ಆಸ್ಕರ್ ಬುಕ್ ಆಫ್ ವಿಶ್ವ ದಾಖಲೆ ನಿರ್ಮಿಸಿದ ಕೆಡಿಸಿ ಡೆಂಟಲ್ ಕೇರ್‌

KannadaprabhaNewsNetwork |  
Published : Sep 11, 2025, 01:00 AM IST
ಜಮಖಂಡಿ: ನಗರದಲ್ಲಿ ಆಸ್ಕರ್ ಬುಕ್ ಆಫ್ ರೆಕಾರ್ಡ್ಸ್ ಅಧಿಕಾರಿಗಳು ಕೆಡಿಸಿ ದಂತ ಸಮೂಹದ ವೈದ್ಯರಿಗೆ ಪ್ರಶಸ್ತಿ ಪ್ರಮಾಣ ಪತ್ರ ವಿತರಿಸಿದರು. | Kannada Prabha

ಸಾರಾಂಶ

ಮುಧೋಳ, ಅಥಣಿ, ಜಮಖಂಡಿ ತಾಲೂಕಿನಲ್ಲಿ ಮಂಗಳವಾರ ಮೂರು ತಾಲೂಕಿನ 17 ಶಾಲೆಗಳಲ್ಲಿ ಕೆಡಿಸಿ ಡೆಂಟಲ್ ಕೇರ್‌ನ 32 ಜನ ವೈದ್ಯರ ತಂಡ 17183ಕ್ಕೂ ಅಧಿಕ ವಿದ್ಯಾರ್ಥಿಗಳ ಉಚಿತ ದಂತ ತಪಾಸಣೆ ನಡೆಸಿ ದಾಖಲೆ ನಿರ್ಮಿಸಿದೆ ಎಂದು ಡಾ. ಲಕ್ಷ್ಮೀ ಬನ್ನಿ, ಡಾ.ನಿರಂಜನ, ಡಾ.ಪರಮಶೆಟ್ಟಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಜಮಖಂಡಿ

ಮುಧೋಳ, ಅಥಣಿ, ಜಮಖಂಡಿ ತಾಲೂಕಿನಲ್ಲಿ ಮಂಗಳವಾರ ಮೂರು ತಾಲೂಕಿನ 17 ಶಾಲೆಗಳಲ್ಲಿ ಕೆಡಿಸಿ ಡೆಂಟಲ್ ಕೇರ್‌ನ 32 ಜನ ವೈದ್ಯರ ತಂಡ 17183ಕ್ಕೂ ಅಧಿಕ ವಿದ್ಯಾರ್ಥಿಗಳ ಉಚಿತ ದಂತ ತಪಾಸಣೆ ನಡೆಸಿ ದಾಖಲೆ ನಿರ್ಮಿಸಿದೆ ಎಂದು ಡಾ. ಲಕ್ಷ್ಮೀ ಬನ್ನಿ, ಡಾ.ನಿರಂಜನ, ಡಾ.ಪರಮಶೆಟ್ಟಿ ತಿಳಿಸಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಏಕಕಾಲದಲ್ಲಿ ರಾಜ್ಯದ 69 ಶಾಲೆ, ಕಾಲೇಜುಗಳಲ್ಲಿ 56 ಸಾವಿರ ವಿದ್ಯಾರ್ಥಿಗಳಿಗೆ ಉಚಿತ ದಂತ ತಪಾಸಣೆ ಮಾಡುವ ಮೂಲಕ ಕೆಡಿಸಿ ಡೆಂಟಲ್ ಕೇರ್ ಆ್ಯಂಡ್ ಇನಪ್ಲಾಂಟ್‍ ಸೆಂಟರ್‌ ಆಸ್ಕರ್ ಬುಕ್ ಆಫ್ ವಿಶ್ವ ದಾಖಲೆ ನಿರ್ಮಿಸಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ 16 ಶಾಖೆ ಹೊಂದಿರುವ ಕೆಡಿಸಿ ವೈದ್ಯರ ತಂಡ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಏಕಕಾಲಕ್ಕೆ ದಂತ ತಪಾಸಣಾ ಶಿಬಿರಗಳನ್ನು ಹಮ್ಮಿಕೊಳ್ಳುವ ಮೂಲಕ ಹೊಸ ದಾಖಲೆ ನಿರ್ಮಿಸಿದೆ. ಜಮಖಂಡಿ, ಮುಧೋಳ, ಅಥಣಿ ಭಾಗದ ಪುಷ್ಪಾತಾಯಿ ಪ್ರೌಢಶಾಲೆ, ಬಿಎಲ್.ಡಿ ಸಿಬಿಎಸ್ಸಿ ಸ್ಕೂಲ, ಕುಂಕಾಲೆ ಕಾಲೇಜು, ಕಂಠಿ ಕಾಲೇಜು, ಬನಜವಾಡ ಸ್ಕೂಲ್ ಕಾಲೇಜು ಹಾಗೂ ಹುಬ್ಬಳ್ಳಿ ಬೆಂಗಳೂರು ಸಹಿತ ವಿವಿಧ ನಗರಗಳಲ್ಲಿ ಏಕಕಾಲದಲ್ಲಿ ಹಲ್ಲುಗಳ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿತ್ತು. ದಂತ ತಪಾಸಣೆ ಶಿಬಿರದ ನೇತೃತ್ವವನ್ನು ಡಾ.ನಿರಂಜನ, ಡಾ.ಪರಮಶೆಟ್ಟಿ. ಡಾ.ಭಾಗ್ಯಲಕ್ಷ್ಮಿ, ಡಾ.ಪ್ರಶಾಂತ ಶೆಟ್ಟಿ, ಡಾ.ಕಲ್ಪನಾ ಸೇರಿದಂತೆ ಶಿಬಿರದಲ್ಲಿ 151 ದಂತ ವೈದ್ಯರ ತಂಡ ಭಾಗವಹಿಸಿತ್ತು ಎಂದು ಹೇಳಿದರು.

ಶಿಬಿರದಲ್ಲಿ ದಂತ ರಕ್ಷಣೆ ಬಗ್ಗೆ ತಂಬಾಕು ಪದಾರ್ಥಗಳ ಸೇವನೆಯಿಂದ ಬಾಯಿ ಹಾಗೂ ದೇಹದ ಮೇಲಾಗುವ ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲಾಗಿದೆ. ರಾಜ್ಯದ್ಯಂತ ಯಶಸ್ವಿಗೊಂಡಿರುವ ಕೃಷಿ ಡೆಂಟಲ್ ಕೇರ್‌ ಶಿಬಿರದ ವ್ಯವಸ್ಥೆ ವೀಕ್ಷಿಸಿದ ನಂತರ ಕಾರ್ಯನಿರ್ವಾಹಕ ಆಸ್ಕರ್ ಬುಕ್ ಆಫ್ ರೆಕಾರ್ಡ್ಸ್ ಅಧಿಕಾರಿಗಳು ಕೆಡಿಸಿ ದಂತ ಸಮೂಹದ ವೈದ್ಯರಾದ ಡಾ.ನಿರಂಜನ ಪರಮಶೆಟ್ಟಿ, ಡಾ.ಲಕ್ಷ್ಮಿ ಬನ್ನಿ ಮತ್ತು ವಿವಿಧ ವೈದ್ಯರುಗಳಿಗೆ ಪ್ರಶಸ್ತಿ ಪ್ರಮಾಣ ಪತ್ರ ನೀಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!