ಕರ್ನಾಟಕ ಒಲಿಂಪಿಕ್ಸ್: ಮೈಸೂರಿಗೆ 4 ಚಿನ್ನ, ಉಡುಪಿ- ಬೆಂಗಳೂರಿಗೆ 3 ಚಿನ್ನ

KannadaprabhaNewsNetwork |  
Published : Jan 22, 2025, 12:30 AM IST
ಕ್ರೀಡೆ | Kannada Prabha

ಸಾರಾಂಶ

ಉಡುಪಿ ಮತ್ತು ಮಂಗಳೂರಿನಲ್ಲಿ ನಡೆಯುತ್ತಿರುವ ಕರ್ನಾಟಕ ಕ್ರೀಡಾಕೂಟ- 2025 (ಕರ್ನಾಟಕ ಒಲಿಂಪಿಕ್ಸ್)ರ 5ನೇ ದಿನ ಮಂಗಳವಾರ ಅಥ್ಲೆಟಿಕ್ಸ್ ಸ್ಪರ್ಧೆಗಳು ಆರಂಭವಾದವು. ಮೊದಲ ದಿನ ಪುರುಷರ 5 ಮತ್ತು ಮಹಿಳೆಯರ 6 ವಿಭಾಗಗಳಲ್ಲಿ ಫೈನಲ್‌ ನಡೆಯಿತು.

ಟ್ರ್ಯಾಕ್‌ ಆ್ಯಂಡ್‌ ಫೀಲ್ಡ್‌ನಲ್ಲಿ ಆತಿಥೇಯರ ಭರ್ಜರಿ ಪ್ರದರ್ಶನ

ಕನ್ನಡಪ್ರಭ ವಾರ್ತೆ ಉಡುಪಿ

ಉಡುಪಿ ಮತ್ತು ಮಂಗಳೂರಿನಲ್ಲಿ ನಡೆಯುತ್ತಿರುವ ಕರ್ನಾಟಕ ಕ್ರೀಡಾಕೂಟ- 2025 (ಕರ್ನಾಟಕ ಒಲಿಂಪಿಕ್ಸ್)ರ 5ನೇ ದಿನ ಮಂಗಳವಾರ ಅಥ್ಲೆಟಿಕ್ಸ್ ಸ್ಪರ್ಧೆಗಳು ಆರಂಭವಾದವು. ಮೊದಲ ದಿನ ಪುರುಷರ 5 ಮತ್ತು ಮಹಿಳೆಯರ 6 ವಿಭಾಗಗಳಲ್ಲಿ ಫೈನಲ್‌ ನಡೆಯಿತು.ಒಟ್ಟು 13 ಸ್ಪರ್ಧೆಗಳಲ್ಲಿ ಮೈಸೂರು 4 ಚಿನ್ನದ ಪದಕ, ಉಡುಪಿ ಮತ್ತು ಬೆಂಗಳೂರು ತಲಾ 3 ಚಿನ್ನದ ಪದಕ ಮತ್ತು ಬೆಳಗಾವಿ 2 ಮತ್ತು ಯಾದಗಿರಿ 1 ಚಿನ್ನದ ಪದಕಗಳನ್ನು ಕೊರಳಿಗೇರಿಸಿಕೊಂಡವು.ಕ್ರೀಡಾಸ್ಪರ್ಧೆಗಳಲ್ಲಿ ಇದುವರೆಗೆ ನಿರಾಸೆ ಮೂಡಿಸಿರುವ ಆತಿಥೇಯ ಉಡುಪಿ ಜಿಲ್ಲೆ ಟ್ರ್ಯಾಕ್‌ ಆ್ಯಂಡ್‌ ಫೀಲ್ಡ್‌ನಲ್ಲಿ 3 ಚಿನ್ನ, 2 ಬೆಳ್ಳಿ, 4 ಕಂಚಿನ ಪದಕಗಳನ್ನು ಗೆದ್ದು ಸ್ಥಳೀಯ ಕ್ರೀಡಾಪ್ರೇಮಿಗಳಿಗೆ ಸಂತಸವನ್ನುಂಟು ಮಾಡಿದ್ದಾರೆ. ಅದರಲ್ಲೂ ಮೂರೂ ಚಿನ್ನದ ಪದಕಗಳನ್ನು ಮಹಿಳಾ ಕ್ರೀಡಾಪಟುಗಳೇ ಗೆದ್ದುಕೊಂಡಿದ್ದಾರೆ.ಪುರುಷರ ವಿಭಾಗ:110 ಮೀ. ಹರ್ಡಲ್ಸ್: ಚಿನ್ನ - ಲೋಕೇಶ್‌ ದಾಮು (ಯಾದಗಿರಿ), ಬೆಳ್ಳಿ- ತೇಜಲ್ ಕೆ.ಆರ್. (ದ.ಕ.), ಕಂಚು- ಸಂತೋಷ್‌ ಕುಮಾರ್ (ಬೆಂಗಳೂರು).

