ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಎಚ್ ಎನ್ ವ್ಯಾಲಿ, ಕೆಸಿ ವ್ಯಾಲಿ ಯೋಜನೆಯಿಂದ ಜನರ ಮೇಲೆ ದುಷ್ಪರಿಣಾಮ ಬೀರುವ ರಾಸಾಯನಿಕಗಳಾದ ಯುರೇನಿಯಂ ಮತ್ತು ಪಾಸ್ಪರಸ್ ಹೆಚ್ಚಾಗಿದ್ದು ಬೆಂಗಳೂರು ಗ್ರಾಮಾಂತರ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲೆ ಒತ್ತಡ ತಂದು ಕೆಸಿ ವ್ಯಾಲಿ ಹೆಚ್ ಎನ್ ವ್ಯಾಲಿ ಮೂರನೇ ಹಂತದ ಶುದ್ಧೀಕರಣ ಮಾಡಲು ಸಪ್ಲಿಮೆಂಟರಿ ಬಜೆಟ್‌ನಲ್ಲಿ ಹಣ ಮೀಸಲಿಡಲು ಒತ್ತಡ ಹೇರಬೇಕು ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್. ಆಂಜನೇಯರೆಡ್ಡಿ ಆಗ್ರಹಿಸಿದರು. ನಗರದ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಜಿಲ್ಲಾ ಶಾಶ್ವತ ನೀರಾವರಿ ಹೋರಾಟ ಸಮಿತಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಯೊಳಗೆ ಶುದ್ಧ ಕುಡಿಯುವ ನೀರು ಒದಗಿಸದ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಯಾವುದೇ ಪಕ್ಷಕ್ಕೂ ಅಧಿಕಾರ ನಡೆಸಲು ಯೋಗ್ಯತೆ ಇಲ್ಲ ಎಂದರು.ಕೆಸಿ, ಎಚ್‌ಎನ್ ವ್ಯಾಲಿ ನೀರು ಮಾಲಿನ್ಯ
ಕಳೆದ ಎರಡು ದಶಕಗಳಿಂದ ಶಾಶ್ವತ ನೀರಾವರಿ ಹೋರಾಟ ಸಮಿತಿ ಈ ಜಿಲ್ಲೆಗಳ ಸಮಗ್ರ ನೀರಾವರಿಗೆ ಹೋರಾಟ ಮಾಡುತ್ತಿದ್ದು, ಈ ಜಿಲ್ಲೆಗೆ ನದಿ ನೀರು ನೀಡಬೇಕೆಂದು ಆಗ್ರಹಿಸುತಿದ್ದೇವೆ. ಈ ಹಿಂದೆಯೇ ನ್ಯಾಷನಲ್ ಗ್ರೀನ್ ಟ್ರಿಬ್ಯುನಲ್(ಎನ್ ಜಿಟಿ) ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಕೇಂದ್ರ ಸರ್ಕಾರದ ಮಾನದಂಡ ಸಂಸ್ಥೆ ಕೆ ಸಿ ವ್ಯಾಲಿ ಹಾಗೂ ಎಚ್ಚೆನ್ ವಾಲಿಯ ನೀರನ್ನು ಅವೈಜ್ಞಾನಿಕ ಎಂದು ವರದಿ ನೀಡಿವೆ ಎಂದರು.