ಕಸ್ತೂರ್ಬಾ ಆಸ್ಪತ್ರೆ ವಿಷನ್‌ ಕ್ಲಿನಿಕ್‌ ಆರಂಭ

KannadaprabhaNewsNetwork |  
Published : Nov 21, 2025, 02:45 AM IST
20ದೃಷ್ಟಿಸಮಗ್ರ ದೃಷ್ಟಿ ಚಿಕಿತ್ಸಾಲಯವನ್ನು ಡಾ.ಶರತ್‌ ರಾವ್ ಉದ್ಘಾಟಿಸಿದರು | Kannada Prabha

ಸಾರಾಂಶ

ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯು ಮಣಿಪಾಲ ಮತ್ತು ಹತ್ತಿರದ ಪ್ರದೇಶಗಳ ನಿವಾಸಿಗಳಿಗಾಗಿ ಪ್ರತ್ಯೇಕ ಸುಧಾರಿತ, ರೋಗಿಸ್ನೇಹಿ ಸಮಗ್ರ ದೃಷ್ಟಿ ಚಿಕಿತ್ಸಾಲಯ - ವಿಷನ್ ಕ್ಲನಿಕ್ ಆರಂಭಿಸಿದೆ. ಇಲ್ಲಿನ ಟೈಗರ್ ಸರ್ಕಲ್ ಬಳಿಯ ಬೇಸಿಕ್ ಲೈಫ್ ಸೈನ್ಸ್ ಕಟ್ಟಡದಲ್ಲಿ ಈ ಕ್ಲಿನಿಕ್ ಕಾರ್ಯನಿರ್ವಹಿಸಲಿದೆ.

ಟೈಗರ್ ಸರ್ಕಲ್‌ನಲ್ಲಿ ಒಂದೇ ಸೂರಿನಡಿ ತಪಾಸಣೆ, ಆರೈಕೆ, ಔಷಧಿ, ಕನ್ನಡಕ ಲಭ್ಯ

ಮಣಿಪಾಲ: ಇಲ್ಲಿನ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯು ಮಣಿಪಾಲ ಮತ್ತು ಹತ್ತಿರದ ಪ್ರದೇಶಗಳ ನಿವಾಸಿಗಳಿಗಾಗಿ ಪ್ರತ್ಯೇಕ ಸುಧಾರಿತ, ರೋಗಿಸ್ನೇಹಿ ಸಮಗ್ರ ದೃಷ್ಟಿ ಚಿಕಿತ್ಸಾಲಯ - ವಿಷನ್ ಕ್ಲನಿಕ್ ಆರಂಭಿಸಿದೆ. ಇಲ್ಲಿನ ಟೈಗರ್ ಸರ್ಕಲ್ ಬಳಿಯ ಬೇಸಿಕ್ ಲೈಫ್ ಸೈನ್ಸ್ ಕಟ್ಟಡದಲ್ಲಿ ಈ ಕ್ಲಿನಿಕ್ ಕಾರ್ಯನಿರ್ವಹಿಸಲಿದೆ.

