ಕೆಬಿಎಂಪಿಎಸ್ ಶಾಲೆ ಅದ್ಧೂರಿ ಶತಮಾನೋತ್ಸವಕ್ಕೆ ತಯಾರಿ

KannadaprabhaNewsNetwork |  
Published : Dec 02, 2025, 03:00 AM IST
ಮುದ್ದೇಬಿಹಾಳ ಪಟ್ಟಣದ ಶತಮಾನ ಪೂರೈಸಿದ ಸರ್ಕಾರಿ ಕನ್ನಡ ಗಂಡುಮಕ್ಕಳ ಮಾದರಿ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸಮಾರಂಭ ಆಚರಿಸಲು ಮುಖ್ಯ ಶಿಕ್ಷಕ ನಾಗರಾಜ ತೊಂಡಿಹಾಳ ಅಧ್ಯಕ್ಷತೆಯಲ್ಲಿ ಶನಿವಾರ ಶಾಲೆ ಆವರಣದಲ್ಲಿ ಹಳೆ ವಿದ್ಯಾರ್ಥಿಗಳ ಪೂರ್ವಭಾವಿ ಸಭೆ ನಡೆಯಿತು. | Kannada Prabha

ಸಾರಾಂಶ

ಶತಮಾನೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ಆಚರಿಸಬೇಕೆಂದು ಹಳೆಯ ವಿದ್ಯಾರ್ಥಿಗಳ ಆಸೆಯಾಗಿತ್ತು. ಅದರಂತೆ ಶತಮಾನೋತ್ಸವ ಹಮ್ಮಿಕೊಳ್ಳಲು ತಿರ್ಮಾನಿಸಲಾಗಿದೆ.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ಶಾಸಕರು ಹಾಗೂ ಕರ್ನಾಟಕ ರಾಜ್ಯ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ.ಎಸ್.ನಾಡಗೌಡರು ಸುಮಾರು ₹1.23 ಕೋಟಿ ವಿಶೇಷ ಅನುದಾನ ನೀಡಿದ್ದರಿಂದ ಈ ಶಾಲೆ ಸಂಪೂರ್ಣವಾಗಿ ಜೀರ್ಣೋದ್ಧಾರ ಮಾಡುವ ಮೂಲಕ ಶಾಲೆ ಸೌಂದರ್ಯವಾಗಿ ಕಾಣುವಂತಾಗಿದೆ ಎಂದು ಮುಖ್ಯಶಿಕ್ಷಕ ನಾಗರಾಜ ತೊಂಡಿಹಾಳ ಹೇಳಿದರು.

ಪಟ್ಟಣದ ಮುಖ್ಯ ಬಜಾರದಲ್ಲಿರುವ 111 ವರ್ಷದ ಶತಮಾನ ಪೂರೈಸಿದ ಸರ್ಕಾರಿ ಕನ್ನಡ ಗಂಡು ಮಕ್ಕಳ ಮಾದರಿ ಪ್ರಾಥಮಿಕ ಶಾಲೆ (ಕೆಬಿಎಂಪಿಎಸ್) ಶತಮಾನೋತ್ಸವ ಸಮಾರಂಭ ಅದ್ಧೂರಿಯಾಗಿ ಆಚರಿಸಲು ಶಾಲೆ ಆವರಣದಲ್ಲಿ ನಡೆದ ಹಳೆಯ ವಿದ್ಯಾರ್ಥಿಗಳ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜೀರ್ಣೋದ್ಧಾರಗೊಂಡಿರುವ ಶಾಲೆ ಕಟ್ಟಡ ಲೋಕಾರ್ಪಣೆ ಹಾಗೂ ಶತಮಾನೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ಆಚರಿಸಬೇಕೆಂದು ಹಳೆಯ ವಿದ್ಯಾರ್ಥಿಗಳ ಆಸೆಯಾಗಿತ್ತು. ಅದರಂತೆ ಶತಮಾನೋತ್ಸವ ಹಮ್ಮಿಕೊಳ್ಳಲು ತಿರ್ಮಾನಿಸಲಾಗಿದೆ. ಕಾರಣ ಶಾಲೆಯಲ್ಲಿ ಕಲಿತ ಹಳೆಯ ವಿದ್ಯಾರ್ಥಿಗಳು ಕೈಜೋಡಿಸುವ ಮೂಲಕ ಕಾರ್ಯಕ್ರಮ ಯಶಸ್ಸಿಗೆ ಸಹಕರಿಸಬೇಕು ಎಂದು ಕೋರಿದರು. ಶಿಕ್ಷಕ ರಶೀದ ಮೇತ್ರಿ ಮಾತನಾಡಿದರು.ಹಳೆ ವಿದ್ಯಾರ್ಥಿಗಳಾದ ಹಿರಿಯ ತಾಲೂಕು ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ, ರಾಜೇಂದ್ರಗೌಡ ರಾಯಗೊಂಡ, ಸಿದ್ದರಾಜ ಹೊಳಿ, ವಕೀಲ ಎನ್.ಬಿ.ಮುದ್ದಾಳ, ರಾಜು ಬಿಜಾಪುರ, ಪುರಸಭೆ ಮಾಜಿ ಸದಸ್ಯ ಗೋಪಿ ಮಡಿವಾಳ ಕಾರ್ಯಕ್ರಮ ಯಶಸ್ಸಿಗೆ ತಮ್ಮ ಸಲಹೆ- ಸೂಚನೆ ನೀಡಿದರು. ಶತಮಾನೋತ್ಸವ ಕಾರ್ಯಕ್ರಮ ನಡೆಸಲು ಹಳೆ ವಿದ್ಯಾರ್ಥಿಗಳ ಸಭೆ ನಡೆಸಿ ಎಲ್ಲ ಹಳೆಯ ಹಳೆಯ ವಿದ್ಯಾರ್ಥಿಗಳು ಭಾಗವಹಿಸುವಂತೆ ಮಾಡುವ ಮೂಲಕ ತನು, ಮನ, ಧನದ ಮೂಲಕ ಎಲ್ಲರೂ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದರು.

