ಶಿರಸಿ:
ಕಸ್ತೂರಿ ರಂಗನ್ ವರದಿ ಕರಡು ಅಧಿಸೂಚನೆ ವಿರೋಧಿಸಿ ಜಿಲ್ಲೆಯ ಒಂದು ಲಕ್ಷ ಕುಟುಂಬದಿಂದ ಆಕ್ಷೇಪಣೆ ಪತ್ರ ಸಲ್ಲಿಸುವ ಸಲುವಾಗಿ ಜಿಲ್ಲಾದ್ಯಂತ "ಕಸ್ತೂರಿ ರಂಗನ್ ವರದಿ ವಿರೋಧ ಜಾಥಾ " ಹಮ್ಮಿಕೊಳ್ಳಲಾಗುತ್ತಿದೆ.ಅವೈಜ್ಞಾನಿಕ ಕಸ್ತೂರಿ ರಂಗನ್ ವರದಿ ತಿರಸ್ಕರಿಸಲು ಕೇಂದ್ರ ಸರ್ಕಾರಕ್ಕೆ ಒತ್ತಡ ತರಲು ನಿರ್ಧರಿಸಲಾಗಿದೆ ಎಂದು
ಹೇಳಿದರು."ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ " ಅಧ್ಯಕ್ಷ ರವೀಂದ್ರ ನಾಯ್ಕ, ಶುಕ್ರವಾರ ಕಸ್ತೂರಿ ರಂಗನ್ ವರದಿಯಲ್ಲಿ ಪ್ರಸ್ತಾಪಿಸಿದ ಸೂಕ್ಷ್ಮ ಪ್ರದೇಶದ ಪಟವನ್ನು ಪ್ರದರ್ಶಿಸಿ, ಜಾಥಾದ ಮಾಹಿತಿ ವಿವರಿಸಿದರು.
ಕಸ್ತೂರಿ ರಂಗನ್ ವಿರೋಧ ಜಾಥವು ಜಿಲ್ಲೆಯ ೯ ತಾಲೂಕಿನ, ೧೪೭ಕ್ಕೂ ಅಧಿಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ, ೭೦೪ ಹಳ್ಳಿಗಳಲ್ಲಿ, ೩೦ ದಿನ ಅವಧಿಯಲ್ಲಿ ಜಿಲ್ಲಾದ್ಯಂತ ಸಂಚರಿಸಿ, ಘೋಷಿಸಲ್ಪಟ್ಟ ಪ್ರದೇಶದ ಮನೆ-ಮನೆಗೆ ಸಂಪರ್ಕಿಸಲಿದೆ. ಕಸ್ತೂರಿ ರಂಗನ್ ವರದಿ ಜಾರಿಯಿಂದ ಉಂಟಾಗುವ ಅನಾನುಕೂಲವನ್ನು ಕರಪತ್ರದ ಮೂಲಕ ವಿವರಿಸಿ, ಪ್ರತಿ ಕುಟುಂಬದ ಯಜಮಾನರಿಂದ ಆಕ್ಷೇಪಣೆ ಪತ್ರಕ್ಕೆ ಸಹಿ ಪಡೆಯಲಾಗುವುದೆಂದು ಅವರು ಹೇಳಿದರು.ಅಭಿವೃದ್ಧಿಗೆ ಮಾರಕ:. ಕಸ್ತೂರಿರಂಗನ್ ಪ್ರದೇಶದಲ್ಲಿ ಗುರುತಿಸಲಾದ ಸೂಕ್ಷ್ಮ ಪ್ರದೇಶದಲ್ಲಿ ಶಾಶ್ವತ ಕಟ್ಟಡ, ರಸ್ತೆ, ಕೇಂದ್ರ ಮತ್ತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ನಿರ್ಬಂಧಿಸಿದ ಕೈಗಾರಿಕೆಗಳಿಗೆ ಕಡಿವಾಣ, ಆಧುನಿಕ ಪ್ರವಾಸೋದ್ಯಮಕ್ಕೆ ಮಾರಕ, ಟೌನ್‌ಶಿಫ್ ಮತ್ತು ಬಹುಮಡಿ ಕಟ್ಟಡಗಳಿಗೆ ರಸ್ತೆ ನಿರ್ಮಾಣ, ವಿದ್ಯುತ್ ಸಂಪರ್ಕ, ಬೋರ್‌ವೆಲ್, ಮರಳುಗಾರಿಕೆ, ಥರ್ಮಲ್ ಪವರ್ ಪ್ಲಾಂಟ್, ರೆಡ್ ಕ್ಯಾಟಗರಿ ಕೈಗಾರಿಕೆ. ಗಣಿಗಾರಿಕೆ, ವಾಣಿಜ್ಯಕರಣ, ಹೊಸ ವೈದ್ಯಕೀಯ ಕಟ್ಟಡ ಕಾಮಗಾರಿ ಹಾಗೂ ಎಲ್ಲ ರೀತಿಯ ಗಣಿಗಾರಿಕೆ, ಹೊಸ ಜಲವಿದ್ಯುತ್ ಯೋಜನೆ ನಿಯಂತ್ರಣ ಮುಂತಾದ ಚಟುವಟಿಕೆಗೆ ನಿಬಂಧಿಸುವಿಕೆ• ಅರ್ಜಿ ತಿರಸ್ಕಾರವಾದ ಅರಣ್ಯವಾಸಿಗಳನ್ನು ಅನಧಿಕೃತ ಒತ್ತುದಾರರೆಂದು ಘೋಷಿಸಿ ಒಕ್ಕಲೆಬ್ಬಿಸಲಾಗುವುದು.• ಕೃಷಿ ಚಟುವಟಿಕೆಗೆ ರಾಸಾಯನಿಕ ಸಿಂಪಡನೆ ನಿರ್ಬಂಧ ಹಾಗೂ ರೆಸಾರ್ಟ್, ಏರ್‌ಪೋರ್ಟಗಳ ನಿರ್ಮಾಣ ನಿಯಂತ್ರಣ.• ಕಂದಾಯ ಮತ್ತು ಅರಣ್ಯ ಪ್ರದೇಶಗಳ ಸಾಗುವಳಿದಾರರೂ ನಿರ್ಬಂದಕ್ಕೆ ಒಳಪಡುವರು.
ಜಿಲ್ಲೆಯ ಶೇ. ೬೫.೦೯ರಷ್ಟು ಪರಿಸರ ಸೂಕ್ಷ್ಮ ಪ್ರದೇಶಪಶ್ಚಿಮ ಘಟ್ಟದ ಜೀವ ವೈವಿಧ್ಯ ರಕ್ಷಣೆ ಮತ್ತು ಸಂರಕ್ಷಣೆ ಉದ್ದೇಶದಿಂದ ಕೇಂದ್ರ ಪರಿಸರ, ಅರಣ್ಯ ಸಚಿವಾಲಯವು ಕಸ್ತೂರಿ ರಂಗನ ವರದಿಯಂತೆ, ಜಿಲ್ಲೆಯ ಒಟ್ಟು ೧೦,೫೭೧ ಚ.ಕೀ.ಮೀ ಗಳಲ್ಲಿ, ೬,೯೯೮ ಚ.ಕೀ.ಮೀ ಕ್ಷೇತ್ರವನ್ನು ಪರಿಸರ ಅತೀ ಸೂಕ್ಷ್ಮ ಪ್ರದೇಶವೆಂದು ಗುರುತಿಸಲಾಗಿದೆ. ವರದಿಯ ಅಂಕಿ-ಸಂಖ್ಯೆ ಪ್ರಕಾರ ಉತ್ತರ ಕನ್ನಡ ಜಿಲ್ಲೆಯಲ್ಲಿ ಒಟ್ಟು ಭೋಗೋಳಿಕ ಕ್ಷೇತ್ರದಲ್ಲಿ ಪರಿಸರ ಸೂಕ್ಷ್ಮ ಪ್ರದೇಶ ಶೇ. ೬೫.೦೯ ರಷ್ಟು ಆಗುವುದೆಂದು ಅಂದಾಜಿಸಲಾಗಿದೆ ಎಂದು ರವೀಂದ್ರ ನಾಯ್ಕ ಹೇಳಿದರು.ಕಸ್ತೂರಿ ರಂಗನ ವರದಿಯಂತೆ ಕಾರವಾರ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಗುರುತಿಸಿದ ಸೂಕ್ಷ್ಮ ಪ್ರದೇಶದ ಹಳ್ಳಿಗಳ ಸಂಖ್ಯೆಯ ವಿವರ:
ಕ್ರ.ಸಂತಾಲೂಕ ಹಳ್ಳಿಸಂಖ್ಯೆ೧ಅಂಕೋಲಾ೪೩೨ಭಟ್ಕಳ೨೮೩ಹೊನ್ನಾವರ೪೪೪ಜೋಯಿಡಾ೯೬೫ಕಾರವಾರ೩೬೬ಕುಮಟಾ೪೨೭ಸಿದ್ದಾಪುರ೧೦೩೮ಶಿರಸಿ೧೨೫೯ಯಲ್ಲಾಪುರ೧೮೭ಒಟ್ಟು ೭೦೪