ಕಾರ್ಕಳ: ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕಾರ್ಕಳದ ಯಕ್ಷರಂಗಾಯಣ ಆಶ್ರಯದಲ್ಲಿ, ಗುರುವಾರ ಕಾರ್ಕಳದ ಕೋಟಿ ಚೆನ್ನಯ್ಯ ಥೀಮ್ ಪಾರ್ಕ್ ಆವರಣದಲ್ಲಿ ಖ್ಯಾತ ರಂಗಸಾಧಕ ಬಿ.ವಿ. ಕಾರಂತರ ನೆನಪು ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ನಡೆಯಿತು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕವಿ, ಚಿಂತಕ ಹಾಗೂ ರಂಗಕರ್ಮಿ ಗುರುರಾಜ ಮಾರ್ಪಳ್ಳಿ, ಒಬ್ಬ ಮನುಷ್ಯ ಶ್ರೀಮಂತನಾಗಿದ್ದರೂ, ಶ್ರೀಮಂತಿಕೆಯ ಲೇಪವಿಲ್ಲದೇ ಬದುಕುವುದು ಕಲಾವಿದನ ಶ್ರೇಷ್ಠ ಗುಣ. ಅಂತಹ ವ್ಯಕ್ತಿತ್ವ ಹೊಂದಿದವರು ಬಿ.ವಿ. ಕಾರಂತರು. ನಾಟಕಗಳಿಗಾಗಿ ಬದ್ಧತೆಯಿಂದ ಕೆಲಸ ನಿರ್ವಹಿಸಿದ ಅವರು, ಕನ್ನಡ ರಂಗಭೂಮಿಗೆ ಹೊಸ ರೂಪ ನೀಡಿದರು ಎಂದರು.
ಗುರುರಾಜ ಮಾರ್ಪಳ್ಳಿ ಮತ್ತು ನಿನಾದ ತಂಡದಿಂದ ಉಪನ್ಯಾಸ ಹಾಗೂ ಬಿ.ವಿ. ಕಾರಂತರ ರಂಗಸಂಗೀತದ ಪ್ರಾತ್ಯಕ್ಷಿಕೆ ನಡೆಯಿತು.
ವಿಶೇಷ ಕರ್ತವ್ಯಾಧಿಕಾರಿ ಪೂರ್ಣಿಮಾ ಸ್ವಾಗತಿಸಿದರು. ಯಕ್ಷರಂಗಾಯಣ ರೆಪರ್ಟರಿಯ ತಂತ್ರಜ್ಞ ಚಂದ್ರನಾಥ ಬಜಗೋಳಿ ನಿರೂಪಿಸಿ, ವಂದಿಸಿದರು.