ನೈತಿಕತೆ ಕಳೆದು ಹೋಗಿ, ಸಾಂಸ್ಕೃತಿಕ ನಾಯಕತ್ವ ಕುಸಿದಂತಿದೆ

KannadaprabhaNewsNetwork |  
Published : Jul 19, 2025, 01:00 AM IST
13 | Kannada Prabha

ಸಾರಾಂಶ

ಇಂದು ಸಾಂಸ್ಕೃತಿಕ ನಾಯಕತ್ವ ಕುಸಿದು, ಧಾರ್ಮಿಕ ವ್ಯವಸ್ಥೆ ಮೇಲೆಳುತ್ತಿದೆ. ಇದೆಲ್ಲರ ವಿರುದ್ಧ ಧ್ವನಿ ಎತ್ತಬೇಕಿದೆ.

ಕನ್ನಡಪ್ರಭ ವಾರ್ತೆ ಮೈಸೂರುಭಾರತದ ಪ್ರಜಾಪ್ರಭುತ್ವ, ಸಂವಿಧಾನ, ಆಡಳಿತ ಚರ್ಚೆಯ ವಿಷಯಗಳಾಗಿವೆ. ಅವೆಲ್ಲವನ್ನು ಸಾಮಾನ್ಯ ಜನರಿಗೆ ತಲುಪಿಸಲು ಹೆಣಗಾಡುವ ಪರಿಸ್ಥಿತಿ ಎದುರಾಗಿದೆ. ನೈತಿಕತೆ ಕಳೆದು ಹೋಗಿ, ಸಾಂಸ್ಕೃತಿಕ ನಾಯಕತ್ವ ಕುಸಿದಂತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ವಿಷಾದಿಸಿದರು.ಕರ್ನಾಟಕ ರಾಜ್ಯ ಮುಕ್ತ ವಿವಿಯ ಘಟಿಕೋತ್ಸವ ಭವನದಲ್ಲಿ ಡಾ. ಬಾಬು ಜಗಜೀವನ ರಾಮ್ ಅವರ ಅಧ್ಯಯನ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಭಾರತದ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಪ್ರಗತಿಗೆ ಡಾ. ಬಾಬು ಜಗಜೀವನ ರಾಮ್ ಅವರ ಕೊಡುಗೆಗಳು ಎಂಬ ವಿಷಯ ಕುರಿತ ಒಂದು ದಿನದ ರಾಜ್ಯ ಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಇಂದು ಸಾಂಸ್ಕೃತಿಕ ನಾಯಕತ್ವ ಕುಸಿದು, ಧಾರ್ಮಿಕ ವ್ಯವಸ್ಥೆ ಮೇಲೆಳುತ್ತಿದೆ. ಇದೆಲ್ಲರ ವಿರುದ್ಧ ಧ್ವನಿ ಎತ್ತಬೇಕಿದೆ. ಮುಂದಿನ ಪೀಳಿಗೆಗಾಗಿ ಸಮ ಸಮಾಜದ ರಾಷ್ಟ್ರ ಕಟ್ಟಲು ಯುವಕರು, ಜನಸಾಮಾನ್ಯರನ್ನು ಪ್ರೇರೆಪಿಸಬೇಕಿದೆ ಎಂದು ಅವರು ಕರೆ ನೀಡಿದರು.ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆ.ಎಚ್. ಮುನಿಯಪ್ಪ ಮಾತನಾಡಿ, ಅಂಬೇಡ್ಕರ್ ಅವರ ಹೋರಾಟದಂತೆ ಬಾಬು ಜಗಜೀವನ್ ರಾಮ್ ಅವರು ಹೋರಾಟ ನಡೆಸಿ, ಸಮಾನತೆಯ ಹರಿಕಾರಾಗಿದ್ದಾರೆ. ಅವರು ಜೀವನಲ್ಲಿ ಬಹಳ ದೂರ ದೃಷ್ಟಿಯಿಂದ ಸಮಾಜದಲ್ಲಿ ಅಸ್ಪೃಶ್ಯತೆ ಶೋಷಣೆ ವಿರೋಧಸಿ, ಸಮಾನತೆ ಆಶಯದಲ್ಲಿ ಹಲವು ಕ್ಷೇತ್ರದಲ್ಲಿ ಮೀಸಲಾತಿ ಕಾನೂನು ಜಾರಿಗೆ ತಂದಿದ್ದಾಗಿ ಅವರು ಹೇಳಿದರು.

ಕಾರ್ಯಕರ್ಮದಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿವಿ ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ, ಕುಲಸಚಿವ ಪ್ರೊ.ಎಸ್.ಕೆ. ನವೀನ್ ಕುಮಾರ್, ಡಾ. ಬಾಬು ಜಗಜೀವನ ರಾಮ್ ಅಧ್ಯಯನ ಮತ್ತು ವಿಸ್ತರಣಾ ಕೇಂದ್ರದ ನಿರ್ದೇಶಕ ಡಾ.ಆರ್. ಶರಣಮ್ಮ ಮೊದಲಾದವರು ಇದ್ದರು.

PREV

Latest Stories

ಸಂಕಷ್ಟಗಳಿವೆ ಆದರೆ ಸೇವಾ ಸಂತೃಪ್ತಿ ನಮಗಿದೆ: ದಶರಥ ಸಾವೂರ
ರೈತರನ್ನು ಸ್ಮರಿಸುವ, ನೋವಿಗೆ ಸ್ಪಂದಿಸುವ ಕಾರ್ಯವಾಗಲಿ
ಮಳೆಯ ರಭಸಕ್ಕೆ ಮನೆಗಳಿಗೆ ನುಗ್ಗಿದ ನೀರು: ಪರಿಶೀಲನೆ