ರಾಜ್ಯ ಸರ್ಕಾರವು ಪ್ರತಿ ವರ್ಷ ಸಾವಿರಾರು ಕೋಟಿ ರು. ನೀರಾವರಿ ಯೋಜನೆಗಳಿಗೆ ವೆಚ್ಚ ಮಾಡುತ್ತಿದೆ, 1035 ಟಿ.ಎಂ.ಸಿ. ರಾಜ್ಯ ನೀರಾವರಿಗೆ ಬಳಕೆ ಮಾಡುತ್ತಿದೆ. ಒಂದು ಟಿ.ಎಂ.ಸಿ. ನೀರಿನಲ್ಲಿ ಸುಮಾರು 1200 ಎಕರೆ ಕೃಷಿ ಮಾಡಬಹುದಾಗಿದೆ, ಆದರೆ ನಮ್ಮ ಭಾಗಕ್ಕೆ ಸ್ವಾತಂತ್ರ್ಯ ಬಂದ ನಂತರದಿಂದಲೂ ಯಾವುದೇ ನೀರಾವರಿ ಯೋಜನೆಗಳನ್ನು ಜಾರಿ ಮಾಡದೆ ಸರ್ಕಾರಗಳ ಮಲತಾಯಿ ಧೋರಣೆ ಹಾಗೂ ಜನಪ್ರತಿನಿಧಿಗಳ ಇಚ್ಚಾಶಕ್ತಿ ಕೊರತೆಯಿಂದಾಗಿ ವಂಚಿತರಾಗಿದ್ದೇವೆ ಎಂದರು. ಎತ್ತಿನಹೊಳೆ ಅವೈಜ್ಞಾನಿಕ ಯೋಜನೆಅಂತರ್ಜಲಮಟ್ಟ 1500 ಅಡಿಗಳಿಗೂ ಹೆಚ್ಚು ಪಾತಾಳ ಸೇರಿತ್ತು, ಆಗ ನೀರಾವರಿ ತಜ್ಞ ಡಾ. ಪರಮಶಿವಯ್ಯನವರು ರೂಪಿಸಲಾದ ಎತ್ತಿನಹೊಳೆ ನೀರಾವರಿ ಯೋಜನೆ ಜಾರಿಗೆ ಸರ್ಕಾರಗಳು ಮೀನ ಮೇಷ ಎಣಿಸಿ, ಕಳೆದ 15 ವರ್ಷಗಳ ಹಿಂದೆ ಯೋಜನೆಗೆ ಅನುಮೋದನೆ ನೀಡಿತ್ತಾದರೂ, ಆಮೆವೇಗದಲ್ಲಿ ಯೋಜನೆ ಸಾಗುತ್ತಿದೆ. ಎತ್ತಿನಹೊಳೆ ಕಾಮಗಾರಿಗಳು ನನೆಗುದಿಗೆ ಬಿದ್ದಿದೆ, ಇದನ್ನು ಆಗಲೇ ನಾವುಗಳು ಈ ಯೋಜನೆಯು ಅವೈಜ್ಞಾನಿಕ ಹಾಗೂ ತಾಂತ್ರಿಕ ದೋಷದಿಂದ ಕೂಡಿದೆ ಎಂದು ಜಲವಿಜ್ಞಾನ ಸಮಿತಿಗಳು ಪ್ರತಿಪಾದಿಸಿದರೂ ಆಡಳಿತರೂಢ ಸರ್ಕಾರಗಳು ಗಮನಹರಿಸುತ್ತಿಲ್ಲಾ ಎಂದು ಹೇಳಿದರು ಸುದ್ದಿಗೋಷ್ಠಿಯಲ್ಲಿ ಕಾಮ್ರೇಡ್ ಲಕ್ಷ್ಮಯ್ಯ. ಸುಷ್ಮಾ ಶ್ರೀನಿವಾಸ್. ಕನ್ನಡ ಸೇನೆ ರವಿಕುಮಾರ್. ರಕ್ಷಣಾ ವೇದಿಕೆ ಯುವಸೇನೆ ರಾಜ್ಯ ಉಪಾಧ್ಯಕ್ಷ ನಾರಾಯಣಸ್ವಾಮಿ. ಜೀವಿಕಾ ರತ್ನಮ್ಮ,ಬಾಗೇಪಲ್ಲಿ ರೈತ ಸಂಘದ ತಾಲೂಕು ಅಧ್ಯಕ್ಷ ಗೋವಿಂದಪ್ಪ ಮತ್ತಿತರರು ಇದ್ದರು.