ಈ ಚಿಕಿತ್ಸಾಲಯವು ಸಂಪೂರ್ಣ ದೃಷ್ಟಿ ಆರೈಕೆ, ತಜ್ಞರ ಸಮಾಲೋಚನೆ, ಕಾಯಿಲೆಗಳ ತಪಾಸಣೆ ಮತ್ತು ತ್ವರಿತ ಔಷಧಿ ಸೂಚನೆ ಸೇವೆಯನ್ನು ಒಂದೇ ಸೂರಿನಡಿ ಒದಗಿಸುತ್ತದೆ. ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳಿಗೆ ಅನುಕೂಲವಾಗುವಂತೆ ಈ ಕ್ಲಿನಿಕ್ ಮಧ್ಯಾಹ್ನ 1 ರಿಂದ ಸಂಜೆ 7 ರವರೆಗೆ ಕಾರ್ಯನಿರ್ವಹಿಸಲಿದೆ.ಈ ಚಿಕಿತ್ಸಾಲಯವನ್ನು ಮಾಹೆಯ ಸಹ ಕುಲಪತಿ (ಆರೋಗ್ಯ ವಿಜ್ಞಾನ) ಡಾ. ಶರತ್ ಕೆ. ರಾವ್ ಅವರು ಉದ್ಘಾಟಿಸಿ, ಕಸ್ತೂರ್ಬಾ ಆಸ್ಪತ್ರೆಯು ಜನರ ನಿತ್ಯದ ಕೆಲಸ ಹಾಗೂ ವಿದ್ಯಾರ್ಥಿಗಳ ಅಧ್ಯಯನ ಬದ್ಧತೆಗಳಿಗೆ ಅಡ್ಡಿಯಾಗದಂತೆ ಎಲ್ಲರಿಗೂ ವಿಶ್ವ ದರ್ಜೆಯ ಕಣ್ಣಿನ ಆರೈಕೆಯನ್ನು ಲಭ್ಯವಾಗುವಂತೆ ಮಾಡುವ ಗುರಿ ಹೊಂದಿದ್ದೇವೆ. ವಿಸ್ತೃತ ಸಮಯವು ಈ ಹೊಸ ಸೇವೆಯ ಪ್ರಮುಖ ಲಕ್ಷಣವಾಗಿದೆ ಎಂದು ಹೇಳಿದರು.ನೇತ್ರವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ಯೋಗೀಶ್ ಕಾಮತ್, ಈ ಹೊಸ ಚಿಕಿತ್ಸಾಲಯದಲ್ಲಿ ಒದಗಿಸಲಾದ ವ್ಯಾಪಕ ಶ್ರೇಣಿಯ ಅಗತ್ಯ ಸೇವೆಗಳ ಕುರಿತು ಮಾಹಿತಿ ನೀಡಿದರು. ಕೆ.ಎಂ.ಸಿ ಮಣಿಪಾಲದ ಡೀನ್ ಡಾ. ಅನಿಲ್ ಕೆ. ಭಟ್, ಮಣಿಪಾಲ ಕ್ಲಸ್ಟರ್‌ನ ಸಿಒಒ ಡಾ. ಸುಧಾಕರ್ ಕಂಟಿಪುಡಿ, ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ಉಪಸ್ಥಿತರಿದ್ದರು.ನಿಖರವಾದ ಕನ್ನಡಕ ಸೂಚನೆಗಳೊಂದಿಗೆ ದೃಷ್ಟಿ ತಿದ್ದುಪಡಿಯ ಅಗತ್ಯವನ್ನು ನಿರ್ಧರಿಸಲು ಸಮಗ್ರ ಮೌಲ್ಯಮಾಪನ, ದೀರ್ಘಕಾಲೀನ ದೃಷ್ಟಿ ನಷ್ಟ ತಡೆಗಟ್ಟಲು ಗ್ಲುಕೋಮಾ, ಕಣ್ಣಿನ ಪೊರೆ ಮತ್ತು ಮಧುಮೇಹ ಕಣ್ಣಿನ ಕಾಯಿಲೆಯಂತಹ ಪರಿಸ್ಥಿತಿಗಳ ಆರಂಭಿಕ ಪತ್ತೆಯ ಜೊತೆಯಲ್ಲಿಯೇ ಕೇಂದ್ರದಲ್ಲಿಯೇ ಇರುವ ಆಪ್ಟಿಕಲ್ ಘಟಕ ( ಕನ್ನಡಕದ ಅಂಗಡಿ) ವಿಶೇಷವಾಗಿದೆ. ಅಪಾಯಿಂಟ್‌ಮೆಂಟ್‌ಗಳು ಮತ್ತು ವಿಚಾರಣೆಗಳಿಗಾಗಿ 0820 2933151ನ್ನು ಸಂಪರ್ಕಿಸಬಹುದು ಎಂದು ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಂತರ್ಜಾತಿ ವಿವಾಹಿತರಿಗೆ ಪೊಲೀಸರ ರಕ್ಷಣೆ : ಗೃಹ ಮಂತ್ರಿ
ಮುಂಬೈ ಮೇಯರ್‌ ಹುದ್ದೆಗೆ ಶಿಂಧೆ ಲಡಾಯಿ?