ಪ್ರಶಸ್ತಿ ಪಡೆದ ಸಿನಿಮಾಗಳು, ನಟ, ನಟಿಯರು

KannadaprabhaNewsNetwork |  
Published : Nov 04, 2025, 01:02 AM IST
12 | Kannada Prabha

ಸಾರಾಂಶ

2019ನೇ ಸಾಲಿನ ಡಾ. ರಾಜಕುಮಾರ್‌ ಪ್ರಶಸ್ತಿಯನ್ನು ಉಮಾಶ್ರೀ, ಪುಟ್ಟಣ್ಣ ಕಣಗಲ್‌ ಪ್ರಶಸ್ತಿಯನ್ನು ಎನ್‌.ಆರ್‌. ನಂಜುಂಡೇಗೌಡ,

ಕನ್ನಡಪ್ರಭ ವಾರ್ತೆ ಮೈಸೂರುಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ 2018, 2019ನೇ ವರ್ಷದ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಮಾಡಿದರು.ಕರ್ನಾಟಕ ರಾಜ್ಯ ಮುಕ್ತ ವಿವಿಯ ಘಟಿಕೋತ್ಸವ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ 2018ನೇ ಸಾಲಿನ ಡಾ. ರಾಜುಕುಮಾರ್‌ ಪ್ರಶಸ್ತಿಯನ್ನು ಜಿ.ಕೆ. ಶ್ರೀನಿವಾಸಮೂರ್ತಿ, ಪುಟ್ಟಣ್ಣ ಕಣಗಾಲ್‌ ಪ್ರಶಸ್ತಿಯನ್ನು ಪಿ. ಶೇಷಾದ್ರಿ, ಡಾ. ವಿಷ್ಣುವರ್ಧನ್‌ ಪ್ರಶಸ್ತಿಯನ್ನು ಬಿ.ಎಸ್‌. ಬಸವರಾಜು ಅವರಿಗೆ ಪ್ರದಾನ ಮಾಡಲಾಯಿತು.2019ನೇ ಸಾಲಿನ ಡಾ. ರಾಜಕುಮಾರ್‌ ಪ್ರಶಸ್ತಿಯನ್ನು ಉಮಾಶ್ರೀ, ಪುಟ್ಟಣ್ಣ ಕಣಗಲ್‌ ಪ್ರಶಸ್ತಿಯನ್ನು ಎನ್‌.ಆರ್‌. ನಂಜುಂಡೇಗೌಡ, ಡಾ. ವಿಷ್ಣುವರ್ಧನ್‌ ಪ್ರಶಸ್ತಿಯನ್ನು ರಿಚರ್ಡ್‌ ಕ್ಯಾಸ್ಟಲೀನೋ ಅವರಿಗೆ ಪ್ರದಾನ ಮಾಡಲಾಯಿತು.ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿ ಪೈಕಿ ಮೊದಲನೇ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು 2018ಕ್ಕೆ ಆ ಕರಾಳರಾತ್ರಿ, 2019ಕ್ಕೆ ಮೋಹನದಾಸ ಪಡೆದುಕೊಂಡಿತು. ನಿರ್ಮಾಪಕರು ಮತ್ತು ನಿರ್ದೇಶಕರು ಪ್ರಶಸ್ತಿ ಸ್ವೀಕರಿಸಿದರು.