ಕವಿರಾಜ ಮಾರ್ಗ ಕನ್ನಡಿಗರ ಭಾಷಾ ಅಸ್ಮಿತೆ

KannadaprabhaNewsNetwork |  
Published : Sep 04, 2025, 02:00 AM IST
(ಫೋಟೋ 3ಬಿಕೆಟಿ5,ಡಾ.ಕೆ.ಆರ್.ದುರ್ಗದಾಸ ಉಪನ್ಯಾಸ ನೀಡಿದರು. ) | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಬಾಗಲಕೋಟೆ ಕನ್ನಡದ ಮೊದಲ ಉಪಲಬ್ದ ಗ್ರಂಥವಾದ ಕವಿರಾಜಮಾರ್ಗ ಕನ್ನಡ ಕುರಿತು ಮಹತ್ವದ ದಾಖಲೆ ಒದಗಿಸುತ್ತದೆ. ಕವಿರಾಜ ಮಾರ್ಗ ಕನ್ನಡಿಗರ ಭಾಷಾ ಅಸ್ಮಿತೆ ಯಾಗಿದೆ ಎಂದು ಕರ್ನಾಟಕ ಬಯಲಾಟ ಅಕಾಡೆಮಿ ಅಧ್ಯಕ್ಷ ಡಾ.ಕೆ.ಆರ್. ದುರ್ಗದಾಸ ಹೇಳಿದರು

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಕನ್ನಡದ ಮೊದಲ ಉಪಲಬ್ದ ಗ್ರಂಥವಾದ ಕವಿರಾಜಮಾರ್ಗ ಕನ್ನಡ ಕುರಿತು ಮಹತ್ವದ ದಾಖಲೆ ಒದಗಿಸುತ್ತದೆ. ಕವಿರಾಜ ಮಾರ್ಗ ಕನ್ನಡಿಗರ ಭಾಷಾ ಅಸ್ಮಿತೆ ಯಾಗಿದೆ ಎಂದು ಕರ್ನಾಟಕ ಬಯಲಾಟ ಅಕಾಡೆಮಿ ಅಧ್ಯಕ್ಷ ಡಾ.ಕೆ.ಆರ್. ದುರ್ಗದಾಸ ಹೇಳಿದರು

ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿಶಾಸ್ತ್ರ ವಿಭಾಗದಡಿಯಲ್ಲಿ ಮತ್ತು ಬಾಗಲಕೋಟೆ ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ), ಜಿಲ್ಲಾ ಪದವಿ ಪೂರ್ವ ಕಾಲೇಜುಗಳ, ಕನ್ನಡ ಉಪನ್ಯಾಸಕರ ಒಕ್ಕೂಟ ಬಾಗಲಕೋಟೆ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಬಾಗಲಕೋಟೆ ಇವರ ಸಹಯೋಗದಲ್ಲಿ ಡಾ.ಡಿ.ಎಲ್. ನರಸಿಂಹಾಚಾರ್ಯ ದತ್ತಿ ನಿಧಿಯಿಂದ ನಾಲ್ಕು ದಿನಗಳ ಕಾಲ ಬಾಗಲಕೋಟೆ ಜಿಲ್ಲಾ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕರಿಗೆ 20ನೇ ಹಳಗನ್ನಡ ಸಾಹಿತ್ಯ ಬೋಧನಾ ತರಬೇತಿ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಚಂಪೂ ಸಾಹಿತ್ಯದ ಸ್ವರೂಪ ಅದರ ಲಕ್ಷಣ ಕುರಿತು ವಿಷಯ ಮಂಡಿಸಿ ಮಾತನಾಡಿದರು.

ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಚಂಪೂ ಸಾಹಿತ್ಯ ಸುವರ್ಣ ಯುಗವಾಗಿತ್ತು ಎಂಬುವುದಕ್ಕೆ ಪಂಪ, ರನ್ನ, ಜನ್ನ, ಪೊನ್ನರಂತಹ ಮೇಧಾವಿ ಹಳಗನ್ನಡದ ಕವಿಗಳು ಗದ್ಯ ಮತ್ತು ಪದ್ಯ ಮಿಶ್ರಿತವಾದ ಚಂಪೂ ಸಾಹಿತ್ಯ ರಚಿಸಿ ಕನ್ನಡ ಶ್ರೀಮಂತಗೊಳಿಸಿದ್ದಾರೆ. ಅವರು ಹಾಕಿಕೊಟ್ಟ ಕನ್ನಡ ಮಾರ್ಗವೇ ಹಳಗನ್ನಡದ ಬುನಾದಿಯಾಗಿದೆ ಎಂದು ಹೇಳಿದರು.

