ಕನ್ನಡಪ್ರಭ ವಾರ್ತೆ ಶಿರಸಿ
ಕಸ್ತೂರಿ ರಂಗನ್ ವರದಿ ಕರಡು ಪ್ರಕಟಣೆಯಲ್ಲಿ ಶಿರಸಿ ತಾಲೂಕಿನ ೨೯ ಗ್ರಾಪಂನ ೧೨೫ ಹಳ್ಳಿಗಳನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಪ್ರಕಟಿಸಲಾಗಿದೆ. ಇವುಗಳನ್ನು ಈ ಪ್ರದೇಶದಿಂದ ಮುಕ್ತಗೊಳಿಸಲು ನಿರ್ಣಯಿಸಲು ಗ್ರಾಪಂ ಅಧ್ಯಕ್ಷರಿಗೆ ಆಗ್ರಹಿಸಿದರು.ಬಂಕನಾಳ ಗ್ರಾಪಂ ಅಧ್ಯಕ್ಷರಾದ ಸುಜಾತ ಎಂ. ನಾಯ್ಕ ಅವರಿಗೆ ನಿರ್ಣಯಿಸಲು ಆಗ್ರಹಿಸಿ ಅಧ್ಯಕ್ಷ ರವೀಂದ್ರ ನಾಯ್ಕ ನೇತೃತ್ವದಲ್ಲಿ ಜಿಲ್ಲಾ ಸಂಚಾಲಕರಾದ ನೆಹರು ನಾಯ್ಕ ಬಿಳೂರು, ಎಂ.ಆರ್. ನಾಯ್ಕ ಕಂಡ್ರಾಜಿ, ಶಶಿಧರ ಬಿ. ನಾಯ್ಕ ಉಮ್ಮಾಡಿ, ಸ್ವಾತಿ ಆರ್. ಜೈನ್, ರಾಜೇಶ ಜಿ. ನಾಯ್ಕ ಕಂಡ್ರಾಜಿ, ರಾಮಣ್ಣ ಬಿ. ನಾಯ್ಕ ಕಾಯಗುಡ್ಡೆ, ಶಿವು ಗೌಡ್ರು ಕೊಟೆಕೊಪ್ಪ, ಮಂಜುನಾಥ ಆರ್. ನಾಯ್ಕ ಕಾಯಗುಡ್ಡೆ ಮುಂತಾದವರ ನಿಯೋಗವು ಮಂಗಳವಾರ ಮನವಿ ನೀಡಿತು.ಉಪಾಧ್ಯಕ್ಷರಾದ ಗಿರಿಜಮ್ಮ ಕೊರವರ ಹಾಗೂ ಗ್ರಾಪಂ ಸದಸ್ಯರಾದ ಶೇಷ ನಾಯ್ಕ, ಶಶಿಧರ ಬಿ. ನಾಯ್ಕ ಉಮ್ಮಾಡಿ ಅವರು ಉಪಸ್ಥಿತರಿದ್ದರು.
೧೨೫ ಪರಿಸರ ಸೂಕ್ಷ್ಮ ಹಳ್ಳಿಗಳುಶಿರಸಿ ತಾಲೂಕಿನ ವಾನಳ್ಳಿ ಗ್ರಾಪಂ ೭ ಹಳ್ಳಿ, ಜಾನ್ಮನೆ ೯ ಹಳ್ಳಿ, ಬಿಸಲಕೊಪ್ಪ ೮, ಬಂಕನಾಳ ೬, ದೇವನಳ್ಳಿ ೫, ಸಾಲ್ಕಣಿ ೬, ಉಂಚಳ್ಳಿ ೬, ಬಂಡಲ ೬, ಇಸಳೂರು ೫, ಶಿವಳ್ಳಿ ೫, ಹಾರೆಹುಲೇಕಲ್ ೪, ಸುಗಾವಿ ೪, ನೆಗ್ಗು ೪, ಮಂಜಗುಣಿ ೪, ಗುಡ್ನಾಪುರ ೩, ಹುಣಸೆಕೊಪ್ಪ ೩, ದೊಡ್ನಳ್ಳಿ ೩, ಸದಾಶಿವಳ್ಳಿ(ತಾರಗೋಡ) ೨, ಯಡಳ್ಳಿ ೩, ಭೈರುಂಬೆ ೨, ಅಂಡಗಿ ೨, ಕೋಡ್ನಗದ್ದೆ ೨, ಮೇಲಿನ ಓಣಿಕೇರಿ ೩, ಸೋಂದಾ ೩, ಬನವಾಸಿ ೧, ಬಾಶಿ ೧, ಹಲಗದ್ದೆ(ಕೋರ್ಲಕಟ್ಟಾ) ೧, ಇಟಗುಳಿ ೧, ಕುಳವೆ ೧ ಹಳ್ಳಿ ಹೀಗೆ ಶಿರಸಿ ತಾಲೂಕಿನಲ್ಲಿ ಒಟ್ಟು ೧೨೫ ಹಳ್ಳಿಗಳು ಕರಡು ಅಧಿಸೂಚನೆಯಲ್ಲಿ ಪರಿಸರ ಸೂಕ್ಷ್ಮ ಪ್ರದೇಶವೆಂದು ಪ್ರಕಟಿಸಲಾಗಿದೆ ಎಂದು ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದ್ದಾರೆ.