13ರಿಂದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ವರ್ಷಾವಧಿ ಜಾತ್ರೆ

KannadaprabhaNewsNetwork |  
Published : Apr 08, 2025, 01:46 AM IST
32 | Kannada Prabha

ಸಾರಾಂಶ

ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವರ್ಷಾವಧಿ ಮಹೋತ್ಸವ 13ರಿಂದ 20ರ ತನಕ ನಡೆಯಲಿದೆ. ಪ್ರತಿದಿನ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.

ಕನ್ನಡಪ್ರಭ ವಾರ್ತೆ ಮೂಲ್ಕಿ

ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವರ್ಷಾವಧಿ ಮಹೋತ್ಸವ 13ರಿಂದ 20ರ ತನಕ ನಡೆಯಲಿದೆ.12ರಂದು ಬೆಳಗ್ಗೆ ಅಷ್ಟೋತ್ತರ ಶತದ್ರವ್ವಕಲಕಾಭಿಷೇಕ ಶಾಂತಿ ಪ್ರಾಯಶ್ಚಿತ್ತ ಹೋಮ, ದೊಡ್ಡ ರಂಗ ಪೂಜೆ, ಅಂಕುರಾರೋಹಣ, 13ರಂದು ಬೆಳಗ್ಗೆ ಧ್ವಜಾರೋಹಣ, ರಾತ್ರಿ ಉತ್ಸವ ಬಲಿ, 14ರಂದು ಬೆಳಗ್ಗೆ ಯುಗಾದಿ ದೀಪದ ಬಲಿ, ರಾತ್ರಿ ಉತ್ಸವ ಬಲಿ ನೆರವೇರಲಿದೆ.

15ರಂದು ಬೆಳಗ್ಗೆ ಭ್ರಾಮರಿ ವನದಲ್ಲಿ ಪ್ರತಿಷ್ಠಾ ವರ್ಧಂತಿ, ರಾತ್ರಿ ಉತ್ಸವಬಲಿ, ಮೂಡು ಸವಾರಿ ,16ರಂದು ಬೆಳಗ್ಗೆ ದೀಪದ ಬಲಿ, ರಾತ್ರಿ ಉತ್ಸವ ಬಲಿ, 17ರಂದು ಬೆಳಗ್ಗೆ ಮಹಾಪೂಜೆ, ರಾತ್ರಿ ಬೆಳ್ಳಿ ರಥೋತ್ಸವ, ಉತ್ಸವ ಬಲಿ, 18ರಂದು ಬೆಳಗ್ಗೆ ಬ್ರಹ್ಮ ಸನ್ನಿಧಿಯಲ್ಲಿ ಪರ್ವ, ರಾತ್ರಿ ಉತ್ಸವ ಬಲಿ, ಪಡು ಸವಾರಿ, 19ರಂದು ಬೆಳಗ್ಗೆ ಬ್ರಹ್ಮ ರಥೋತ್ಸವ, ರಾತ್ರಿ ಉತ್ಸವ ಬಲಿ, ಶಯನ ನಡೆಯುವುದು.

20ರಂದು ಬೆಳಗ್ಗೆ ಕವಾಟೋದ್ಘಾಟನೆ, ರಾತ್ರಿ ಅವಭೃತೋತ್ಸವ, (ಆರಾಟ), ಎಕ್ಕಾರು ಯಾತ್ರೆ, ಬ್ರಹ್ಮ ರಥೋತ್ಸವ, ತೂಟೆದಾರ, ಶಿಬರೂರು ಕೊಡಮಣಿತ್ತಾಯ ದೈವದ ಭೇಟಿ, ಧ್ವಜಾವರೋಹಣ ಜರಗಲಿದೆ.

