ಕಾರ್ಕಳ: ಜನರ ಸಮಸ್ಯೆಗಳನ್ನು ಅರಿಯಲು ಪ್ರಜಾಸೇವಾ ಉತ್ತಮ ಅವಕಾಶ, ಇಲ್ಲಿ ಜನರು ನೀಡುವ ಅರ್ಜಿಗಳನ್ನು ಆಯಾ ಇಲಾಖೆಯ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಸೂಕ್ತ ನ್ಯಾಯ ಒದಗಿಸಬೇಕು, ಹೊರತು ಅರ್ಜಿಗಳನ್ನು ಇಲಾಖೆಯಿಂದ ಇಲಾಖೆಗೆ ವರ್ಗಾಯಿಸಬಾರದು, ಆಗ ಮಾತ್ರ ಈ ಕಾರ್ಯಕ್ರಮ ಯಶಸ್ವಿಯಾಗುತ್ತದೆ ಎಂದು ಶಾಸಕ ಸುನಿಲ್ ಕುಮಾರ್ ಹೇಳಿದರು.
ಅರ್ಜಿ ಪರಿಶೀಲನೆ: ಜಿಲ್ಲಾಧಿಕಾರಿ ಸ್ವರೂಪ ಟಿ. ಕೆ ಪ್ರಸ್ತಾವಿಕವಾಗಿ ಮಾತನಾಡಿ, ಪ್ರಜಾಸೇವಾ ಸಭೆಗಳಲ್ಲಿ ಸ್ವೀಕೃತವಾಗುವ ಅರ್ಜಿಗಳನ್ನು ಐ.ಪಿ.ಜಿ.ಆರ್.ಎಸ್. ಪೋರ್ಟಲ್‌ಗೆ ಅಪ್‌ಲೋಡ್ ಮಾಡಲಾಗುತ್ತದೆ. ಅಲ್ಲದೇ ಪ್ರತೀ ಬುಧವಾದ ಬೆಳಗ್ಗೆ 9-11 ರ ವರೆಗೆ ತಹಸೀಲ್ದಾರ್, 11 ರಿಂದ 1ರವರೆಗೆ ಸಹಾಯಕ ಕಮಿಷನರ್ ಹಾಗೂ ಮ. 3-5 ರ ವರೆಗೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಅರ್ಜಿಗಳನ್ನು ಪರಿಶೀಲನೆ ಮಾಡಲಾಗುತ್ತಿದೆ ಎಂದರು. ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಂಜುನಾಥ ಪೂಜಾರಿ, ಕಾರ್ಕಳ ತಾಲೂಕು ಗ್ಯಾರಂಟಿ ಸಮಿತಿಯ ಅಧ್ಯಕ್ಷ ಅಜಿತ್ ಹೆಗ್ಡೆ, ಜಿಪಂ ಸಿಇಒ ಪ್ರತೀಕ್ ಬಾಯಲ್, ಎಎಸ್‌ಪಿ ಸುಧಾಕರ್ ನಾಯಕ್, ಕಾರ್ಕಳ ಎಎಸ್ಪಿಇಶಿತಾ ಗುಪ್ತ, ಜಿಪಂ ಉಪ ಕಾರ್ಯದರ್ಶಿ ಎಸ್.ಎಸ್ ಕಾದ್ರೊಳ್ಳಿ, ಕುಂದಾಪುರ ವಿಭಾಗದ ಎಸಿಎಫ್ ಶಶಿಕಾಂತ್ ವಿಭುದೆ, ತಹಸೀಲ್ದಾರ್ ರಾಕೇಶ್ ಪ್ರಾನ್ಸಿಸ್ ಬ್ರಿಟ್ಟೋ ಮತ್ತಿತರರು ಇದ್ದರು.
ಪಿಡಿಓ ಪ್ರತಾಪ್ ಶೆಟ್ಟಿ ಸ್ವಾಗತಿಸಿ, ಡೆಪ್ಯೂಟಿ ತಹಸೀಲ್ದಾರ್ ನಳಿನಿ ನಿರೂಪಿಸಿ, ತಾಪಂ ಇಒ ಪ್ರಶಾಂತ್ ಸಿ. ರಾವ್ ವಂದಿಸಿದರು.