ಕಟೀಲು: ಶ್ರೀಮದ್ ಭಗವದ್ಗೀತೆ ತತ್ವದರ್ಶನ, ಆಧುನಿಕ ಆನ್ವಯಿಕತೆ ವಿಚಾರಗೋಷ್ಠಿ

KannadaprabhaNewsNetwork |  
Published : Oct 21, 2025, 01:00 AM IST
ಕಟೀಲಿನಲ್ಲಿ ಶ್ರೀಮದ್ ಭಗವದ್ಗೀತೆ   ತತ್ವದರ್ಶನ ಮತ್ತು ಆಧುನಿಕ ಆನ್ವಯಿಕತೆ ವಿಚಾರಗೋಷ್ಟಿ | Kannada Prabha

ಸಾರಾಂಶ

ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಂಸ್ಕೃತ ಶೋಧ ಸಂಸ್ಥಾನ(ಸಂಶೋಧನ) ಶಿರಸಿ, ಸ್ವದೇಶಿ ವಿಜ್ಞಾನ ಆಂದೋಳನ ಕರಾವಳಿ ಘಟಕದ ಸಹಯೋಗದಲ್ಲಿ ಶ್ರೀಮದ್ ಭಗವದ್ಗೀತೆ : ತತ್ವದರ್ಶನ ಮತ್ತು ಆಧುನಿಕ ಆನ್ವಯಿಕತೆ ವಿಚಾರಗೋಷ್ಠಿ ನಡೆಯಿತು.

ಕನ್ನಡಪ್ರಭವಾರ್ತೆ ಮೂಲ್ಕಿ

ಭಗವದ್ಗೀತೆ ನಮಗೆ ವ್ಯಕ್ತಿತ್ವ ವಿಕಸನ, ಆಧುನಿಕ ಜೀವನಕ್ಕೆ ಅನುಕೂಲ ಎನ್ನುವಂತೆ ಉಪಯೋಗಿಸುತ್ತಿದ್ದು ವ್ಯಕ್ತಿತ್ವ ವಿಕಸನ, ವ್ಯಾವಹಾರಿಕ ಕೌಶಲ್ಯಗಳು ಬುದ್ದಿಗೆ ಸಂಬಂಧಿಸಿದ್ದು ಇದರೊಂದಿಗೆ ತಾತ್ವಿಕತೆಯನ್ನು ತಿಳಿದುಕೊಂಡು ಅಂತಃಸುಖವನ್ನು ಪಡೆಯಬೇಕೆಂದು ಮಂಗಳೂರು ರಾಮಕೃಷ್ಣ ಮಠದ ಸ್ವಾಮೀ ಯುಗೇಶಾನಂದಜೀಯವರು ಹೇಳಿದರು.

ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಂಸ್ಕೃತ ಶೋಧ ಸಂಸ್ಥಾನ(ಸಂಶೋಧನ) ಶಿರಸಿ, ಸ್ವದೇಶಿ ವಿಜ್ಞಾನ ಆಂದೋಳನ ಕರಾವಳಿ ಘಟಕದ ಸಹಯೋಗದಲ್ಲಿ ನಡೆದ ಶ್ರೀಮದ್ ಭಗವದ್ಗೀತೆ : ತತ್ವದರ್ಶನ ಮತ್ತು ಆಧುನಿಕ ಆನ್ವಯಿಕತೆ ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದ ಅವರು ಸುಖ ಅನಿವಾರ‍್ಯ. ಸುಖ ಬೇಕೆಂಬ ಅಪೇಕ್ಷೆ ಎಲ್ಲರಿಗೂ ಇರುವಂತಹದ್ದು. ಯಾವ ಸುಖ? ಪರಿಣಾಮದಲ್ಲಿ ಅಮೃತವನ್ನು ಕೊಡುವಂತಹ ಸಾತ್ವಿಕ ಸುಖದತ್ತ ವಿದ್ಯಾರ್ಥಿಗಳು ಸಾಗಬೇಕು. ವಿದ್ಯಾರ್ಥಿಗಳಿಗೆ ಅಗತ್ಯವಾದ ಧ್ಯಾನ, ಏಕಾಗ್ರತೆಗಳಿಗೆ ಭಗವತ್ ಗೀತೆ ಸಹಕಾರಿ ಎಂದು ಹೇಳಿದರು.