ಉತ್ಸವದ ಸಂದರ್ಭ ಪ್ರತಿದಿನ ಭಜನೆ ಹಾಗೂ ಸರಸ್ವತಿ ಸದನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. 13ರಂದು ಸಂಜೆ 5ರಿಂದ 7ರ ತನಕ ವಿಶಾಲ ಯಕ್ಷಕಲಾ ಬಳಗ ನಂದಳಿಕೆ ಅವರಿಂದ ತಾಳಮದ್ದಳೆ, 7ರಿಂದ 9 ರ ವರೆಗೆ ಭರತನಾಟ್ಯ ಶೈಲಶ್ರೀ ಶ್ರೀವತ್ಸ ಮತ್ತು ಬಳಗದಿಂದ, 14ರಂದು ಸಂಜೆ 5 ರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ವಿಶಾಲ ಯಕ್ಷಕಲಾ ಬಳಗ ನಂದಳಿಕೆ ಅವರಿಂದ, ರಾತ್ರಿ 7 ರಿಂದ ಭರತನಾಟ್ಯ ಕಟೀಲು ಪ್ರತಿಷ್ಠಾನ ಅವರಿಂದ, 15ರಂದು ಸಂಜೆ 5ರಿಂದ ಭರತನಾಟ್ಯ ಕಲಾಶ್ರೀ ನೃತ್ಯ ಬಳಗ, ಕದ್ರಿ, ಅವರಿಂದ, ರಾತ್ರಿ 7 ರಿಂದ ಭರತನಾಟ್ಯ ಐಕ್ಯಂ ತಂಡ, ಮಂಗಳೂರು ಅವರಿಂದ, 16ರ ಸಂಜೆ 5 ರಿಂದ ತಾಳಮದ್ದಲೆ ಮಹಿಳಾ ಯಕ್ಷಕೂಟ, ಕದ್ರಿ ಅವರಿಂದ, ರಾತ್ರಿ 7 ರಿಂದ ಭರತನಾಟ್ಯ ದುರ್ಗಾಸ್ವಾತಿ ನೃತ್ಯಾಲಯ ಅಸೈಗೋಳಿ ಅವರಿಂದ, 17ರಂದು ಸಂಜೆ 5 ರಿಂದ ಭರತನಾಟ್ಯ ಡಾ.ವಿ. ರಮ್ಯಚಂದ ಅವರಿಂದ, ರಾತ್ರಿ 7 ರಿಂದ ಭರತನಾಟ್ಯ ಶ್ರಾವಣಿ ಕೃಷ್ಣ ಭಟ್, ಗಾನನೃತ್ಯ ಅಕಾಡೆಮಿ ಅವರಿಂದ, 18ರಂದು ಸಂಜೆ 5 ರಿಂದ ವೀಣಾವಾದನ ಶ್ರೀರಕ್ಷಾ ಎಸ್.ಹೆಚ್. ಪೂಜಾರಿ, ಕೊಣಾಜೆ ಅವರಿಂದ , ರಾತ್ರಿ 7ರಿಂದ ಭರತನಾಟ್ಯ ನಾಟ್ಯಾಲಯ ಉರ್ವಾ ಅವರಿಂದ ನೆರವೇರಲಿದೆ.

19ರಂದು ಯಕ್ಷಗಾನ ಶ್ರೀಕೃಷ್ಣಲೀಲೆ ದುರ್ಗಾಮಕ್ಕಳ ಮೇಳ ಕಟೀಲು ಅವರಿಂದ, 20ರಂದು ರಾತ್ರಿ 8ರಿಂದ ಭರತನಾಟ್ಯ ಸನಾತನ ನಾಟ್ಯಾಲಯ ಮಂಗಳೂರು ಅವರಿಂದ, ರಾತ್ರಿ 10 ರಿಂದ ಭಕ್ತಿಗಾನಾರಾಧನೆ ಜಗದೀಶ್ ಪುತ್ತೂರು ಬಳಗದಿಂದ ಜರುಗಲಿದೆ. ಉತ್ಸವದ ಎಲ್ಲ ದಿನಗಳಲ್ಲಿ ಚಿನ್ನದ ಪಲ್ಲಕ್ಕಿ ಉತ್ಸವ ಹಾಗೂ ಚಿನ್ನದ ರಥೋತ್ಸವ ಇದೆ ಎಂದು ಪ್ರಕಟಣೆ ತಿಳಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!