ಶಿಬಿರದ ಮೂರನೇ ಅವಧಿಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಜಿ.ಜಿ. ಹಿರೇಮಠ ಅವರು ಪಂಪನ ಪಂಪಭಾರತ ಮತ್ತು ರನ್ನನ ಗದಾಯುದ್ಧ ಕಾವ್ಯಗಳ ಕುರಿತು ವಿಷಯ ಮಂಡಿಸಿ ಮಾತನಾಡಿ, ಪಂಪನ ಕಾವ್ಯದ ವಸ್ತು, ಉದ್ದೇಶ ಮತ್ತು ಶೈಲಿ ವೈಶಿಷ್ಟ್ಯ ಪೂರ್ಣವಾಗಿವೆ. ರನ್ನನ ಗದಾಯುದ್ಧ ಚಂಪೂ ಕಾವ್ಯವಾಗಿದೆ. ಗದಾಯುದ್ಧದ ಮುಖ್ಯ ಕಥಾವಸ್ತು ಕವಿಯ ಆಶ್ರಯದಾತ ಸತ್ಯಾಶ್ರಯನನ್ನು ಭೀಮನಿಗೆ ಹೋಲಿಸಿ ರಚಿಸಲಾಗಿದೆ. ಈ ಕಾವ್ಯ ಭೀಮನ ಪರಾಕ್ರಮ, ಕರ್ಣ-ದುರ್ಯೋಧನರ ಆಳವಾದ ಸ್ನೇಹ, ಗಾಂಧಾರಿ-ಭಾನುಮತಿಯರ ಸಂವಾದ ಸೇರಿ ಹಲಾವರು ಮಹತ್ವ ಅಂಶಗಳನ್ನು ತಿಳಿಸುತ್ತವೆ. ಈ ಕಾವ್ಯಗಳು ಸಮಗ್ರ ಮಹಾಭಾರತದ ಘಟನೆಗಳ ಅವಲೋಕನ ನೀಡುತ್ತವೆ ಎಂದು ಹೇಳಿದರು.

ಶಿಬಿರದ ಎರಡನೇ ದಿನವಾದ ಮಂಗಳವಾರ ಮೊದಲ ಅವಧಿಯಲ್ಲಿ ಬಾದಾಮಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಚಂದ್ರಶೇಖರ ಹೆಗಡೆ ಅವರು ನಾಗಚಂದ್ರನ ರಾಮಚಂದ್ರ ಚರಿತ ಪುರಾಣ ಕಾವ್ಯ ಕುರಿತು ವಿಷಯ ಮಂಡಿಸಿ ಮಾತನಾಡಿದರು. ಎರಡನೆಯ ದಿನದ 2 ನೇ ಅವಧಿಯಲ್ಲಿ ಭಾಷಾ ಚಿಂತಕ ಸಂಮೇಶ ಬ್ಯಾಳಿ ಅವರು ಹರಿಹರನ ರಗಳೆಗಳು ಕುರಿತು ವಿಷಯ ಮಂಡಿಸಿದರು. 3ನೇ ಅವಧಿಯಲ್ಲಿ ಬಸವೇಶ್ವರ ಕಲಾ ಮಹಾವಿದ್ಯಾಲಯದ ಕನ್ನಡ ಸ್ನಾತಕೋತ್ತರ ವಿಭಾಗದ ಪ್ರಾಧ್ಯಾಪಕ ಡಾ.ವೀಣಾ ಕಲ್ಮಠ ಅವರು ಷಟ್ಪದಿ ಸ್ವರೂಪ ಮತ್ತು ಲಕ್ಷಣಗಳ ಕುರಿತು ವಿಷಯ ಮಂಡಿಸಿದರು. ಶಿಬಿರದ ನಿರ್ದೇಶಕರಾದ ಡಾ.ವೀರೇಶ ಬಡಿಗೇರ, ಸಂಚಾಲಕರಾದ ಡಾ.ಚಂದ್ರಶೇಖರ ಕಾಳನ್ನವರ, ಡಾ.ಸಿದ್ದರಾಮ ಖಾನಾಪುರ ಹಾಗೂ ಸಂಗಮೇಶ ಬ್ಯಾಳಿ, ಸಂತೋಷ ಕಾಳನ್ನವರ ಸೇರಿದಂತೆ 60ಕ್ಕೂ ಅಧಿಕ ಶಿಬಿರಾರ್ಥಿಗಳು ಭಾಗವಹಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!