ಎರಡನೇ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು 2018ಕ್ಕೆ ರಾಮನಸವಾರಿ 2019ಕ್ಕೆ ಡಾರ್ಲಿಂಗ್‌ ಕೃಷ್ಣ ನಟನೆ, ನಿರ್ದೇಶನದ ಲವ್‌ ಮಾಕ್ಟೈಲ್‌ ಪಡೆದುಕೊಂಡಿತು. ಮೂರನೇ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು 2018ಕ್ಕೆ ಒಂದಲ್ಲಾ ಎರಡಲ್ಲಾ ಸಿನಿಮಾ, 2019ಕ್ಕೆ ಅರ್ಘ್ಯಂ ತನ್ನದಾಗಿಸಿಕೊಂಡಿತು. ವಿಶೇಷ ಸಾಮಾಜಿಕ ಕಾಳಜಿಯ ಚಿತ್ರ ಪ್ರಶಸ್ತಿಯನ್ನು 2018ಕ್ಕೆ ಸಂತ ಕವಿ ಕನಕದಾಸರ ರಾಮಧಾನ್ಯ ಪಡೆದರೆ, 2019ಕ್ಕೆ ಕನ್ನೇರಿ ಪಡೆದುಕೊಂಡಿತು.ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ ಪ್ರಶಸ್ತಿಯನ್ನು 2018ಕ್ಕೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಸಿನಿಮಾ, 2019ಕ್ಕೆ ಇಂಡಿಯಾ ವರ್ಸಸ್‌ ಇಂಗ್ಲೆಂಡ್‌ ಸಿನಿಮಾ ಪಡೆಯಿತು. ಈ ಎರಡೂ ಸಿನಿಮಾದ ನಿರ್ದೇಶಕರಾದ ರಿಷಬ್‌ ಶೆಟ್ಟಿ ಮತ್ತು ನಾಗತಿಹಳ್ಳಿ ಚಂದ್ರಶೇಖರ್‌ ಪ್ರಶಸ್ತಿ ಸ್ವೀಕರಿಸಿದರು.ಅತ್ಯುತ್ತಮ ಮಕ್ಕಳ ಚಿತ್ರ ಪ್ರಶಸ್ತಿಯನ್ನು 2018ಕ್ಕೆ ಹೂವುಬಳ್ಳಿ, 2019ನೇ ಸಾಲಿಗೆ ಎಲ್ಲಿ ಆಡೋದು ನಾವು ಎಲ್ಲಿ ಆಡೋದು ಸಿನಿಮಾ ಪಡೆದುಕೊಂಡಿತು. ನಿರ್ದೇಶಕರ ಪ್ರಥಮ ನಿರ್ದೇಶನದ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು 2018ಕ್ಕೆ ಬೆಳಕಿನ ಕನ್ನಡಿ ಮತ್ತು 2019ಕ್ಕೆ ಗೋಪಾಲಗಾಂಧಿ, ಅತ್ಯುತ್ತಮ ಕರ್ನಾಟಕ ಪ್ರಾದೇಶಿಕ ಭಾಷಾಚಿತ್ರ ಪ್ರಶಸ್ತಿಯನ್ನು 2018ಕ್ಕೆ ದೇಯಿಬೈದೇತಿ (ತುಳು), 2019ಕ್ಕೆ ಟ್ರಿಬಲ್‌ ತಲಾಕ್‌(ಬ್ಯಾರಿ ಭಾಷೆ) ಪಡೆಯಿತು.