
ಕನ್ನಡಪ್ರಭ ವಾರ್ತೆ ಕಡೂರು
ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ತಾಲೂಕು ಆಡಳಿತ ಆಯೋಜಿಸಿದ್ದ 71 ಕನ್ನಡ ರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿವಿವಿಧತೆಯಲ್ಲಿ ಏಕತೆ ಕೈಗನ್ನಡಿಯಾದ ಕರ್ನಾಟಕ ದೇಶದ ಅಭಿವೃದ್ಧಿ ಯಲ್ಲೂ ಪ್ರಮುಖ ಪಾತ್ರ ವಹಿಸಿದೆ. ಮಹೋನ್ನತ ಸಂಸ್ಕೃತಿ ಬೇರು ಹೊಂದಿದ ಕರ್ನಾಟಕ ಮತ್ತು ಕನ್ನಡ ನಮ್ಮ ಹೆಮ್ಮೆ ಎಂದು ನುಡಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ.ಎಸ್.ಆನಂದ್, ಕನ್ನಡ ನಮ್ಮ ಪ್ರಾಚೀನ ಸಂಸ್ಕೃತಿ ಪ್ರತಿನಿಧಿಯಾಗಿದ್ದು ಸುಮಧುರ, ಸುಂದರ ಭಾಷೆಯಾಗಿದೆ. 1905ರಲ್ಲಿ ಆಲೂರು ವೆಂಕಟರಾಯರ ನೇತೃತ್ವದಲ್ಲಿ ಆರಂಭ ಗೊಂಡ ಏಕೀಕರಣ ಚಳವಳಿಗೆ 1956ರಲ್ಲಿ ಭಾಷಾವಾರು ಪ್ರಾಂತ್ಯಗಳ ರಚನೆ ಮೂಲಕ ಫಲ ಸಿಕ್ಕಿತು. 1973ರಲ್ಲಿ ಮೈಸೂರು ರಾಜ್ಯ ಕರ್ನಾಟಕವಾಯಿತು.ದೇಶಕ್ಕೆ ಅತಿ ಹೆಚ್ಚು ಜಿಎಸ್ಟಿ ನೀಡುವ ರಾಜ್ಯಗಳಲ್ಲಿ ನಮ್ಮ ನಾಡು ಮೊದಲಿ ನಿಂದಲೂ ನೆಲ-ಜಲದ ವಿಷಯದಲ್ಲಿ ಕಿರುಕುಳ ಅನುಭವಿಸುತ್ತಲೇ ಇದೆ. ಜತೆಯಲ್ಲಿ ನಾಡಿನ ಅಭಿವೃದ್ಧಿಗೆ ಕೈಜೋಡಿಸಬೇಕಾದ ಕೇಂದ್ರನಮ್ಮ ತೆರಿಗೆ ಪಾಲನ್ನು ಸಮರ್ಪಕವಾಗಿ ನೀಡದೆ ಅನ್ಯಾಯ ಮಾಡುತ್ತಿದೆ. ನಮಗೆ ಸಿಗಬೇಕಾದ ತೆರಿಗೆ ಪಾಲನ್ನು ಬಿಡುಗಡೆ ಮಾಡುವಂತೆ ನಾನು ಕೇಂದ್ರವನ್ನು ಈ ವೇದಿಕೆ ಮೂಲಕ ಒತ್ತಾಯಿ ಸುತ್ತೇನೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಬೇರೆ ಭಾಷೆಗಳ ಕಲಿಕೆ ಅನಿವಾರ್ಯ ವಾದರೂ ಬಳಕೆಯಲ್ಲಿ ಮಾತೃಭಾಷೆ ನಮ್ಮ ಆದ್ಯತೆಯಾಗಬೇಕು. ನಮ್ಮ ಭಾಷೆ ಬಗ್ಗೆ ಎಲ್ಲರಿಗೂ ಗೌರವವಿರಲಿ, ನಮ್ಮ ಸರ್ಕಾರ ಕನ್ನಡ ಅನ್ನದ ಭಾಷೆಯಾಗಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ ಎಂದು ಹೇಳಿದರು.
ಶಿಕ್ಷಕ ಮತ್ತು ಸಾಹಿತಿ ಯಗಟಿ ಸತೀಶ್ ರಚಿತ "ಜೀವಾಮೃತ ಮತ್ತು ಇತರ ಕಥೆಗಳುʼ ಕಥಾ ಸಂಕಲನವನ್ನು ಶಾಸಕ ಆನಂದ್ ಬಿಡುಗಡೆಗೊಳಿಸಿದರು. ಧ್ವಜವಂದನೆಯಲ್ಲಿ ಪ್ರೌಢಶಾಲಾ ವಿಭಾಗದಲ್ಲಿ ವೇದಾವತಿ ಶಾಲೆ ಪ್ರಥಮ, ಮಾಡೆಲ್ ಇಂಗ್ಲೀಷ್ ಶಾಲೆ ದ್ವಿತೀಯ, ಎಂಎಸ್ ಆರ್ ಶಾಲೆ ತೃತೀಯ ಸ್ಥಾನ ಗಳಿಸಿದರೆ, ಪ್ರಾಥಮಿಕ ಶಾಲಾಮಟ್ಟದಲ್ಲಿ ದೀಕ್ಷಾ ವಿದ್ಯಾ ಮಂದಿರ ಪ್ರಥಮ, ಶಾರದಾ ವಿದ್ಯಾಮಂದಿರ ದ್ವಿತೀಯ ಮತ್ತು ಪ್ರೇಮಜ್ಯೋತಿ ಕಾನ್ವೆಂಟ್ ವಿದ್ಯಾರ್ಥಿಗಳು ತೃತೀಯ ಸ್ಥಾನ ಪಡೆದರು.
ಕಡೂರು ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ಕ್ರೀಡಾಂಗಣದಲ್ಲಿ 71 ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಶಾಸಕ ಕೆ.ಎಸ್. ಆನಂದ್, ತಹಸೀಲ್ದಾರ್ ಎಸ್.ಪೂರ್ಣಿಮಾ ಗಣ್ಯರು ಕನ್ನಡ ಭುವನೇಶ್ವರಿಗೆ ಪುಷ್ಪಾರ್ಚನೆ ಸಲ್ಲಿಸಿದರು.