200 ಮೀ. ಓಟ: ಚಿನ್ನ - ಗುರುಪ್ರಸಾದ್‌ (ಮೈಸೂರು), ಬೆಳ್ಳಿ- ಪ್ರಸನ್ನ ಕುಮಾರ್ (ಬೆಂಗಳೂರು), ಕಂಚು- ಧನುಷ್‌ ಡಿ. (ಉಡುಪಿ).800 ಮೀ. ಓಟ: ಚಿನ್ನ - ಕಮಲಾಕಣ್ಣನ್‌ ಎಸ್. (ಬೆಂಗಳೂರು), ಲೋಕೇಶ್ ಕೆ. (ರಾಮನಗರ), ಕಂಚು - ವಿನಾಯಕ ಅಂಗಡಿ (ಬೆಂಗಳೂರು).

10,000 ಮೀ. ಓಟ: ಚಿನ್ನ- ವಿಜಯ ಸಾವರ್ಟಕರ್ (ಬೆಳಗಾವಿ), ಬೆಳ್ಳಿ- ಗುರುಪ್ರಸಾದ್‌ (ಬೆಂಗಳೂರು), ಕಂಚು - ಸಂದೀಪ್ ಟಿ. (ಬೆಂಗಳೂರು).ಲಾಂಗ್‌ ಜಂಪ್‌: ಚಿನ್ನ- ಝಾಫರ್‌ ಖಾನ್‌ (ಬೆಳಗಾವಿ), ಬೆಳ್ಳಿ- ಅನುಷ್‌ ಟಿ.ಆರ್‌. (ಉಡುಪಿ), ಸುಶಾನ್‌ ಜಿ. ಸುವರ್ಣ (ಬೆಂಗಳೂರು).ಡಿಸ್ಕಸ್‌ ತ್ರೋ: ಚಿನ್ನ - ಮೊಹಮ್ಮದ್‌ ಸಕ್ಲೈನ್‌ (ಮೈಸೂರು), ಬೆಳ್ಳಿ - ನಾಗೇಂದ್ರ ನಾಯ್ಕ್‌ (ಉಕ), ಕಂಚು - ಮೊಹಿತ್‌ರಾಜ್ (ಮೈಸೂರು).ಪೋಲ್‌ವಾಲ್ಟ್‌: ಚಿನ್ನ- ರಾಹುಲ್‌ ನಾಯ್ಕ್ (ಮೈಸೂರು), ಬೆಳ್ಳಿ- ಆದಿತ್ಯ ವಿ. ಎಂ. (ಬೆಂಗಳೂರು), ಕಂಚು - ಲೋಕೇಶ್‌ ರಾಥೋಡ್‌ (ಯಾದಗಿರಿ).

ಮಹಿಳಾ ವಿಭಾಗ:100 ಮೀ. ಹರ್ಡಲ್ಸ್: ಚಿನ್ನ - ಇಶಾ ಎಲಿಝೇಬೆತ್ ರೆಂಜಿತಾ (ಬೆಂಗಳೂರು), ಬೆಳ್ಳಿ- ದೀಕ್ಷಿತಾ ರಾಮಕೃಷ್ಣ (ದ.ಕ.), ಕಂಚು - ರಕ್ಷಿತಾ (ಉಡುಪಿ).200 ಮೀ. ಓಟ: ಚಿನ್ನ - ಜ್ಯೋತಿಕಾ (ಉಡುಪಿ), ಬೆಳ್ಳಿ- ಸ್ತುತು ಶೆಟ್ಟಿ (ಉಡುಪಿ), ಕಂಚು- ಮಮತಾ ಎಂ. (ಮೈಸೂರು).800 ಮೀ. ಓಟ: ಚಿನ್ನ- ವಿಜಯಕುಮಾರಿ ಜಿ.ಕೆ. (ಬೆಂಗಳೂರು), ಬೆಳ್ಳಿ- ದೀಪಶ್ರೀ (ದಕ), ರೇಖಾ ಬಸಪ್ಪ ಪಿರೋಜಿ (ದ.ಕ.).

ಲಾಂಗ್‌ಜಂಪ್‌: ಚಿನ್ನ- ಪವಿತ್ರಾ ಜಿ. (ಉಡುಪಿ), ಬೆಳ್ಳಿ - ಐಶ್ವರ್ಯ ಪಾಟೀಲ್ (ದ.ಕ.), ಕಂಚು- ಶ್ರೀದೇವಿಕಾ ವಿ.ಎಸ್. (ಉಡುಪಿ).ಶಾಟ್‌ಪುಟ್‌: ಚಿನ್ನ - ಅಂಬಿಕಾ ವಿ. (ಮೈಸೂರು), ಬೆಳ್ಳಿ - ಬೃಂದಾ ಎಸ್. (ಮೈಸೂರು), ಕಂಚು- ಮಾದುರ್ಯ (ಉಡುಪಿ).ಜಾವೆಲಿನ್ ತ್ರೋ: ಚಿನ್ನ- ಶ್ರಾವ್ಯ (ಉಡುಪಿ), ಬೆಳ್ಳಿ- ಜೀವಿತಾ ಡಿ. (ದ.ಕ.), ಕಂಚು- ಸಿಂಚನ (ದ.ಕ.).

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸ್ವ ನಿಯಂತ್ರಣದಿಂದ ಏಡ್ಸ್ ದೂರವಿಡಲು ಸಾಧ್ಯ: ತಾರಾ ಯು. ಆಚಾರ್ಯ
ಛಾಯಾಗ್ರಾಹಕರು ಹೊಸ ತಂತ್ರಜ್ಞಾನಕ್ಕೆ ಒಗ್ಗಿಕೊಳ್ಳಬೇಕು: ಕೇಮಾರು ಶ್ರೀ