ಕಾರ್ಕಳ: ವಿಜೇತ ವಿಶೇಷ ಶಾಲೆಯಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ

KannadaprabhaNewsNetwork |  
Published : Aug 17, 2024, 12:57 AM IST
ವಿಜೇತ16 | Kannada Prabha

ಸಾರಾಂಶ

ಅಯ್ಯಪ್ಪನಗರದಲ್ಲಿರುವ ವಿಜೇತ ವಿಶೇಷ ಶಾಲೆಯಲ್ಲಿ ೭೮ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ನಡೆಯಿತು. ಪ್ರಕಾಶ್ ಆಚಾರ್ಯ ವಿಶೇಷ ವಿದ್ಯಾರ್ಥಿಗಳಿಂದ ಗೌರವ ವಂದನೆ ಸ್ವೀಕರಿಸಿ ಸಭಾ ಕಾರ್ಯಕ್ರಮದಲ್ಲಿ ಶುಭ ಹಾರೈಸಿದರು.

ಕನ್ನಡಪ್ರಭ ವಾರ್ತೆ ಕಾರ್ಕಳ

ಇಲ್ಲಿನ ಅಯ್ಯಪ್ಪನಗರದಲ್ಲಿರುವ ವಿಜೇತ ವಿಶೇಷ ಶಾಲೆಯಲ್ಲಿ ೭೮ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣವನ್ನು ಬೋರ್ಕಟ್ಟೆ ಶ್ರೀಮತಿ ಗಂಗಮ್ಮ ಮೆಮೋರಿಯಲ್ ಟ್ರಸ್ಟ್ ರಿ. ಅಧ್ಯಕ್ಷ ಹಾಗೂ ಪ್ರಕಾಶ್ ಜ್ಯುವೆಲ್ಲರಿ ಮಾಲಕ ಪ್ರಕಾಶ್ ಆಚಾರ್ಯ ನೆರವೇರಿಸಿದರು. ನಂತರ ವಿಶೇಷ ವಿದ್ಯಾರ್ಥಿಗಳಿಂದ ಗೌರವ ವಂದನೆ ಸ್ವೀಕರಿಸಿ ಸಭಾ ಕಾರ್ಯಕ್ರಮದಲ್ಲಿ ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಶಾಲೆಗೆ ಸ್ಲಯ್ಡಿಂಗ್ ಕಿಟಕಿಗಳನ್ನು ಹಸ್ತಾಂತರಿಸಿ ಸಹಕರಿಸಿದ ಉದ್ಯಮಿ ರಾಮಕೃಷ್ಣ ನಾಯಕ್ ಕಡ್ತಲ, ಜನಪ್ರಿಯ ರೈಸ್ ಮಿಲ್ ಮಾಲಕ ಮಂಜುನಾಥ್, ವಿಜೇತ ವಿಶೇಷ ಶಾಲಾ ಅಧ್ಯಕ್ಷ ರತ್ನಾಕರ್ ಅಮೀನ್, ದುರ್ಗಾ ವಿದ್ಯಾ ಸಂಘ ಟ್ರಸ್ಟ್ ಅಧ್ಯಕ್ಷ ಕೆ. ರಾಧಾಕೃಷ್ಣ ಶೆಟ್ಟಿ, ಬ್ಯಾಂಕ್ ಸಿಬ್ಬಂದಿ ಶಿವಾನಂದ ನಾಯಕ್, ಶಾಲಾ ಹಿತೈಷಿ ಲಕ್ಷ್ಮೀ ಪುತ್ರನ್ ಆಗಮಿಸಿದ್ದರು. ಸಂಸ್ಥಾಪಕಿ ಡಾ. ಕಾಂತಿ ಹರೀಶ್, ಮ್ಯಾನೇಜಿಂಗ್ ಟ್ರಸ್ಟಿ ಹರೀಶ್, ಟ್ರಸ್ಟಿ ಕಿರಣ್ ಶೆಟ್ಟಿ ವೇದಿಕೆಯಲ್ಲಿದ್ದರು. ಶಾಲಾ ಮಕ್ಕಳು, ಸಿಬ್ಬಂದಿ ವರ್ಗದವರು ಹಾಗೂ ಮಕ್ಕಳ ಪೋಷಕರು ಶಾಲಾ ಹಿತೈಷಿಗಳು ಉಪಸ್ಥಿತರಿದ್ದರು.

ಕುಕ್ಕುಂದೂರು ಗ್ರಾಮ ಪಂಚಾಯಿತಿ, ಕಾರ್ಕಳ ಟೀಮ್ ವರ್ಲ್ಡ್ ರೈಡಿಂಗ್ ಮತ್ತು ಮಂಜುನಾಥ್ ಇವರ ವತಿಯಿಂದ ಸಿಹಿತಿಂಡಿ ವಿತರಿಸಲಾಯಿತು.

ಘಣ್‌ಶ್ಯಾಮ್ ಅತ್ತಾವರ್ ಇವರಿಂದ ಉಪಹಾರ ವ್ಯವಸ್ಥೆ, ಗಿರೀಶ್ - ಪೂಜಾ ದಂಪತಿ, ಪುರಸಭಾ ಸದಸ್ಯ ಶುಭದ ರಾವ್ ಹಾಗೂ ಶ್ರೀ ಕ್ಷೇತ್ರ ಪೆರಾರ ಭಜನಾ ಮಂಡಳಿ ವಿಶೇಷ ಭೋಜನವನ್ನು ಒದಗಿಸಿದರು.

ವಿಶೇಷ ಶಿಕ್ಷಕಿ ಶ್ರೀನಿಧಿ ಕಾರ್ಯಕ್ರಮ ನಿರೂಪಿಸಿದು. ಡಾ. ಕಾಂತಿ ಹರೀಶ್ ಸ್ವಾಗತಿಸಿದರು. ಸಿಬ್ಬಂದಿ ಹಾಗೂ ಮಕ್ಕಳು ಪ್ರಾರ್ಥಿಸಿದರು. ಶ್ವೇತಾ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೀದಿ ನಾಯಿ ಮರಿ ದತ್ತು ಪಡೆದು ಮಾನವೀಯತೆ ತೋರಿ
5 ವರ್ಷದೊಳಗಿನ ಮಕ್ಕಳಿಗೆ ಪಲ್ಸ್ ಪೋಲಿಯೊ ಕಡ್ಡಾಯ