾಧಿಕಾರಿ ಕಾಂಡಂಡ ರೇಖಾ ಪೊನ್ನಣ್ಣ ಸನ್ಮಾನಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಸುಬೇದಾರ್ ಡಾಲು ಪೂಣಚ್ಚ ತಮ್ಮ ಸೇವೆಯ ಸಿಹಿಕಹಿ ಅನುಭವಗಳನ್ನು ಮೆಲುಕು ಹಾಕಿದರು.

ಕಾರ್ಯಕ್ರಮದಲ್ಲಿ ಸನ್ಮಾನಿತರ ಕುಟುಂಬಸ್ಥರು, ಲಯನ್ಸ್ ಕ್ಲಬ್ ನ ಸದಸ್ಯರಾದ ಮುಕ್ಕಾಟಿರ ವಿನಯ್, ಮಾದೆಯಂಡ ಬಿ. ಕುಟ್ಟಪ್ಪ, ಅಪ್ಪಚೆಟ್ಟೋಳಂಡ ಪಿ.ಮುತ್ತಪ್ಪ , ಕುಂಡ್ಯೋಳಂಡ ಮುತ್ತಪ್ಪ, ಅಪ್ಪಾರಂಡ ಎಸ್. ಶುಭಾಷ್ ತಿಮ್ಮಯ್ಯ, ಕುಂಚೆಟ್ಟಿರ ಡಿ ಉತ್ತಪ್ಪ, ಅಪ್ಪಚೆಟ್ಟೋಳಂಡ ನವೀನ್ ಅಪ್ಪಯ್ಯ, ಅಪ್ಪುಮಣಿಯಂಡ ಬನ್ಸಿ ಭೀಮಯ್ಯ, ಶೈಲಾ ಭೀಮಯ್ಯ, ನಿವೃತ್ತ ಯೋಧ ಕೇಟೋಳಿರ ಡಾಲಿ ಅಚ್ಚಪ್ಪ ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಸಿಲಿನ ಹೊಡೆತಕ್ಕೆ ಸಾವಿರಾರು ಮೀನುಗಳ ಮಾರಣಹೋಮ
ನಿರಾಶ್ರಿತರ ಕಣ್ಣೀರು ಒರೆಸುವ ಕೆಲಸ