ಕಾಸರಕೋಡು ಶ್ರೀಧರ ಭಟ್ ಕುಟುಂಬಕ್ಕೆ ಸಾಂತ್ವನ ನಿಧಿ

KannadaprabhaNewsNetwork |  
Published : Sep 16, 2026, 02:45 AM IST
13ನಿಧಿ | Kannada Prabha

ಸಾರಾಂಶ

ಇತ್ತೀಚೆಗೆ ನಿಧನರಾದ ಹಾಸ್ಯ ಕಲಾವಿದ ಕಾಸರಕೋಡು ಶ್ರೀಧರ ಭಟ್ಟರ ಮನೆಗೆ ಯಕ್ಷಗಾನ ಕಲಾರಂಗದ ಪದಾಧಿಕಾರಿಗಳು ಭೇಟಿ ನೀಡಿ ಅವರ ಹೆಂಡತಿ ಮಕ್ಕಳಿಗೆ ಸಾಂತ್ವನ ಹೇಳಿದರು. ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಸಂಸ್ಥೆಯ ವತಿಯಿಂದ 50,000 ರು. ಮೊತ್ತದ ಸಾಂತ್ವನ ನಿಧಿಯ ಚೆಕ್ಕನ್ನು ಕುಟುಂಬಕ್ಕೆ ಹಸ್ತಾಂತರಿಸಿದರು.

ಉಡುಪಿ: ಇತ್ತೀಚೆಗೆ ನಿಧನರಾದ ಹಾಸ್ಯ ಕಲಾವಿದ ಕಾಸರಕೋಡು ಶ್ರೀಧರ ಭಟ್ಟರ ಮನೆಗೆ ಯಕ್ಷಗಾನ ಕಲಾರಂಗದ ಪದಾಧಿಕಾರಿಗಳು ಭೇಟಿ ನೀಡಿ ಅವರ ಹೆಂಡತಿ ಮಕ್ಕಳಿಗೆ ಸಾಂತ್ವನ ಹೇಳಿದರು. ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಸಂಸ್ಥೆಯ ವತಿಯಿಂದ 50,000 ರು. ಮೊತ್ತದ ಸಾಂತ್ವನ ನಿಧಿಯ ಚೆಕ್ಕನ್ನು ಕುಟುಂಬಕ್ಕೆ ಹಸ್ತಾಂತರಿಸಿದರು.

ಕಳೆದ ವರ್ಷ ಶ್ರೀಧರ ಭಟ್ಟರು ಅನಾರೋಗ್ಯದಲ್ಲಿದ್ದಾಗ ಅವರನ್ನು ಎ. ವಿ. ಬಾಳಿಗ ಆಸ್ಪತ್ರೆಗೆ ಸೇರಿಸಿ ಎಂ. ಗಂಗಾಧರ ರಾವ್ ಅವರು ವೖಯಕ್ತಿಕವಾಗಿ ದೊಡ್ಡ ಮೊತ್ತ ಭರಿಸಿದ್ದನ್ನು ಪತ್ನಿ ಮಂಜುಳಾ ಶ್ರೀಧರ ಭಟ್ ಕೃತಜ್ಞತೆಯಿಂದ ಸ್ಮರಿಸಿಕೊಂಡರು.ಈ ಸಂದರ್ಭದಲ್ಲಿ ಕಲಾವಿದ ನೀಲ್ಕೋಡು ಶಂಕರ ಹೆಗಡೆ, ಕಲಾರಂಗದ ಕಾರ್ಯದರ್ಶಿ ಮುರಲಿ ಕಡೆಕಾರ್, ಜೊತೆ ಕಾರ್ಯದರ್ಶಿ ನಾರಾಯಣ ಎಂ.ಹೆಗಡೆ, ಯು.ಎಸ್. ರಾಜಗೋಪಾಲಾಚಾರ್ಯ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭೀಕರ ಅಗ್ನಿ ದುರಂತ: ಒಂದೇ ಕುಟುಂಬದ ನಾಲ್ವರು ಸಜೀವ ದಹನ
ಬರಘೋಷಣೆಗೆ ಆಗ್ರಹಿಸಿ ೨೧ರಂದು ತಾಳಿಕೋಟೆ ಬಂದ್‌