ಕಲ್ಯಾಣ ಕರ್ನಾಟಕ ಭಾಗದ 371 ಜೆ ಪ್ರಮಾಣಪತ್ರ ಪರರು ಪಡೆಯುತ್ತಿದ್ದಾರೆ: ಸಚಿವ ಶಿವರಾಜ ತಂಗಡಗಿ

KannadaprabhaNewsNetwork |  
Published : Feb 19, 2024, 01:31 AM IST
ಕಾರಟಗಿಯಲ್ಲಿ ಶನಿವಾರ ಸಂಜೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ, ಡಿಸಿ ನಳಿನ ಅತುಲ್‌ ಸೇರಿದಂತೆ ಇತರರು ಇದ್ದರು. | Kannada Prabha

ಸಾರಾಂಶ

ಹೈದರಾಬಾದ್ ಕರ್ನಾಟಕಕ್ಕೆ ಸಂಬಂಧಿಸದೇ ಇರುವವರು ೩೭೧ ಜೆ ಪ್ರಮಾಣಪತ್ರ ಪಡೆದು ಮೂಲ ನಿವಾಸಿಗಳಿಗೆ ಅನ್ಯಾಯ ಮಾಡುತ್ತಿದ್ದಾರೆ. ಇದನ್ನು ಸರಿಪಡಿಸುವ ಪ್ರಯತ್ನ ಸರ್ಕಾರದ ಮಟ್ಟದಲ್ಲಿ ನಡೆದಿದೆ

ಕಾರಟಗಿ: ಹೈದರಾಬಾದ್ ಕರ್ನಾಟಕಕ್ಕೆ ಸಂಬಂಧಿಸದೇ ಇರುವವರು ೩೭೧ ಜೆ ಪ್ರಮಾಣಪತ್ರ ಪಡೆದು ಮೂಲ ನಿವಾಸಿಗಳಿಗೆ ಅನ್ಯಾಯ ಮಾಡುತ್ತಿದ್ದಾರೆ. ಇದನ್ನು ಸರಿಪಡಿಸುವ ಪ್ರಯತ್ನ ಸರ್ಕಾರದ ಮಟ್ಟದಲ್ಲಿ ನಡೆದಿದೆ ಎಂದು ಸಚಿವ ಶಿವರಾಜ್ ತಂಗಡಗಿ ಹೇಳಿದರು.

ಇಲ್ಲಿನ ತಹಸೀಲ್ದಾರ್ ಕಚೇರಿಯಲ್ಲಿ ಭೂ ದಾಖಲೆಗಳ ಡಿಜಿಟಲೀಕರಣಕ್ಕೆ ಚಾಲನೆ ನೀಡುವ ಸಂದರ್ಭದಲ್ಲಿ, ಹೈ-ಕ ಹೋರಾಟ ಸಮಿತಿ ಸದಸ್ಯರು ಸೇರಿದಂತೆ ಸಾರ್ವಜನಿಕರು ೩೭೧ ಜೆ ಪ್ರಮಾಣಪತ್ರ ನೀಡಲು ಅಧಿಕಾರಿಗಳು ಸಾಕಷ್ಟು ವಿಳಂಬ ನೀತಿ ಅನುಸರಿಸುತ್ತಿದ್ದಾರೆ. ಇದು ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ ಅಸಲಿ ವೇಳೆಗೆ ಸಮಸ್ಯೆಯಾಗುತ್ತಿದೆ. ಅಧಿಕಾರಿಗಳ ಬೇಜವಾಬ್ದಾರಿ ನೀತಿಗೆ ಕಡಿವಾಣ ಹಾಕಿ ಎಂದು ಹೇಳಿದಾಗ ಸಚಿವರು ಪ್ರತಿಕ್ರಿಯಿಸಿದರು.

ಕೆಲವು ವ್ಯಕ್ತಿಗಳು ಕಲ್ಯಾಣ ಕರ್ನಾಟಕ ಭಾಗದಲ್ಲಿ ವಾಸವಿರದ ಕುಟುಂಬಗಳ ವ್ಯಕ್ತಿಗಳ ಹೆಸರಿನಲ್ಲೂ ೩೭೧ಜೆ ಪ್ರಮಾಣಪತ್ರ ಪಡೆಯಲು ಹವಣಿಸುತ್ತಾರೆ. ಕಲ್ಯಾಣ ಕರ್ನಾಟಕ ಭಾಗದ ಜನತೆಗೆ ಎಲ್ಲ ಸೌಲಭ್ಯಗಳು ದೊರೆಯುವ ನಿಟ್ಟಿನಲ್ಲಿ ಸರ್ಕಾರ ೩೭೧(ಜೆ) ಅಡಿ ವಾಸದ ಪ್ರಮಾಣಪತ್ರ ಪಡೆಯಲು ಅವಕಾಶ ಕಲ್ಪಿಸಿದೆ. ೨೦೧೩ಕ್ಕಿಂತಲೂ ಮೊದಲು ವಾಸವಾಗಿರುವ ಕುಟುಂಬಕ್ಕೆ ಪ್ರಮಾಣಪತ್ರ ಪಡೆಯುವ ಅವಕಾಶವಿದೆ. ಆದರೆ, ಕೆಲವರು ಇಲಾಖೆಗೆ ತಪ್ಪು ಮಾಹಿತಿ ನೀಡಿ ಈ ಭಾಗದಲ್ಲಿ 10 ವರ್ಷಗಳಿಂದ ವಾಸವಾಗಿರುವ ಕುರಿತು ಪ್ರಮಾಣಪತ್ರ ಪಡೆದು ಉದ್ಯೋಗ ಮತ್ತು ಶಿಕ್ಷಣದಲ್ಲಿ ಮಿಸಲಾತಿ ಪಡೆಯಲು ಮುಂದಾಗುತ್ತಾರೆ ಎಂದರು.

