ಕರ್ನಾಟಕ ಬಂದ್: ಶ್ರೀರಂಗಪಟ್ಟಣದಲ್ಲಿ ಭಾಗಶಃ ಯಶಸ್ವಿ

KannadaprabhaNewsNetwork |  
Published : Aug 14, 2026, 01:15 AM IST
13ಕೆಎಂಎನ್ ಡಿ22 | Kannada Prabha

ಸಾರಾಂಶ

ಶ್ರೀರಂಗಪಟ್ಟಣ ಪಟ್ಟಣದ ಮುಖ್ಯ ಬೀದಿಯಲ್ಲಿ ಬೈಕ್ ರ್‍ಯಾಲಿ ಮೂಲಕ ಮೆರವಣಿಗೆ ನಡೆಸಿ ಅಂಗಡಿ ಮುಗ್ಗಟ್ಟಿನ ವ್ಯಾಪಾರಸ್ಥರನ್ನು ರ್‍ಯಾಲಿಗೆ ಬೆಂಬಲಿಸುವಂತೆ ಕರೆ ನೀಡಿ ಮನವಿ ಮಾಡಿದರು. ವರ್ತಕರು ಸಹ ಅಂಗಡಿಗಳನ್ನು ಬಂದ್ ಮಾಡಿ ಬಂದ್ ಗೆ ಬೆಂಬಲ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಕರ್ನಾಟಕ ಬಂದ್ ಬೆಂಬಲಿಸಿ ಪಟ್ಟಣದಲ್ಲಿ ಬಂದ್ ಭಾಗಶಃ ಯಶಸ್ವಿಯಾಯಿತು.

ಬಂದ್ ಬೆಂಬಲಿಸಿ ರೈತ ಸಂಘಟನೆ ಸೇರಿದಂತೆ ವಿವಿಧಸಂಘಟನೆಗಳ ಕಾರ್ಯಕರ್ತರು ಪಟ್ಟಣದಲ್ಲಿ ಬೈಕ್ ರ್ಯಾಲಿ ನಡೆಸಿ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದರು.

ಪಟ್ಟಣದ ಮುಖ್ಯ ಬೀದಿಯಲ್ಲಿ ಬೈಕ್ ರ್‍ಯಾಲಿ ಮೂಲಕ ಮೆರವಣಿಗೆ ನಡೆಸಿ ಅಂಗಡಿ ಮುಗ್ಗಟ್ಟಿನ ವ್ಯಾಪಾರಸ್ಥರನ್ನು ರ್‍ಯಾಲಿಗೆ ಬೆಂಬಲಿಸುವಂತೆ ಕರೆ ನೀಡಿ ಮನವಿ ಮಾಡಿದರು. ವರ್ತಕರು ಸಹ ಅಂಗಡಿಗಳನ್ನು ಬಂದ್ ಮಾಡಿ ಬಂದ್ ಗೆ ಬೆಂಬಲ ನೀಡಿದರು.

ರೈತ ಸಂಘಟನೆಗಳು ಹಾಗೂ ವಿವಿಧ ಕನ್ನಡಪರ ಸಂಘಟನೆಗಳು ಬಂದ್ ಬೆಂಬಲಿಸಿ ಬೈಕ್ ರ್‍ಯಾಲಿ ಮಾಡಿದರು. ರ್‍ಯಾಲಿಯಲ್ಲಿ ರೈತ ಸಂಘಟನೆ, ದಲಿತ ಸಂಘಟನೆ ಸೇರಿ ವಿವಿಧ ಸಂಘಟನೆಗಳ ಮುಖಂಡರು ಪಟ್ಟಣದ ಕುವೆಂಪು ವೃತ್ತದಲ್ಲಿ ಸೇರಿ ಸಿಡಬ್ಯೂಎಂಎ ಹಾಗೂ ಸಿಡಬ್ಯೂಆರ್‌ಸಿ ಪ್ರಾಧಿಕಾರದ ವಿರುದ್ಧ ಧಿಕ್ಕಾರ ಕೂಗಿದರು.

ನಂತರ ಅಂಬೇಡ್ಕರ್ ವೃತ್ತದಲ್ಲಿ ಸೇರಿ ಸರ್ಕಾರ ತಮಿಳುನಾಡಿಗೆ ನೀರು ಹರಿಸಿದರೆ ಸರ್ಕಾರದ ಪ್ರತಿನಿಧಿಗಳ ಮನೆ ಎದುರು ಉಗ್ರ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ಬಂದ್ ಇದ್ದರೂ ಶಾಲಾ, ಕಾಲೇಜು, ಬ್ಯಾಂಕ್ ಸೇರಿದಂತೆ ಬಸ್ ಸಂಚಾರ ಎಂದಿನಂತೆ ಕಾರ್ಯನಿರ್ವಹಿಸಿದವು.

ಈ ವೇಳೆ ರೈತ ಸಂಘದ ಅಧ್ಯಕ್ಷ ಶಂಭುಗೌಡ, ಮಾಜಿ ಅಧ್ಯಕ್ಷ ಕೃಷ್ಣೇಗೌಡ ಮರಳಗಾಲ, ಜಯರಾಮು ದೊಡ್ಡಪಾಳ್ಯ, ಬಿಎಸ್ ರಮೇಶ್, ಪಾಂಡು, ಪ್ರಜ್ಞಾವಂತರ ವೇದಿಕೆ ಸಂಚಾಲಕ ಸಿ.ಎಸ್.ವೆಂಕಟೇಶ್, ಚಿಕ್ಕತಮ್ಮೇಗೌಡ, ಮುಸ್ಲೀಂ ಒಕ್ಕೂಟದ ಅಪ್ಸರ್ ಪಾಷ, ತಾಪಂ ಮಾಜಿ ಅಧ್ಯಕ್ಷ ಬಿಆರ್ ಕೊಪ್ಪಲು ಸಂದೇಶ್, ತಮ್ಮಣ್ಣ, ಎಜಾಜ್ ಪಾಷ ಹಲವರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆಟೋ, ಟ್ಯಾಕ್ಸಿ ನಿಲ್ದಾಣ ಕಾಮಗಾರಿ ವಸ್ತುಗಳು ನಗರಸಭೆ ವಶಕ್ಕೆ
ಕಾವೇರಿ ನೀರು ನಿಯಂತ್ರಣ ಸಮಿತಿ, ಪ್ರಾಧಿಕಾರದ ವಿರುದ್ಧ ಪಿಂಡ ಪ್ರದಾನ