ಅತ್ಯುತ್ತಮ ನಟ ಸುಬ್ಬಯ್ಯನಾಯ್ಡು ಪ್ರಶಸ್ತಿಯನ್ನು 2018ಕ್ಕೆ ಅಮ್ಮನ ಮನೆ ಸಿನಿಮಾದ ನಟನೆಗಾಗಿ ರಾಘವೇಂದ್ರ ರಾಜ್‌ಕುಮಾರ್‌ಪಡೆದರೆ, 2019ಕ್ಕೆ ಪೈಲ್ವಾನ್‌ಸಿನಿಮಾದ ನಟನೆಗೆ ಕಿಚ್ಚ ಸುದೀಪ್‌ಪಡೆದರು. ಅತ್ಯುತ್ತಮ ನಟಿ ಪ್ರಶಸ್ತಿಯನ್ನು 2018ಕ್ಕೆ ಇರುವುದೆಲ್ಲವ ಬಿಟ್ಟು ಸಿನಿಮಾ ನಟನೆಗಾಗಿ ಮೇಘನಾ ರಾಜ್‌ ಮತ್ತು 2019ಕ್ಕೆ ತ್ರಯಂಬಕಂ ಸಿನಿಮಾಕ್ಕಾಗಿ ಅನುಪಮಾಗೌಡ ತಮ್ಮದಾಗಿಸಿಕೊಂಡರು. ಅತ್ಯುತ್ತಮ ಪೋಷಕ ನಟ ಕೆ.ಎಸ್‌. ಅಶ್ವಥ್‌ಶಾಸ್ತ್ರಿ ಪ್ರಶಸ್ತಿಯನ್ನು 2018ಕ್ಕೆ ಚೂರಿಕಟ್ಟೆ ಸಿನಿಮಾ ನಟನೆಗಾಗಿ ಶ್ರೀ ಬಾಲಾಜಿ ಮನೋಹರ್‌ ಮತ್ತು 2019ಕ್ಕೆ ತಬಲ ನಾಟಿ ಪಡೆದುಕೊಂಡರು. ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಯನ್ನು 2018ಕ್ಕೆ ವೀಣಾ ಸುಂದರ್‌, 2019ಕ್ಕೆ ಅನೂಷಾ ಕೃಷ್ಣ ತಮ್ಮದಾಗಿಸಿಕೊಂಡರು. ಅತ್ಯುತ್ತಮ ಕಥೆ ಪ್ರಶಸ್ತಿಯನ್ನು 2018ಕ್ಕೆ ಎಸ್‌. ಹರೀಶ್‌ ಮತ್ತು 2019ಕ್ಕೆ ಜಯಂತ್‌ಕಾಯ್ಕಿಣಿ ಪಡೆದರು.ಅತ್ಯುತ್ತಮ ಸಂಭಾಷಣೆ ಪ್ರಶಸ್ತಿಯನ್ನು 2018ಕ್ಕೆ ಶಿರೀಷ್‌ಜೋಷಿ ಮತ್ತು 2019ಕ್ಕೆ ಬರಗೂರು ರಾಮಚಂದ್ರಪ್ಪ, ಅತ್ಯುತ್ತಮ ಛಾಯಾಗ್ರಹಣ ಪ್ರಶಸ್ತಿಯನ್ನು 2018ಕ್ಕೆ ಐ. ನವೀನ್‌ಕುಮಾರ್‌, 2019ಕ್ಕೆ ಜಿ.ಎಸ್‌. ಭಾಸ್ಕರ್‌ ಪಡೆದುಕೊಂಡರು. ಅತ್ಯುತ್ತಮ ಸಂಗೀತ ನಿರ್ದೇಶನ 2018ಕ್ಕೆ ಕೆಜಿಎಫ್‌ ಚಿತ್ರಕ್ಕಾಗಿ ರವಿ ಬಸ್ರೂರ್‌ಮತ್ತು 2019ಕ್ಕೆ ಯಜಮಾನ ಸಿನಿಮಾಕ್ಕಾಗಿ ವಿ. ಹರಿಕೃಷ್ಣ ಪಡೆದುಕೊಂಡರು. ಅತ್ಯುತ್ತಮ ಸಂಕಲನಕಾರ ಪ್ರಶಸ್ತಿಯನ್ನು 2018ಕ್ಕೆ ಸುರೇಶ್‌ಆರ್ಮುಗಂ, 2019ಕ್ಕೆ ಜಿ. ಬಸವರಾಜ್‌ಅರಸ್‌ ತಮ್ಮದಾಗಿಸಿಕೊಂಡರು.ಅತ್ಯುತ್ತಮ ಬಾಲನಟ ಪ್ರಶಸ್ತಿಯನ್ನು ಮಾಸ್ಟರ್‌ಆರ್ಯನ್‌, ಮಾಸ್ಟರ್‌ ಪ್ರೀತಮ್‌ ಕ್ರಮವಾಗಿ 2018, 2019ನೇ ಸಾಲಿಗೆ ತಮ್ಮದಾಗಿಸಿಕೊಂಡರೆ, ಅತ್ಯುತ್ತಮ ಬಾಲನಟಿ ಪ್ರಶಸ್ತಿಯನ್ನು 2018ಕ್ಕೆ ಬೇಬಿ ಸಿಂಚನ, 2019ಕ್ಕೆ ಬೇಬಿ ವೈಷ್ಣವಿ ಅಡಿಗ ಪಡೆದುಕೊಂಡರು.