110 ವರ್ಷ ಪೂರೈಸಿದ ಕಸಾಪದಲ್ಲಿದ್ದಾರೆ 2.50 ಲಕ್ಷ ಅಜೀವ ಸದಸ್ಯರು : ಎಸ್‌.ಎಸ್‌.ಸಂತೋಷ್ ಕುಮಾರ್

KannadaprabhaNewsNetwork |  
Published : May 07, 2024, 01:00 AM IST
ನರಸಿಂಹರಾಜಪುರ ತಾಲೂಕು ಕ.ಸಾ.ಪ ಆಶ್ರಯದಲ್ಲಿ ನಡೆದ 110 ನೇ ಸಂಸ್ಥಾಪನಾ ದಿನಾಚರಣೆ ಸಮಾರಂಭವನ್ನು ತಾಲೂಕು ಕನ್ನಡ ಜಾನಪದ ಪರಿಷತ್ ಅಧ್ಯಕ್ಷ  ಹಾಗೂ ನಾಟೀ ವೈದ್ಯ ಈಶ್ವರನಾಯಕ್ ಉದ್ಘಾಟಿಸಿದರು | Kannada Prabha

ಸಾರಾಂಶ

ನರಸಿಂಹರಾಜಪುರ110 ವರ್ಷ ಮುಗಿಸಿದ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಪ್ರಸ್ತುತ 2.50 ಲಕ್ಷ ಅಜೀವ ಸದಸ್ಯರಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಸಂಚಾಲಕ ಎಸ್‌.ಎಸ್‌. ಸಂತೋಷಕುಮಾರ್ ತಿಳಿಸಿದರು.

ತಾ.ಕ.ಸಾ.ಪ ಆಶ್ರಯದಲ್ಲಿ 110 ನೇ ಸಂಸ್ಥಾಪನಾ ದಿನಾಚರಣೆ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

110 ವರ್ಷ ಮುಗಿಸಿದ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಪ್ರಸ್ತುತ 2.50 ಲಕ್ಷ ಅಜೀವ ಸದಸ್ಯರಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಸಂಚಾಲಕ ಎಸ್‌.ಎಸ್‌. ಸಂತೋಷಕುಮಾರ್ ತಿಳಿಸಿದರು.

ಭಾನುವಾರ ಸಂಜೆ ಪ್ರವಾಸಿ ಮಂದಿರ ಸಮೀಪದಲ್ಲಿ ಹಿರಿಯ ಕನ್ನಡ ಕಟ್ಟಾಳು ಪಿ.ಸಿ.ಮ್ಯಾಥ್ಯೂ ಅವರ ಮನೆಯಂಗಳದಲ್ಲಿ ತಾಲೂಕು ಕಸಾಪ ಆಶ್ರಯದಲ್ಲಿ ನಡೆದ ಕಸಾಪ 110 ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಉಪನ್ಯಾಸ ನೀಡಿದರು. ಕಸಾಪ ದಿಂದ ಅದ್ಧೂರಿ ಕಾರ್ಯಕ್ರಮದ ಮೂಲಕ ಜನ ಸಾಮಾನ್ಯರನ್ನು ಮುಟ್ಟಲು ಸಾಧ್ಯವಿಲ್ಲ. ಮನೆಯಂಗಳದಂತಹ ಸಣ್ಣ ಕಾರ್ಯಕ್ರಮ ಜನರಿಗೆ ನೇರವಾಗಿ ತಲುಪುತ್ತದೆ. ವಿಶೇಷವಾಗಿ ಬೇರೆ ರಾಜ್ಯಗಳಿಂದ ನರಸಿಂಹರಾಜಪುರ ತಾಲೂಕಿಗೆ ಬಂದ ಬೇರೆ ಭಾಷಿಗರು ಕನ್ನಡ ಕಲಿತು ಕನ್ನಡಿಗರೇ ಆಗಿರುವುದು ಹೆಮ್ಮೆಯ ಸಂಗತಿಯಾಗಿದೆ. 1915 ರಲ್ಲಿ ಡಿ.ವಿ.ಗುಂಡಪ್ಪ, ನಾಲ್ವಡಿ ಕೃಷ್ಣರಾಯರು ನೇತೃತ್ವದಲ್ಲಿ ಕೇವಲ ನಾಲ್ಕು ಸದಸ್ಯರಿಂದ ಕನ್ನಡ ಸಾಹಿತ್ಯ ಪರಿಷತ್‌ ಜನನ ವಾಯಿತು. ಮೈಸೂರು ಮಹಾರಾಜರು ಮೊದಲು ಅಧ್ಯಕ್ಷರಾಗಿದ್ದರು. ಮೈಸೂರಿಗೆ ಸೀಮಿತವಾಗಿದ್ದ ಕಸಾಪ ನಂತರದ ದಿನಗಳಲ್ಲಿ ರಾಜ್ಯದ ಎಲ್ಲಾ ಕಡೆ ವಿಸ್ತರಣೆಯಾಯಿತು. ಪ್ರಸ್ತುತ ಕನ್ನಡ ಸಾಹಿತ್ಯ ಪರಿಷತ್‌ ರಾಜ್ಯ ಮಾತ್ರವಲ್ಲದೆ ಜಿಲ್ಲೆ, ತಾಲೂಕು, ಹೋಬಳಿ ಹಾಗೂ ಗ್ರಾಮ ಮಟ್ಟದಲ್ಲೂ ಪ್ರಸರಿಸಿದೆ. ಕನ್ನಡದ ಕಾರ್ಯಕ್ರಮದ ಮೂಲಕ ಕನ್ನಡ ಭಾಷೆ ಬೆಳೆಸಲಾಗಿದೆ ಎಂದರು.

