ಕಾಶ್ಮೀರ ಪಹಲ್ಗಾಮ್‌ ನರಮೇಧ: ಗಣೇಶಪುರದಲ್ಲಿ ಶ್ರದ್ಧಾಂಜಲಿ

KannadaprabhaNewsNetwork |  
Published : Apr 25, 2025, 11:50 PM IST
ಕಾಶ್ಮೀರ ಪಹಲ್ಗಾಮ್‌ ಘಟನೆ ಪ್ರತಿಭಟನೆ | Kannada Prabha

ಸಾರಾಂಶ

ಪಹಲ್ಗಾಮ್‌ನಲ್ಲಿ ಭಯೋತ್ಪಾದಕರ ದಾಳಿಗೆ ಬಲಿಯಾದ ಪ್ರವಾಸಿಗರಿಗೆ ಬಿಜೆಪಿಯ ಮಂಗಳೂರು ನಗರ ಉತ್ತರ ಮಂಡಲದ ಮಹಿಳಾ ಮೋರ್ಚಾ ವತಿಯಿಂದ ಗಣೇಶಪುರ ಶ್ರೀ ಮಹಾಗಣಪತಿ ದೇವಸ್ಥಾನದ ವೃತ್ತದ ಬಳಿ ದೀಪ ಬೆಳಗಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಮೂಲ್ಕಿ

ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರ ದಾಳಿಗೆ ಬಲಿಯಾದ ಪ್ರವಾಸಿಗರಿಗೆ ಬಿಜೆಪಿಯ ಮಂಗಳೂರು ನಗರ ಉತ್ತರ ಮಂಡಲದ ಮಹಿಳಾ ಮೋರ್ಚಾ ವತಿಯಿಂದ ಗಣೇಶಪುರ ಶ್ರೀ ಮಹಾಗಣಪತಿ ದೇವಸ್ಥಾನದ ವೃತ್ತದ ಬಳಿ ದೀಪ ಬೆಳಗಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಸಪ್ನಾ ಸುನೀಲ್ ನೇತೃತ್ವ ವಹಿಸಿದ್ದರು.

ಕಾಶ್ಮೀರದ ಪಹಲ್ಗಾಮ್ ನಲ್ಲಿ ಮಾನವ ಸಮಾಜ ತಲೆತಗ್ಗಿಸುವಂತಹ ಹೀನ ಕೃತ್ಯವೆಸಗಿದ ಪಾಕ್ ನ ಧರ್ಮಾಂಧರ ಅಟ್ಟಹಾಸಕ್ಕೆ ಬಲಿಯಾದ ಹಿಂದೂ ಸಹೋದರರ ನರಮೇಧ ಖಂಡಿಸಲಾಯಿತು.

ಮಾನವೀಯತೆ ಮರೆತು, ವಿಕೃತಿ ಮೆರೆದು ಮರಣ ಮೃದಂಗ ಬಾರಿಸಿದ ದುಷ್ಕರ್ಮಿಗಳಿಗೆ ಮುಂದೆ ಯಾರೂ ಈ ದಿಕ್ಕಿನಲ್ಲಿ ಯೋಚಿಸಲು ಹೆದರುವಂಥಹ ಶಿಕ್ಷೆ ಆಗಬೇಕು, ಅಗಲಿದ ಚೇತನಗಳಿಗೆ ಚಿರಶಾಂತಿ ಹಾಗೂ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ದೊರಕಲಿ ಎಂದು ಒಕ್ಕೊರಲಿನಿಂದ ಪ್ರಾರ್ಥಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಉಪಾಧ್ಯಕ್ಷ ತಿಲಕ್ ರಾಜ್ ಕೃಷ್ಣಾಪುರ, ಜಿಲ್ಲಾ ಯುವ ಮೋರ್ಚಾ ಕಾರ್ಯದರ್ಶಿ ಭರತ್ ರಾಜ್ ಕೃಷ್ಣಾಪುರ, ಮಹಾನಗರ ಪಾಲಿಕಾ ಮಾಜಿ ಸದಸ್ಯ ಲೋಕೇಶ್ ಬೊಳ್ಳಾಜೆ, ಲಕ್ಷ್ಮಿ ಶೇಖರ್ ದೇವಾಡಿಗ, ಸರಿತಾ ಶಶಿಧರ್, ಹೇಮಲತಾ ಡಿ ಸಾಲಿಯಾನ್, ಎಸ್ ಸಿ ಮೋರ್ಚಾದ ಅಧ್ಯಕ್ಷ ಹರೀಶ್ ಪಣಂಬೂರು, ಸುರತ್ಕಲ್ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ದಿನಕರ್ ಇಡ್ಯಾ, ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಸಪ್ನಾ ಸುನಿಲ್, ಜಿಲ್ಲಾ ಸದಸ್ಯ ಹೊನ್ನಯ್ಯ ಕೋಟ್ಯಾನ್, ಮಂಡಲ ಸದಸ್ಯೆ ಶೈಲಜ ಗಣೇಶ್ ಕಟ್ಟೆ, ವಾರ್ಡ್ ಅಧ್ಯಕ್ಷ ಶಾಂತಕುಮಾರ್, ಕಾರ್ಯದರ್ಶಿ ಬ್ರಿಜೇಶ್, ಬಜರಂಗದಳದ ಪ್ರೀತಮ್ ಶೆಟ್ಟಿ, ಬಾಲಕೃಷ್ಣ ಸುವರ್ಣ,ಆರತಿ, ಗಣೇಶ್ ಗಣೇಶ್ ಕಟ್ಟೆ, ಸುನಿಲ್ ಪ್ರಭು, ಶಾಂತಾ ರವೀಂದ್ರ ಮತ್ತು ಕಾರ್ಯಕರ್ತರು ಪಾಲ್ಗೊಂಡಿದ್ದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...