ವಿಕ್ರಮ್ ಓಸ್ವಾಲ್, ವಿಶ್ವನಾಥಗೌಡ (ಪುಟ್ಟು) ಪಾಟೀಲ ಇತರರು ವೇದಿಕೆಯಲ್ಲಿದ್ದರು. ಡಾ.ಚಂದ್ರಶೇಖರ ಶಿವಯೋಗಿಮಠ, ಆನಂದ ಜಂಬಗಿ, ಚಂದ್ರಶೇಖರ, ಪ್ಯಾಟಿಗೌಡರ, ಮಹಾಂತೇಶ ಬೂದಿಹಾಳಮಠ, ಉಮೇಶ ಜತ್ತಿ, ಪವಾಡಶೆಟ್ಟಿ ಲೋಹಿತ್ ನಾಲತವಾಡ, ಅಶೋಕ ಮೋಟಗಿ, ಗುಂಡೂರಾವ್ ಬಡಿಗೇರ, ಹಳೆಯ ವಿದ್ಯಾರ್ಥಿಗಳು ಇದ್ದರು. ಶಿಕ್ಷಕಿ ಎ.ಎಂ ನದಾಫ ಸ್ವಾಗತಿಸಿ, ನಿರೂಪಿಸಿದರು. ಶಿಕ್ಷಕ ಎಸ್.ಪಿ.ಗುಂಡಕನಾಳ ವಂದಿಸಿದರು.

----ಬಾಕ್ಸ್‌... 3 ರಂದು ಪೂರ್ವಭಾವಿ ಸಭೆ

ಕೆಬಿಎಂಪಿ ಶಾಲೆಯ ಶತಮಾನೋತ್ಸವ ಆಚರಣೆ ಕುರಿತು ಎರಡನೇ ಸುತ್ತಿನ ಸಭೆ ಡಿ.3ರಂದು ಸಂಜೆ 4 ಗಂಟೆಗೆ ಶಾಲೆ ಆವರಣದಲ್ಲಿ ಕರೆಯಲಾಗಿದೆ. ಶಾಲೆಯ ಹಳೆ ವಿದ್ಯಾರ್ಥಿಗಳು, ಊರಿನ ಗಣ್ಯರು, ವಿವಿಧ ಸಂಘ ಸಂಸ್ಥೆಗಳ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಲಹೆ ಸೂಚನೆ ಕೊಡಬೇಕು ಎಂದು ಮುಖ್ಯ ಶಿಕ್ಷಕ ನಾಗರಾಜ ತೊಂಡಿಹಾಳ ಕೋರಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೋಹನ್ ಕಾರ್ಪೊರೇಶನ್: ಆರೋಗ್ಯ ಇಲಾಖೆಗೆ 100 ಟಾರ್ಚ್‌ ವಿತರಣೆ
ಅಜ್ಮಾನ್‌ನ ತುಂಬೆ ಮೆಡಿಸಿಟಿಗೆ ಕರ್ನಾಟಕದ ಸಚಿವರ ಭೇಟಿ