ಕಸಾಪ ಪೂರ್ವಾಧ್ಯಕ್ಷ ಪಿ.ಕೆ.ಬಸವರಾಜ್ ಮಾತನಾಡಿ, 1915ರಲ್ಲಿ ಹಿರಿಯ ಸಾಹಿತಿಗಳಿಂದ ಪ್ರಾರಂಭವಾದ ಕಸಾಪ 110 ವರ್ಷ ಮುಗಿಸಿದೆ. ಇತಿಹಾಸ ಗಮನಿಸಿದರೆ ಕನ್ನಡ ಸಾಹಿತಿಗಳು ಎಲ್ಲವನ್ನು ಬರೆದು ಮುಗಿಸಿದ್ದಾರೆ. 8 ಜ್ಞಾನಪೀಠ ಕನ್ನಡ ಸಾಹಿತಿಗಳಿಗೆ ಬಂದಿದೆ. ಹಿಂದೆ ಅಖಂಡ ಕರ್ನಾಟಕ ಇರಲಿಲ್ಲ. 1938ರಲ್ಲಿ ಕನ್ನಡ ನುಡಿ ಎಂಬ ವಾರಪತ್ರಿಕೆ ಬಂದಿತ್ತು. ಇಂದು ಹಿರಿಯ ಕನ್ನಡ ಸಾಹಿತಿಗಳನ್ನು ನೆನಪಿಸಿಕೊಳ್ಳಬೇಕಾಗಿದೆ. ದತ್ತಿ ದಾನಿಗಳ ಆಶಯದಂತೆ ಪ್ರತಿ ವರ್ಷ ದತ್ತಿ ಉಪನ್ಯಾಸ ಏರ್ಪಡಿಸಲಾಗುತ್ತಿದೆ ಎಂದರು.

ತಾಲೂಕು ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಹಾಗೂ ನಾಟೀ ವೈದ್ಯ ಈಶ್ವರನಾಯಕ್ ಉದ್ಘಾಟಿಸಿ ಮಾತನಾಡಿ,1915 ರ ಮೇ 5 ರಂದು ಪ್ರಾರಂಭವಾದ ಕನ್ನಡ ಸಾಹಿತ್ಯ ಪರಿಷತ್‌ ಇಂದು ಹೆಮ್ಮರವಾಗಿ ಬೆಳೆದಿದೆ. ಕನ್ನಡ ಭಾಷೆ ಮನೆ, ಮನೆಗಳಲ್ಲೂ ಬೆಳಗಲಿ ಎಂದರು.

ಸಭೆಯ ಅಧ್ಯಕ್ಷತೆಯನ್ನು ತಾಲೂಕು ಕಸಾಪ ಅಧ್ಯಕ್ಷ ಪೂರ್ಣೇಶ್‌ ವಹಿಸಿದ್ದರು. ಸಭೆಯಲ್ಲಿ ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಭಾಗ್ಯ ನಂಜುಂಡಸ್ವಾಮಿ, ಸಾಹಿತಿ ಜಯಮ್ಮ, ಕಸಾಪ ನಗರ ಘಟಕದ ಅಧ್ಯಕ್ಷ ಪ್ರಶಾಂತ ಶೆಟ್ಟಿ, ಕನ್ನಡದ ಕಟ್ಟಾಳು ಪಿ.ಸಿ. ಮ್ಯಾಥ್ಯೂ, ಜಿಲ್ಲಾ ಕಸಾಪ ಸಂಚಾಲಕ ಬಿ.ನಂಜುಂಡಪ್ಪ, ಜ್ವಾಲಾಮಾಲಿನಿ ಜೇಸಿ ಸಂಸ್ಥೆ ಅಧ್ಯಕ್ಷ ಎಂ.ಪಿ.ಮನು, ತಾ.ಕಸಾಪ ಕಾರ್ಯದರ್ಶಿ ಮಂಜಪ್ಪ, ಹೋಬಳಿ ಕಾರ್ಯದರ್ಶಿ ನಾಗರಾಜ್, ಕಸಾಪ ಮಹಿಳಾ ಘಟಕದ ಕಾರ್ಯದರ್ಶಿ ವಾಸಂತಿ ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