ಕನ್ನಡಪ್ರಭ ವಾರ್ತೆ ಹುನಗುಂದ
ತಾಲೂಕಿನ ಹಾವರಗಿ ಗ್ರಾಮದಲ್ಲಿ ಸೋಮವಾರ ನಡೆದ ದಿ.ಎಸ್.ಆರ್.ಕಾಶಪ್ಪನವರ 23ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಎಸ್.ಆರ್.ಕಾಶಪ್ಪನವರ ಧರ್ಮ, ಗುರು ಪರಂಪರೆಯನ್ನು ಗೌರವ ಭಾವನೆಯಿಂದ ಕಾಣುತ್ತಿದ್ದರು. ಪಂಚಪೀಠಗಳಿಗೆ ಅವರ ಉಪಕಾರ ದೊಡ್ಡದು ಎಂದು ಹೇಳಿದರು.
ಉಜ್ಜಯಿನಿ ಪೀಠದ ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ದಿ.ಎಸ್.ಆರ್.ಕಾಶಪ್ಪನವರ ಅವರು ಧರ್ಮ, ಶೈಕ್ಷಣಿಕವಾಗಿ ಅದ್ಭುತ ತಳಹದಿ ಹಾಕಿದ್ದಾರೆ. ಅವರು ಕಾಯಕದ ಕೀರ್ತಿ ಅಳಿಯದಂತೆ ಮಾಡಿದರು. ಪಂಚಪೀಠಗಳಲ್ಲಿ ಅವರ ನಂಬಿಕೆ, ವಿಶ್ವಾಸ ಸ್ಮರಣೀಯವಾದದ್ದು, ಅವರು ಕೂಡಲಸಂಗಮದಲ್ಲಿ ಆಯೋಜಿಸಿದ್ದ ಪಂಚಪೀಠಾಧೀಶ್ವರ ಉತ್ಸವ ಸುವರ್ಣಾಕ್ಷರಗಳಲ್ಲಿ ಬರೆದಿಡುವ ಕಾರ್ಯ. ಅಂತಹ ಕಾರ್ಯ ಮತ್ತೆ ಆಗಿಲ್ಲ. ವಿಜಯಾನಂದ ಅಂತಹ ಕಾರ್ಯ ನೆರವೇರಿಸುವಂತಾಗಲಿ ಎಂದು ಆಶಿಸಿದರು.ಕಾಶಿ ಪೀಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಎಸ್.ಆರ್. ಕಾಶಪ್ಪನವರ ಸಮಾಜಮುಖಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಅವರ ಮಾರ್ಗದಲ್ಲಿ ಅವರ ಕುಟುಂಬ ಬೇರೆ ಬೇರೆ ಸೇವೆ ಮಾಡುತ್ತಿದೆ. ಅದು ಮುಂದುವರೆಯಲಿ ಎಂದು ಆಶೀರ್ವದಿಸಿದರು.
ದಿಂಡವಾರ ಕುಮಾರಲಿಂಗ ಶಿವಾಚಾರ್ಯ ಸ್ವಾಮೀಜಿ, ಹಡಗಲಿ ನಿಡಗುಂದಿ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಬಿಲ್ ಕೆರೂರ್ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಮುತ್ತತ್ತಿ ಗುರಲಿಂಗ ಶಿವಾಚಾರ್ಯ ಸ್ವಾಮೀಜಿ, ಚಳಗೇರಿ ವಿರೂಪಾಕ್ಷಲಿಂಗ ಶಿವಾಚಾರ್ಯ ಸ್ವಾಮೀಜಿ, ಗಿರಿಸಾಗರ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ತಂಗಡಗಿ ಅನ್ನದಾನಿ ಭಾರತಿ ಸ್ವಾಮೀಜಿ, ಪುರಗೇರಿ ಹಿರೇಮಠದ ಶಿವಸಂಗಮೇಶ್ವರ ದೇವರು, ಹುನಗುಂದ ಗಚ್ಚಿನ ಮಠದ ಅಮರೇಶ್ವರ ದೇವರು, ಮಾಜಿ ಶಾಸಕಿ ಗೌರಮ್ಮ ಕಾಶಪ್ಪನವರ, ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ, ಎಸ್.ಆರ್. ಕಾಶಪ್ಪನವರ ಪ್ರತಿಷ್ಠಾನದ ಖಜಾಂಚಿ ದೇವಾನಂದ ಕಾಶಪ್ಪನವರ, ಪ್ರತಿಷ್ಠಾನದ ಕಾರ್ಯದರ್ಶಿ ಬಸವರಾಜ ಶಿರೂರು ಹಾಗೂ ಇತರರಿದ್ದರು.
- ವಿಜಯಾನಂದ ಕಾಶಪ್ಪನವರ, ಶಾಸಕರು
-ಯೋಗಿ ಕಲ್ಲಿನಾಥ ದೇವರು ದಿಗಂಬರೇಶ್ವರ ಸಂಸ್ಥಾನ ಮಠ ಕೊಲ್ಹಾರ