ಕೆಲವು ವ್ಯಕ್ತಿಗಳು ಕಲ್ಯಾಣ ಕರ್ನಾಟಕ ಭಾಗದಲ್ಲಿ ವಾಸವಿರದ ಕುಟುಂಬಗಳ ವ್ಯಕ್ತಿಗಳ ಹೆಸರಿನಲ್ಲೂ ೩೭೧ಜೆ ಪ್ರಮಾಣಪತ್ರ ಪಡೆಯಲು ಹವಣಿಸುತ್ತಾರೆ. ಈ ರೀತಿ ಆಗಬಾರದೆಂಬ ಉದ್ದೇಶದಿಂದ ಕೆಲವು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ೩೭೧(ಜೆ) ಅಡಿ ಪ್ರಮಾಣಪತ್ರ ಪಡೆಯಲು ಇರುವ ಗೊಂದಲಗಳನ್ನು ಸರಿಪಡಿಸಲು ಸರಕಾರದ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಶೀಘ್ರ ಇದಕ್ಕೆ ಪರಿಹಾರ ಒದಗಿಸಲಾಗುವುದು ಎಂದು ಸಚಿವ ತಂಗಡಗಿ ಭರವಸೆ ನೀಡಿದರು.

ಸಮಿತಿ ದೂರು: ಕ-ಕ ಭಾಗದ ಮಕ್ಕಳಿಗೆ ೩೭೧(ಜೆ) ಅಡಿಯಲ್ಲಿ ಪ್ರಮಾಣ ಪತ್ರ ನೀಡಲು ಅಧಿಕಾರಿಗಳು ಸಾಕಷ್ಟು ವಿಳಂಬ ಮಾಡುತ್ತಿರುವುದರಿಂದ ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳು ಮತ್ತು ಪಾಲಕರು ಸಾಕಷ್ಟು ಸಂಕಷ್ಟ ಅನುಭವಿಸುತ್ತಿದ್ದಾರೆ. ಅಧಿಕಾರಿಗಳು ಅನವಶ್ಯಕ ದಾಖಲೆಗಳನ್ನು ಕೇಳಿ ಪ್ರಮಾಣಪತ್ರ ನೀಡದೆ ನುಣಚಿಕೊಳ್ಳುತ್ತಿದ್ದಾರೆ. ೩೭೧ಜೆ ಅಡಿ ಉದ್ಯೋಗದಲ್ಲಿ ಮತ್ತು ಶಿಕ್ಷಣದಲ್ಲಿ ಮೀಸಲಾತಿ ಪಡೆಯಲು ಪ್ರಮಾಣಪತ್ರ ಅವಶ್ಯಕತೆ ಇದೆ. ಆದರೆ ಪ್ರಮಾಣಪತ್ರ ಪಡೆಯಲು ಬೇಕಾದ ದಾಖಲೆಗಳಿಗಾಗಿ ತಿರುಗಾಡಿಸುತ್ತಿರುವುದಕ್ಕೆ ಜೆಇಇ, ನೀಟ್ ಪ್ರವೇಶ ಪರೀಕ್ಷೆಗಳಿಗೆ ಪ್ರಮಾಣ ಪತ್ರ ಇಲ್ಲದೇ ತೊಡಕಾಗಿ ವಿದ್ಯಾರ್ಥಿಗಳು ಆತಂಕದಲ್ಲಿದ್ದಾರೆ. ತಾಲೂಕು ಕಚೇರಿ ಮತ್ತು ಸಹಾಯಕ ಆಯುಕ್ತರ ಕಚೇರಿಯಲ್ಲಿ ಸರಿಯಾದ ಮಾಹಿತಿ ನೀಡುವುದಿಲ್ಲ ಮತ್ತು ಪ್ರಮಾಣ ನೀಡುವಲ್ಲಿ ಅನವಶ್ಯಕ ತೊಂದರೆ ಮಾಡುತ್ತಾರಲ್ಲದೇ ಇಲ್ಲಸಲ್ಲದ ಸಬೂಬು ನೀಡಿ ಪ್ರಮಾಣ ಪತ್ರ ನೀಡಲು ವಿಳಂಬ ಮಾಡುತ್ತಿದ್ದಾರೆ ಎಂದು ಸದಸ್ಯರೂ ಸೇರಿದಂತೆ ಕಚೇರಿಯಲ್ಲಿ ಸೇರಿದ್ದ ಸಾರ್ವಜನಿಕರು ಸಚಿವ ಗಮನಕ್ಕೆ ಸಮಸ್ಯೆ ಮೇಲೆ ಬೆಳಕು ಚೆಲ್ಲಿದರು.

ಜಿಲ್ಲಾಧಿಕಾರಿ ನಳಿನ್ ಅತುಲ್, ಎಸಿ ಮಹೇಶ್ ಮಾಲಗಿತ್ತಿ, ತಹಸೀಲ್ದಾರ್ ಎಂ. ಕುಮಾರಸ್ವಾಮಿ, ಪಿಐ ಪ್ರದೀಪ್ ಬಿಸೆ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

5000 ಅಂಗನವಾಡಿಗಳಲ್ಲಿ ಎಲ್‌ಕೆಜಿ, ಯುಕೆಜಿ : ಲಕ್ಷ್ಮೀ
ನಾಯಿಗಳ ಮೇಲೂ ತೆರಿಗೆ ಹೇರಿಕೆಗೆ ಮುಂದಾದ ಸರ್ಕಾರ!