ಅತ್ಯುತ್ತಮ ಕಲಾ ನಿರ್ದೇಶನ ಪ್ರಶಸ್ತಿಯನ್ನು 2018ಕ್ಕೆ ಜೆ. ಶಿವಕುಮಾರ್‌, 2019ಕ್ಕೆ ಹೊಸ ಮನೆ ಮೂರ್ತಿ, ಅತ್ಯುತ್ತಮ ಗೀತ ರಚನೆ ಪ್ರಶಸ್ತಿಯನ್ನು 2018ಕ್ಕೆ ಡಾ. ಬರಗೂರು ರಾಮಚಂದ್ರಪ್ಪ, 2019ಕ್ಕೆ ರಝೂಕ್‌ಪುತ್ತೂರು, ಅತ್ಯುತ್ತಮ ಹಿನ್ನೆಲೆ ಗಾಯನ ಪ್ರಶಸ್ತಿ 2018ಕ್ಕೆ ಸಿದ್ಧಾರ್ಥ್‌ಬೆಳ್ಮಣ್ಣು ಮತ್ತು 2019ಕ್ಕೆ ರಘು ದೀಕ್ಷಿತ್‌ಪಡೆದುಕೊಂಡರು.ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿಯನ್ನು 2018ಕ್ಕೆ ಕಲಾವತಿ ದಯಾನಂದ್‌ಮತ್ತು 2019ಕ್ಕೆ ಡಾ. ಜಯದೇವಿ ಜಂಗಮಶೆಟ್ಟಿ ಪಡೆದರು. ತೀರ್ಪುಗಾರರ ವಿಶೇಷ ಪ್ರಶಸ್ತಿಯನ್ನು 2018ಕ್ಕೆ ಅನಂತರಾಯಪ್ಪ ಹೆಚ್ಚಿತ್ರ ಅವರ ಸಮಾನತೆಯ ಕಡೆಗೆ, 2019ಕ್ಕೆ ಅಮೃತಮತಿ ಮತ್ತು ತಮಟೆ ನರಸಿಂಹಯ್ಯ ಪಡೆದುಕೊಂಡವು.ಅತ್ಯುತ್ತಮ ನಿರ್ಮಾಣ ನಿರ್ವಾಹಕ ಪ್ರಶಸ್ತಿಯನ್ನು 2018ಕ್ಕೆ ವಿ. ಥಾಮಸ್‌ ಮತ್ತು 2019ಕ್ಕೆ ಆರ್‌. ಗಂಗಾಧರ್‌ ತಮ್ಮದಾಗಿಸಿಕೊಂಡರು. ಕಿರುಚಿತ್ರ ಪ್ರಶಸ್ತಿ ಪಟ್ಟಿಯಲ್ಲಿ 2018ಕ್ಕೆ ಪಡುವಾರಹಳ್ಳಿ ಮತ್ತು 2019ಕ್ಕೆ ಗುಳೆ ಸಿನಿಮಾ ಪಡೆದುಕೊಂಡವು.ಚಲನಚಿತ್ರ ಸಾಹಿತ್ಯ ಪ್ರಶಸ್ತಿಯಲ್ಲಿ 2018ನೇ ಸಾಲಿಗೆ ಎನ್‌.ಎಸ್‌. ಶಂಕರ್‌ಅವರ ಚಿತ್ರಕಥೆ ಹಾಗೆಂದರೇನು, ಡಾ. ಶರಣು ಹುಲ್ಲೂರು ಅವರ ಅಂಬರೀಶ್‌ ವ್ಯಕ್ತಿ- ವ್ಯಕ್ತಿತ್ವ- ವರ್ಣ ರಂಜಿತ ಬದುಕು ಕೃತಿಗಳು ಪಡೆದುಕೊಂಡವು. 2019ಕ್ಕೆ ರಘುನಾಥ ಚ.ಹ ಅವರ ಸಿನಿಮಾ ಪ್ರಬಂಧಗಳು ಕೃತಿ ಪಡೆದುಕೊಂಡಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲೇಖಕ ತನ್ನನ್ನು ತಾನು ವಿಮರ್ಶೆಗೊಳಪಡಿಸಿಕೊಳ್ಳಬೇಕು
ಕುಂದಾನಗರಿಯಲ್ಲಿ ಬೆಳಗಾವಿ ಉತ್ಸವ