ಕನ್ನಡಪ್ರಭ ವಾರ್ತೆ ಶಿಕಾರಿಪುರ
ತಾಲೂಕಿನ ಜಕ್ಕನಹಳ್ಳಿ ಕುಟ್ರಳ್ಳಿ, ಅಂಬಾರಗೊಪ್ಪ, ಶೀಲವಂತನಕೊಪ್ಪ, ಗುಡ್ಡದ ತುಮ್ಮಿನಕಟ್ಟೆ, ತುಮರಿ ಹೊಸೂರು, ಮದಗಹಾರನಳ್ಳಿ ಮತ್ತಿತರ ಗ್ರಾಮಗಳು ಅತಿ ಸೂಕ್ಷ್ಮ ಪ್ರದೇಶಗಳಲ್ಲ. ಶೇ.100 ಕೃಷಿ ಆಧಾರಿತ ಪ್ರದೇಶವಾಗಿದ್ದು, ಅವುಗಳು ಸ್ವಾತಂತ್ರ್ಯಪೂರ್ವ ಹಾಗೂ ನಂತರದಲ್ಲಿನ ಬಗರ್ ಹುಕುಂ ದರಾಖಸ್ತು ಇನಾಂ ಮತ್ತು ಅರಣ್ಯ ಹಕ್ಕು ಕಾಯ್ದೆಯಡಿ ಸಾಗುವಳಿ ಮಂಜೂರಾತಿ ಪಡೆದ ಭೂಮಿಯಾಗಿದ್ದು, ರೈತರು ಈ ಪ್ರದೇಶದಲ್ಲಿ ಆಹಾರ ಧಾನ್ಯ ಬೆಳೆದು ಬದುಕು ಕಟ್ಟಿಕೊಂಡಿದ್ದಾರೆ ಎಂದು ತಿಳಿಸಿದರು.
ಈ ಪ್ರದೇಶದಲ್ಲಿ ವಾಸಿಸುತ್ತಿರುವ ಜನರಿಗೆ, ರೈತರಿಗೆ ಉತ್ತಮ ರಸ್ತೆ ,ನೀರು, ವಿದ್ಯುತ್, ಶಾಲಾ ಕಾಲೇಜು, ಪತ್ತಿನ ಸಹಕಾರ ಸಂಘ, 110/11 ಕೆ.ವಿ ವಿದ್ಯುತ್ ವಿತರಣಾ ಘಟಕ ಸಹಿತ ವಿವಿಧ ಸೌಲಭ್ಯ ಕಲ್ಪಿಸಲಾಗಿದೆ. ಯಾವುದೇ ವನ್ಯ ಮೃಗಗಳ ಅವಾಸ ಸ್ಥಾನವಾಗಿರದ ಈ ಪ್ರದೇಶ ಪರಿಸರ ಸೂಕ್ಷ್ಮ ಪರಿಸ್ಥಿತಿಯು ಇಲ್ಲವಾಗಿದೆ. ಇಂತಹ ಪ್ರದೇಶಕ್ಕೆ ವರದಿಯು ನೇರ ಪರಿಣಾಮ ಬೀರಲಿದೆ ಎಂದರು.ರೈತ ಸಂಘದ ಗೌರವಾಧ್ಯಕ್ಷ ಈರಣ್ಣ ಪ್ಯಾಟಿ ಮಾತನಾಡಿ, ಎಲ್ಲ ರೀತಿಯಲ್ಲಿ ಅಭಿವೃದ್ಧಿ ಹೊಂದಿರುವ ಕೃಷಿಗೆ ಅತ್ಯಂತ ಯೋಗ್ಯವಾಗಿರುವ ಈ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯ ವ್ಯಾಪ್ತಿಗೆ ಸೇರಿಸುವುದರಿಂದ ಭೂಮಿಯ ಸ್ವಂತ ಹಕ್ಕನ್ನು ಕಳೆದುಕೊಂಡು ಹಲವು ರೈತರು ಬೀದಿ ಪಾಲಾಗಲಿದ್ದಾರೆ. ಈ ಹಿಂದೆ ಹಲವು ಗ್ರಾಮ ಸಭೆಗಳಲ್ಲಿ ವರದಿಯನ್ನು ತಿರಸ್ಕರಿಸಲಾಗಿದ್ದು, ಇದೀಗ ಕೇಂದ್ರ ರೈತರ ಆಕ್ಷೇಪಣೆಗಳನ್ನು ಪರಿಗಣಿಸದೆ ವರದಿ ಜಾರಿಗೊಳಿಸಿದಲ್ಲಿ ಕೃಷಿಕರು ಮುಂಬರುವ ಚುನಾವಣೆಯಲ್ಲಿ ಸೂಕ್ತ ರೀತಿಯಲ್ಲಿ ಉತ್ತರಿಸಲಿದ್ದಾರೆ ಎಂದು ಎಚ್ಚರಿಸಿದರು.
ರೈತ ಮುಖಂಡರಾದ ಬಸವರಾಜ್ ರೋಟೆ, ಕಬೂತರ್, ಜಗದೀಶ್ ಚುರ್ಚುಗುಂಡಿ, ಬಸವರಾಜ್ ಪಾಟೀಲ್, ಮಂಜುನಾಥ್, ಮಲ್ಲನಗೌಡ, ಸುಭಾಷ್ ಚಂದ್ರ, ರವಿ ನಾಯಕ, ಗವಿಯಪ್ಪ, ಭಾಗ್ಯರಾಜ್, ಮಂಜು ನಾಯಕ್ ಸಹಿತ ತಾಲೂಕಿನ ವಿವಿಧ ಗ್ರಾಮಗಳ ರೈತರು, ಸಾರ್ವಜನಿಕರಿದ್ದರು.