ಶಿರಸಿ ಸಂಶೋಧನದ ಅಧ್ಯಕ್ಷ ಡಾ. ಜಿ.ಎನ್.ಭಟ್ ಮಾತನಾಡಿ ನಮಗೆ ಏನೋ ಬೇಕಾಗಿದೆ. ಆದರೆ ಅದನ್ನು ಪಡೆಯುವ ಹಾದಿಯಲ್ಲಿ ನಾವು ಹೋಗುತ್ತಿಲ್ಲ. ಎದುರು ಇದ್ದರೂ ಕಾಣಿಸದಷ್ಟು ಸಂಬಂಧಗಳು ಹದಗೆಡುತ್ತಿವೆ. ಮೋಕ್ಷದ ದಾರಿಯ ಸೆಳೆತದ ಅರಿವು ನಮಗಾಗಬೇಕು. ಆ ಜ್ಞಾನ ನಮಗೆ ಬೇಕು. ಈ ನಿಟ್ಟಿನಲ್ಲಿ ಭಗವತ್‌ಗೀತೆ ನಮಗೆ ಪ್ರೇರಣೆಯಾಗುತ್ತದೆ. ಇವತ್ತಿನ ದಿನಮಾನದಲ್ಲಿ ಪಿಎಚ್‌ಡಿ ಮಾಡಿದ ಹಲವಾರು ಮಂದಿ ಮುಂದಿನ ಅಧ್ಯಯನಕ್ಕೆ ಹೋಗುತ್ತಿಲ್ಲ ಎಂದು ಹೇಳಿದರು.

ಕಟೀಲು ದೇವಳದ ಆನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ, ಕಟೀಲು ಕಾಲೇಜಿನ ಪ್ರಾಚಾರ‍್ಯ ಡಾ. ವಿಜಯ್ ವಿ,. ಡಾ. ಎಂ.ಪದ್ಮನಾಭ ಮರಾಠೆ, ಡಾ. ನಾಗರಾಜ್ ಬಿ. ಡಾ. ಎಂ.ಜಿ. ಹೆಗ್ಡೆ ಮತ್ತಿತರರಿದ್ದರು. ಪುತ್ತೂರು ವಿವೇಕಾನಂದ ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥ ಡಾ. ಶ್ರೀಶ ಕುಮಾರ್, ಯೆನಪೋಯಾ ವೈದ್ಯಕೀಯ ಕಾಲೇಜಿನ ಡಾ. ಪಿ.ಮೋಹನ್ ಭಟ್, ಪಾದೇಕಲ್ಲು ವಿಷ್ಣು ಭಟ್, ನಾಡೋಜ ಕೆ.ಪಿ.ರಾವ್ ಉಪಸ್ಥಿತಿಯಲ್ಲಿ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳಿಂದ ಪ್ರಬಂಧ ಮಂಡನೆ ನಡೆಯಿತು. ನಿಟ್ಟೆ ಕಾಲೇಜಿನ ಪ್ರಾಂಶುಪಾಲ ಡಾ. ನಿರಂಜನ ಚಿಪಳೂಣಕರ್, ಕಟೀಲು ದೇವಳದ ಅರ್ಚಕ ಕಮಲಾದೇವಿಪ್ರಸಾದ ಆಸ್ರಣ್ಣ, ಕಾರ್ಕಳ ಭುವನೇಂದ್ರ ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥ ಡಾ. ಮಂಜುನಾಥ ಭಟ್, ಕೆ.ಎಂ.ಸಿ ಜನರಲ್ ಮಡೆಸಿನ್ ವಿಭಾಗದ ಡಾ. ವೇಣುಗೋಪಾಲ್ ಇವರ ಉಪಸ್ಥಿತಿಯಲ್ಲಿ ಸಂವಾದ ಗೋಷ್ಠಿಗಳು ನಡೆಯಿತು.

PREV

Recommended Stories

ಮಲೆನಾಡು, ಕರಾವಳಿಯಲ್ಲಿ ಮಳೆ : ಜನಜೀವನ ಅಸ್ತವ್ಯಸ್ತ
ಚಿತ್ತಾಪುರದಲ್ಲಿ ನ.2ರಂದು ಪಥ ಸಂಚಲನ: ಅನುಮತಿ ಕೋರಿ ಹೊಸದಾಗಿ ಅರ್ಜಿ