ಭಾರತ ಬಲಿಷ್ಟವಾಗಲು ಒಗ್ಗಟ್ಟಿನ ಮಂತ್ರ ಅಗತ್ಯ: ಪ್ರೊ. ಹರಿಕೃಷ್ಣ ಭಟ್

KannadaprabhaNewsNetwork |  
Published : Jan 29, 2026, 03:00 AM IST
ಗಣರಾಜ್ಯ | Kannada Prabha

ಸಾರಾಂಶ

ನಿಟ್ಟೆ ಸಮೂಹ ವಿದ್ಯಾಸಂಸ್ಥೆಗಳು ಜಂಟಿಯಾಗಿ ಜ. 26ರಂದು ನಿಟ್ಟೆಯ ಬಿ.ಸಿ. ಆಳ್ವ ಕ್ರೀಡಾ ಸಂಕೀರ್ಣದಲ್ಲಿ ಆಯೋಜಿಸಿದ್ದ ೭೭ನೇ ಗಣರಾಜ್ಯೋತ್ಸವ ಕಾರ್‍ಯಕ್ರಮ

ಕಾರ್ಕಳ: ದೇಶದ ಅಭಿವೃದ್ಧಿಯಲ್ಲಿ ನಮ್ಮನ್ನು ಹೇಗೆ ತೊಡಗಿಸಿಕೊಳ್ಳಬೇಕು ಎಂಬುದರ ಬಗ್ಗೆ ದೇಶದ ಪ್ರತಿಯೊಬ್ಬ ಪ್ರಜೆಯೂ ಚಿಂತಿಸಬೇಕು. ಸಣ್ಣಪುಟ್ಟ ಸಮಸ್ಯೆಗಳನ್ನು ಮೆಟ್ಟಿನಿಂತು ಸರ್ವ ಕ್ಷೇತ್ರಗಳಲ್ಲೂ ಸಾಧನೆಯ ಪಥವನ್ನು ನಾವು ಕಾಣಬೇಕು ಎಂದು ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಅಂತಾರಾಷ್ಟ್ರೀಯ ಸಹಯೋಗ ವಿಭಾಗದ ನಿರ್ದೇಶಕ ಪ್ರೊ. ಹರಿಕೃಷ್ಣ ಭಟ್ ಅಭಿಪ್ರಾಯಪಟ್ಟರು.

ನಿಟ್ಟೆ ಸಮೂಹ ವಿದ್ಯಾಸಂಸ್ಥೆಗಳು ಜಂಟಿಯಾಗಿ ಜ. 26ರಂದು ನಿಟ್ಟೆಯ ಬಿ.ಸಿ. ಆಳ್ವ ಕ್ರೀಡಾ ಸಂಕೀರ್ಣದಲ್ಲಿ ಆಯೋಜಿಸಿದ್ದ ೭೭ನೇ ಗಣರಾಜ್ಯೋತ್ಸವ ಕಾರ್‍ಯಕ್ರಮದಲ್ಲಿ ಅವರು ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ದೇಶದ ಪ್ರತಿಯೊಬ್ಬ ಪ್ರಜೆಯೂ ತಲೆ ಎತ್ತಿ ಗೌರವಿಸುವಂತಹ ಶ್ರೇಷ್ಠತೆ ರಾಷ್ಟ್ರ ಧ್ವಜಕ್ಕೆ ಇದೆ. ಪ್ರಸ್ತುತ ದಿನದಲ್ಲಿ ವಿವಿಧ ಕ್ಷೇತ್ರಗಳ ಬೆಳವಣಿಗೆಯಲ್ಲಿ ಎಐಯಂತಹ ತಂತ್ರಜ್ಞಾನದ ಪಾತ್ರ ಗಮನಾರ್ಹ. ಇಂತಹ ತಂತ್ರಜ್ಞಾನದ ಬೆಳವಣಿಗೆಯಲ್ಲಿ ನಮ್ಮ ನಾಗರಿಕರ ಪಾತ್ರ ಹೆಚ್ಚಾಗಬೇಕು ಎಂದರು.

ಕಾರ್‍ಯಕ್ರಮದಲ್ಲಿ ಕ್ಯಾಂಪಸ್ ನ ಮೈಂಟೆನೆನ್ಸ್ ಮತ್ತು ಅಭಿವೃದ್ದಿ ವಿಭಾಗದ ನಿರ್ದೇಶಕ ಶ್ರೀ ಯೋಗೀಶ್ ಹೆಗ್ಡೆ, ನಿಟ್ಟೆ ಸಮೂಹ ವಿದ್ಯಾಸಂಸ್ಥೆಗಳ ಪ್ರಾಂಶುಪಾಲರು, ಶಿಕ್ಷಕ ವೃಂದ, ಶಿಕ್ಷಕೇತರ ವರ್ಗದವರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು. ನಿಟ್ಟೆ ಎನ್.ಎಸ್.ಎ.ಎಂ. ಶಾಲೆಯ ಆರ್ಮಿ ಎನ್ ಸಿಸಿ ಘಟಕ, ತಾಂತ್ರಿಕ ಕಾಲೇಜಿನ ಎನ್ ಸಿಸಿ ನೇವಲ್ ಘಟಕ ಹಾಗೂ ಕಾಲೇಜು ಕ್ಯಾಂಪಸ್ ನ ಭದ್ರತಾ ಸಿಬ್ಬಂದಿ ವತಿಯಿಂದ ಆಕರ್ಷಕ ಪಥಸಂಚಲನ ಹಮ್ಮಿಕೊಳ್ಳಲಾಗಿತ್ತು.ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ನಿರಂಜನ್ ಎನ್. ಚಿಪ್ಳೂಣ್ಕರ್ ಸ್ವಾಗತಿಸಿ ಅತಿಥಿಗಳನ್ನು ಪರಿಚಯಿಸಿದರು. ರಸಾಯನಶಾಸ್ತ್ರ ವಿಭಾಗದ ಸಹಪ್ರಾಧ್ಯಾಪಕ ಹಾಗೂ ಎನ್ ಸಿಸಿ ನೇವಲ್ ಘಟಕದ ಸಂಯೋಜಕ ಡಾ. ಶಿವಪ್ರಸಾದ್ ಶೆಟ್ಟಿ ವಂದಿಸಿದರು. ನಿಟ್ಟೆ ಶಾಲೆಯ ಎನ್ ಸಿಸಿ ಸಂಯೋಜಕಿ ಹಾಗೂ ದೈಹಿಕ ಶಿಕ್ಷಣ ವಿಭಾಗದ ಉಷಾ ಕಾರ್ಯಕ್ರಮ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮನಸ್ಸಿನ ಗೊಂದಲ ಪರಿಹಾರಕ್ಕೆ ಧ್ಯಾನ ಸೂಕ್ತ ಮಾರ್ಗ: ಡಾ. ಹೆಗ್ಗಡೆ
ಪ್ರಕೃತಿ ಜೊತೆಗೆ ಬದುಕನ್ನು ಗೋಧಾಮ ತೋರಿಸಿದೆ: ಆನೆಗುಂದಿಶ್ರೀ