ಕನ್ನಡಪ್ರಭ ವಾರ್ತೆ ನಾಗಮಂಗಲ
ಜಿಲ್ಲೆಯ 10ನೇ ಶಾಖೆಯನ್ನು ನಾಗಮಂಗಲದಲ್ಲಿ ತೆರೆಯಲಾಗಿದೆ. ಗ್ರಾಹಕರ ಹಣವನ್ನು ಸುಸ್ಥಿರವಾಗಿ ನೋಡಿಕೊಳ್ಳುವುದು ಬ್ಯಾಂಕ್‌ಗಳ ಜವಾಬ್ದಾರಿ. ಹಾಗಾಗಿ ತಾಲೂಕಿನ ಜನರು ಬ್ಯಾಂಕ್‌ನಲ್ಲಿ ವ್ಯವಹಾರ ನಡೆಸುವ ಜೊತೆಗೆ ಸಿಗುವ ಸೌಲಭ್ಯ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಮಂಡ್ಯ ಜಿಲ್ಲೆಯ ಕರ್ಣಾಟಕ ಬ್ಯಾಂಕ್ ಶಾಖೆಗಳಲ್ಲಿ 1 ಸಾವಿರ ಕೋಟಿ ವ್ಯವಹಾರ ನಡೆಯುತ್ತಿದೆ. 450 ಕೋಟಿ ರು. ಠೇವಣಿಯಿದೆ. 550 ಕೋಟಿ ರು.ಸಾಲ ನೀಡಲಾಗಿದೆ. ಬ್ಯಾಂಕ್‌ಗಳಲ್ಲಿ ಸಾಲ ಪಡೆಯುವ ಗ್ರಾಹಕರು ನಿಗಧಿತ ಅವಧಿಯಲ್ಲಿ ಮರುಪಾವತಿ ಮಾಡಿದರೆ ಇತರೆ ಗ್ರಾಹಕರಿಗೂ ಸಾಲ ಸೌಲಭ್ಯ ನೀಡಲು ಅನುಕೂಲವಾಗುತ್ತದೆ ಎಂದರು.ಅಂಗಡಿ ಮುಂಗಟ್ಟುಗಳ ವರ್ತಕರು ತಮ್ಮ ವ್ಯಾಪಾರ ವಹಿವಾಟು ನಡೆಸಿದ ಬಳಿಕ ಹಣವನ್ನು ಮನೆಗೆ ತೆಗೆದುಕೊಂಡು ಹೋಗುವಾಗ ಪಿಕ್‌ಪಾಕೇಟ್ ಆಗುವ ಸಂಭವವಿದೆ. ಪಟ್ಟಣದಲ್ಲಿ ನೂತನ ಸ್ಥಾಪಿತ ಮಿನಿ ಇ-ಲಾಬಿ ಶಾಖೆಯಲ್ಲಿ ಗ್ರಾಹಕರು ಸರ್ಕಾರಿ ರಜಾ ದಿನಗಳೂ ಸೇರಿದಂತೆ ದಿನದ 24 ಗಂಟೆ ಕಾಲ ಹಣವನ್ನು ಠೇವಣಿ ಇಡಬಹುದು. ಅಂತಹ ವ್ಯವಸ್ಥೆಯನ್ನು ಈ ಶಾಖೆಯಲ್ಲಿ ಮಾಡಲಾಗಿದೆ. ಈ ಶಾಖೆಯನ್ನು ನಿಮ್ಮ ಬ್ಯಾಂಕ್ ಎಂದು ತಿಳಿದು ಉತ್ತಮ ರೀತಿಯಲ್ಲಿ ಮುನ್ನಡೆಸಬೇಕು ಎಂದರು.
ಆದಿಚುಂಚನಗಿರಿ ಮಠದ ಶ್ರೀಚೈತನ್ಯನಾಥಸ್ವಾಮೀಜಿ ಅವರು ನೂತನ ಶಾಖೆ ಉದ್ಘಾಟಿಸಿ ಶುಭ ಹಾರೈಸಿದರು. ಇದೇ ವೇಳೆ ಬ್ಯಾಂಕ್ ಶಾಖೆ ಕಟ್ಟಡದ ಮಾಲೀಕ ಹಾಗೂ ರಾಜ್ಯ ಒಕ್ಕಲಿಗರ ಸಂಘದ ಮಾಜಿ ಅಧ್ಯಕ್ಷ ಬೆಟ್ಟೇಗೌಡ ಅವರನ್ನು ಸನ್ಮಾನಿಸಲಾಯಿತು.ಈ ವೇಳೆ ತುಮಕೂರು ಪ್ರಾದೇಶಿಕ ಕಚೇರಿ ಮುಖ್ಯಸ್ಥ ಸತ್ಯಜಿತ್, ಸುಬ್ಬರಾಮು, ಸಹಾಯಕ ಪ್ರಧಾನ ವ್ಯವಸ್ಥಾಪಕ ಕೆ.ರಾಮಶೇಷು, ಮಂಡ್ಯ ಶಾಖೆ ಮುಖ್ಯಸ್ಥ ಎಂ.ಸಿ.ರಾಘವೇಂದ್ರ, ನಾಗಮಂಗಲ ಶಾಖಾ ವ್ಯವಸ್ಥಾಪಕ ವಿ.ಸುಹಾಸ್, ಮದ್ದೂರು ಕ್ಲಸ್ಟರ್‌ನ ಮುಖ್ಯಸ್ಥ ಮುನಿರಾಜರೆಡ್ಡಿ, ಕ್ಲಸ್ಟರ್ ಅಧಿಕಾರಿ ದೀಪಕ್ ಅಡಿಗ, ಸುಧೀಂದ್ರ ಪಂಚಮುಖಿ, ಭರತ್‌ಕುಮಾರ್, ಕಾನೂನು ಸಲಹೆಗಾರ ಮನೋಹರ್, ಸೌಮ್ಯ, ಅನಿತಾಭಟ್, ಪುರಸಭೆ ಸದಸ್ಯ ಸಂಪತ್‌ಕುಮಾರ್ ಸೇರಿದಂತೆ ಬ್ಯಾಂಕ್‌ನ ಸಿಬ್ಬಂದಿ ಮತ್ತು ಗ್ರಾಹಕರು ಇದ್ದರು.