ಧಾರವಾಡ:
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಘಟಿಕೋತ್ಸವದ ಅಧ್ಯಕ್ಷತೆ ವಹಿಸಲಿದ್ದು ಇಸ್ರೋ ನಿಕಟಪೂರ್ವ ಅಧ್ಯಕ್ಷ ಪ್ರೊ. ಎ.ಎಸ್. ಕಿರಣಕುಮಾರ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ ಆಗಮಿಸಲಿದ್ದಾರೆ ಎಂದರು.
ಘಟಿಕೋತ್ಸವದಲ್ಲಿ ಸುವರ್ಣ ಪದಕ, ಪಾರಿತೋಷಕ, ಶಿಷ್ಯವೇತನ ಮತ್ತು ರ‍್ಯಾಂಕ್ ನೀಡಲಾಗುತ್ತಿದೆ. ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಒಟ್ಟು 270 ವಿದ್ಯಾರ್ಥಿಗಳ ಪೈಕಿ 113 ವಿದ್ಯಾರ್ಥಿಗಳು ಉಪಸ್ಥಿತಿಯಲ್ಲಿ ಸುವರ್ಣ ಪದಕ ಪಡೆಯಲಿದ್ದಾರೆ. 57 ವಿದ್ಯಾರ್ಥಿಗಳು ಪಾರಿತೋಷಕ ಹಾಗೂ 78 ವಿದ್ಯಾರ್ಥಿಗಳು ಶಿಷ್ಯವೇತನ ಪಡೆಯಲಿದ್ದಾರೆ. 69 ವಿದ್ಯಾರ್ಥಿಗಳು ರ‍್ಯಾಂಕ್ ಪಡೆಯಲಿದ್ದು 252 ಸಂಶೋಧಕರಿಗೆ ಪಿಎಚ್.ಡಿ ಪ್ರದಾನ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.24030 ಪದವಿ ವಿತರಣೆ:
ಗೌಡಾ ಪ್ರದಾನ:
ಜುಲೈನಲ್ಲಿ ಶೈಕ್ಷಣಿಕ ವರ್ಷದಿಂದ ಪದವಿ ಕೋರ್ಸ್ ಎಐ ಪಠ್ಯಕ್ರಮ ಬೋಧಿಸಲು ಎಲ್ಲ ತಯಾರಿ ನಡೆದಿದೆ. ಈಗಾಗಲೇ ಇರುವ ವಿಷಯಗಳಲ್ಲಿಯೇ 15 ಗಂಟೆ ಎಐ ಆಧಾರಿತ ಪಠ್ಯ ಸೇರ್ಪಡೆಗೆ ರಚಿಸಿರುವ ಸಮಿತಿ ಅಂತಿಮಗೊಳಿಸುತ್ತಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕುಲಪತಿ ಡಾ. ಖಾನ್, ವಿವಿಯ ಆಸ್ತಿ-ಪಾಸ್ತಿ ಉಳಿಸಿಕೊಳ್ಳಲು ಸಮೀಕ್ಷೆ ಕಾರ್ಯ ಶುರುವಾಗಿದೆ. ಈಗಾಗಲೇ ಸರ್ವೇಯರ್ ನೇಮಿಸಿದ್ದು ದಾಖಲೆಗಳ ಸಂಗ್ರಹಣೆ ನಡೆದಿದೆ ಎಂದು ಹೇಳಿದರು.
ಬಸವಣ್ಣನವರ ಕುರಿತಾಗಿ ಅತ್ಯುತ್ತಮ ಕಾರ್ಯ ಮಾಡಿದ ಗಣ್ಯರಿಗೆ ಕವಿವಿಯಿಂದ ಇದೇ ವರ್ಷದಿಂದ ಬಸವಶ್ರೀ ಪ್ರಶಸ್ತಿ ನೀಡಿ ಗೌರವಿಸಲು ತೀರ್ಮಾನಿಸಲಾಗಿದೆ. ಈ ಕುರಿತಾಗಿ ಏ. 27ರಂದು ಸಮಿತಿ ಸಭೆ ನಡೆಸಿ ಹೆಸರು ಅಂತಿಮಗೊಳಿಸಲಾಗುವುದು. ಪ್ರಶಸ್ತಿ ಪುರಸ್ಕೃತರಿಗೆ ₹ 25 ಸಾವಿರ ಮೊತ್ತದ ಪ್ರಶಸ್ತಿ ಇರಲಿದೆ.ಕವಿವಿ ಆರ್ಥಿಕ ಆರೋಗ್ಯ ಸಾಧಾರಣವಾಗಿದೆ. ಹಳೇಯ ವಿವಿಯಾಗಿರುವ ಕಾರಣ ಪಿಂಚಣಿ ವಿತರಣೆ ಸವಾಲಾಗಿದೆ. ಕಳೆದ ವರ್ಷ ₹ 126 ಕೋಟಿ ಪೈಕಿ ಬರೀ ₹ 80 ಕೋಟಿ ಬಂದಿದೆ. ಈ ವರ್ಷ ₹ 136 ಕೋಟಿ ಪೈಕಿ ಬಂದಿದ್ದು ₹ 67.5 ಕೋಟಿ. ಆಂತರಿಕ ಸಂಪನ್ಮೂಲದಿಂದ ಈ ಕೊರತೆ ನೀಗಿಸುವುದು ಕಷ್ಟಸಾಧ್ಯವಾಗಿದೆ. ಪಿಂಚಣಿಗೆ ಪ್ರತಿ ವರ್ಷ ₹ 100 ಕೋಟಿ ನೀಡಿದರೆ, ಆಂತರಿಂಕ ಸಂಪನ್ಮೂಲದಿಂದ ಉಳಿದ ಹಣ ನಿಭಾಯಿಸಬಹುದು ಎಂದು ಕುಲಪತಿ ಡಾ. ಖಾನ್ ಮಾಹಿತಿ ನೀಡಿದರು.