ಕಾರ್ಗಿಲ್ ಯುದ್ಧ ಗೆದ್ದು 25 ವರ್ಷ. ಹೀಗಾಗಿಯೇ ನಾವೆಲ್ಲ ಸೇರಿ ಕಾರ್ಗಿಲ್ ಗೆದ್ದಾಯ್ತು, ಇನ್ನೀಗ ಟಾರ್ಗೆಟ್ ಪಿಒಕೆ ಎಂಬ ಹೆಸರಿನಲ್ಲಿ ಬೈಕ್ ರ್ಯಾಯಲಿ ಹಾಗೂ ಮುಟ್ಟಿದ್ರೆ ತಟ್ಟಿಬಿಡ್ತೀವಿ ಎಂಬ ಬಹಿರಂಗ ಸಮಾವೇಶ ರಾಜ್ಯಾದ್ಯಂತ ಮಾಡುತ್ತಿದ್ದೇವೆ. ಈ ಕಾರ್ಯಕ್ರಮದಲ್ಲಿ ನಮ್ಮ ಸೈನಿಕರ ಸಾಹಸಕ್ಕೆ, ತ್ಯಾಗ ಬಲಿದಾನಗಳಿಗೆ ನಮ್ಮದೊಂದು ಗೌರವವನ್ನು ಸಲ್ಲಿಸೋಣ ಎಂದು ಯುವಾ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ತಿಳಿಸಿದರು.
ಸವಣೂರು: ಕಾರ್ಗಿಲ್ ಯುದ್ಧ ಗೆದ್ದು 25 ವರ್ಷ. ಹೀಗಾಗಿಯೇ ನಾವೆಲ್ಲ ಸೇರಿ ಕಾರ್ಗಿಲ್ ಗೆದ್ದಾಯ್ತು, ಇನ್ನೀಗ ಟಾರ್ಗೆಟ್ ಪಿಒಕೆ ಎಂಬ ಹೆಸರಿನಲ್ಲಿ ಬೈಕ್ ರ್‍ಯಾಲಿ ಹಾಗೂ ಮುಟ್ಟಿದ್ರೆ ತಟ್ಟಿಬಿಡ್ತೀವಿ ಎಂಬ ಬಹಿರಂಗ ಸಮಾವೇಶ ರಾಜ್ಯಾದ್ಯಂತ ಮಾಡುತ್ತಿದ್ದೇವೆ. ಈ ಕಾರ್ಯಕ್ರಮದಲ್ಲಿ ನಮ್ಮ ಸೈನಿಕರ ಸಾಹಸಕ್ಕೆ, ತ್ಯಾಗ ಬಲಿದಾನಗಳಿಗೆ ನಮ್ಮದೊಂದು ಗೌರವವನ್ನು ಸಲ್ಲಿಸೋಣ ಎಂದು ಯುವಾ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ತಿಳಿಸಿದರು. ಸವಣೂರು ಪಟ್ಟಣದ ದಂಡಿನ ಪೇಟೆಯ ದೇವಸ್ಥಾನದ ಮುಂಭಾಗದಲ್ಲಿ ಯುವಾ ಬ್ರಿಗೇಡ್ ವತಿಯಿಂದ ಆಯೋಜಿಸಿದ್ದ ಕಾರ್ಗಿಲ್ ವಿಜಯದ 25ನೇ ವರ್ಷದ ಸಂಭ್ರಮದ ಹಿನ್ನೆಲೆಯಲ್ಲಿ ಮುಟ್ಟಿದ್ರೆ ತಟ್ಟಿಬಿಡ್ತೀವಿ ಎಂಬ ಶೀರ್ಷಿಕೆಯಡಿ ಉಪನ್ಯಾಸ ಹಾಗೂ ವಚನ ದರ್ಶನ ಪುಸ್ತಕ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಸಾನ್ನಿಧ್ಯ ವಹಿಸಿದ್ದ ಗದಗದ ಶ್ರೀ ಶಿವಾನಂದ ಬೃಹನ್ಮಠದ ಜಗದ್ಗುರು ಸದಾಶಿವಾನಂದ ಸ್ವಾಮೀಜಿ ವಚನ ದರ್ಶನ ಪುಸ್ತಕವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿ, ಜಗತ್ತಿನ 46 ರಾಷ್ಟ್ರಗಳಲ್ಲಿ ಭಾರತ ದೇಶದ ಪ್ರಾಚೀನ ಸಾರ್ವಭೌಮತ್ವದ ಕುರುಹುಗಳು ಕಾಣಸಿಗುತ್ತವೆ. ಸಾಂಸ್ಕೃತಿಕ ಸಾರ್ವಭೌಮತ್ವ ಗಳಿಸಿದ ಭಾರತ ಇಂದು ಸ್ವಾರ್ಥದ ನಡುವೆ ಜಾತಿಗಳ ನಡುವೆ ಕಳೆದು ಹೋಗಿದೆ. ಮಳೆ ಇದ್ದರೂ ಕೂಡಾ 25 ವರ್ಷದ ಹಿಂದೆ ಈ ದೇಶವನ್ನು ಉಳಿಸಿಲು ನಮ್ಮ ಸೈನಿಕರು ತಮ್ಮ ಅಮೂಲ್ಯ ಜೀವವನ್ನು ಮುಡಿಪಾಗಿಟ್ಟ ಯುದ್ಧದ ಕಥನವನ್ನು ಕೇಳಲು ಆಗಮಿಸಿರುವ ಪ್ರೇಕ್ಷರರು ನಿಜವಾದ ದೇಶ ಭಕ್ತರು ಎಂದರು.
ನಿಜವಾಗಿಯೂ ಭಾರತಕ್ಕೆ ಶಕ್ತಿ ಇದೆ. ಆಂತರಿಕವಾಗಿ ಭಾರತವನ್ನು ಹಾಳು ಮಾಡುವ ಪ್ರಯೋಗಗಳು ಬಹಳ ನಡೆದಿವೆ. ಅದನ್ನು ಸರಿಪಡಿಸುವ ವಿಶೇಷ ಪ್ರಯೋಗ ವಚನ ದರ್ಶನ ಪುಸ್ತಕದಲ್ಲಿದೆ ಎಂದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.