ಕಾರ್ಕಳ ; ಹಸುವನ್ನು ಅಟ್ಟಿಸಿಕೊಂಡು ಬಂದ ಭಾರಿ ಗಾತ್ರದ ಗೂಳಿಯೊಂದು ಆಯತಪ್ಪಿ ಬಾವಿಗೆ ಬಿದ್ದ ಘಟನೆ ಕಾರ್ಕಳ ತಾಲೂಕಿನ ಪರಪ್ಪು ಗ್ರಾಮದಲ್ಲಿ ನಡೆದಿದೆ.ಪರಪ್ಪು ನಾಗನಕಟ್ಟೆ ನಿವಾಸಿ ರತ್ನ ಆಚಾರ್ಯ ಅವರ ಮನೆಯ ಬಳಿ ಈ ಘಟನೆ ನಡೆದಿದೆ. ಹಸುವೊಂದನ್ನು ಅಟ್ಟಿಸಿಕೊಂಡು ವೇಗವಾಗಿ ಓಡಿಬಂದ ಈ ಗೂಳಿ, ಕಾಲು ಜಾರಿ ರತ್ನ ಆಚಾರ್ಯ ಅವರ ತೆರೆದ ಬಾವಿಗೆ ಬಿದ್ದುಬಿಟ್ಟಿತು. ಬಾವಿಯಲ್ಲಿ ನೀರಿದ್ದುದರಿಂದ ಗೂಳಿ ಮೇಲಕ್ಕೆ ಬರಲಾಗದೇ ಪ್ರಾಣಭಯದಿಂದ ಒದ್ದಾಡಲು ಆರಂಭಿಸಿತು. ಇದನ್ನು ಕಂಡು ಬೆಚ್ಚಿಬಿದ್ದ ಸ್ಥಳೀಯರು ತಕ್ಷಣವೇ ಅಗ್ನಿಶಾಮಕ ಇಲಾಖೆಗೆ ಮಾಹಿತಿ ನೀಡಿದರು.
ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಸಿಬ್ಬಂದಿ ಅಚ್ಚುತ ಕರ್ಕೇರಾ, ಗಣೇಶ್ ಆಚಾರ್ಯ, ಬಸವರಾಜ್ ಪಾಟೀಲ್, ಚಾಲಕ ಶ್ರೀಧರ್ ಆತನೂರ್, ಮುಜಾಮೀರ್ ಪಾಲ್ಗೊಂಡಿದ್ದರು.