ಶ್ರದ್ಧಾ ಕೇಂದ್ರ ದೇವಸ್ಥಾನಗಳ ಪಾವಿತ್ರತೆ ಕಾಪಾಡಿ

KannadaprabhaNewsNetwork |  
Published : Jul 12, 2026, 02:30 AM IST
ೀ | Kannada Prabha

ಸಾರಾಂಶ

ದೇವಸ್ಥಾನಗಳು ನಮ್ಮ ಧರ್ಮ, ಸಂಸ್ಕೃತಿ, ಆರಾಧನೆಯ ಶ್ರದ್ಧಾ, ಭಾವೈಕ್ಯ ಕೇಂದ್ರಗಳು. ದೇವಸ್ಥಾನದ ಆವರಣ ಸ್ವಚ್ಛವಾಗಿಟ್ಟುಕೊಂಡು ಪಾವಿತ್ರತೆ ಕಾಪಾಡಬೇಕು. ಮಕ್ಕಳನ್ನು ದೇವಸ್ಥಾನಗಳಿಗೆ ಕರೆತಂದು ಅವರಲ್ಲಿ ದೈವ ಭಕ್ತಿ, ಧಾರ್ಮಿಕ ಶ್ರದ್ಧೆ ಮೂಡಿಸಬೇಕು ಎಂದು ಸ್ಫೂರ್ತಿ ಡೆವಲಪರ್ಸ್ ನ ವ್ಯವಸ್ಥಾಪಕ ನಿರ್ದೇಶಕಎಸ್.ಪಿ.ಚಿದಾನಂದ್ ಸಲಹೆ ಮಾಡಿದರು.

ಕನ್ನಡಪ್ರಭ ವಾರ್ತೆ ತುಮಕೂರುದೇವಸ್ಥಾನಗಳು ನಮ್ಮ ಧರ್ಮ, ಸಂಸ್ಕೃತಿ, ಆರಾಧನೆಯ ಶ್ರದ್ಧಾ, ಭಾವೈಕ್ಯ ಕೇಂದ್ರಗಳು. ದೇವಸ್ಥಾನದ ಆವರಣ ಸ್ವಚ್ಛವಾಗಿಟ್ಟುಕೊಂಡು ಪಾವಿತ್ರತೆ ಕಾಪಾಡಬೇಕು. ಮಕ್ಕಳನ್ನು ದೇವಸ್ಥಾನಗಳಿಗೆ ಕರೆತಂದು ಅವರಲ್ಲಿ ದೈವ ಭಕ್ತಿ, ಧಾರ್ಮಿಕ ಶ್ರದ್ಧೆ ಮೂಡಿಸಬೇಕು ಎಂದು ಸ್ಫೂರ್ತಿ ಡೆವಲಪರ್ಸ್ ನ ವ್ಯವಸ್ಥಾಪಕ ನಿರ್ದೇಶಕಎಸ್.ಪಿ.ಚಿದಾನಂದ್ ಸಲಹೆ ಮಾಡಿದರು. ನಗರದ ಉಪ್ಪಾರಹಳ್ಳಿಯ ಕಾಳಘಟ್ಟಮ್ಮ ದೇವಿ ದೇವಸ್ಥಾನ ಜೀರ್ಣೋದ್ಧಾರ ಸೇವಾ ಸಮಿತಿ ಹಮ್ಮಿಕೊಂಡಿದ್ದ ಆದಿಶಕ್ತಿ ಕಾಳಘಟ್ಟಮ್ಮ ದೇವಿ ಮೂರ್ತಿಯ ಪ್ರಾಣ ಪ್ರತಿಷ್ಠಾನ ಹಾಗೂ ನೂತನ ಕಟ್ಟಡದ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು. ದೇವಸ್ಥಾನಗಳು ಶಾಂತಿ, ನೆಮ್ಮದಿಯ ತಾಣಗಳು. ಇಲ್ಲಿಗೆ ಹೆಚ್ಚು ಜನ ಭಕ್ತರು ಬಂದು ದೇವರಿಗೆ ಪೂಜೆ ಸಲ್ಲಿಸಬೇಕು. ವಿಶೇಷ ಪೂಜಾ ಸಂದರ್ಭದಲ್ಲಿ ಕುಟುಂಬ ಸಮೇತರಾಗಿ ಭಾಗವಹಿಸಬೇಕು ಎಂದು ಹೇಳಿದ ಅವರು, ದೇವಸ್ಥಾನದ ಅಭಿವೃದ್ಧಿಗಾಗಿ ತಾವುಅಗತ್ಯ ಸಹಕಾರ ನೀಡುವುದಾಗಿ ತಿಳಿಸಿದರು. ಇದಕ್ಕೂ ಮೊದಲು ಅರೇ ಶಂಕರ ಮಠದ ಸಿದ್ಧರಾಮ ಚೈತನ್ಯ ಸ್ವಾಮೀಜಿ ದೇವಸ್ಥಾನದಲ್ಲಿ ಪೂಜಾ ಹಾಗೂ ಧಾರ್ಮಿಕ ಕಾರ್ಯಗಳನ್ನು ನೆರವೇರಿಸಿದರು. ದೇವಸ್ಥಾನ ಸಮಿತಿ ಗೌರವಾಧ್ಯಕ್ಷ ರೇವಣಸಿದ್ಧಪ್ಪ, ಅಧ್ಯಕ್ಷ ಕೃಷ್ಣಮೂರ್ತಿ, ಉಪಾಧ್ಯಕ್ಷ ಪಟೇಲ್ ಬಾಬಣ್ಣ, ಕಾರ್ಯದರ್ಶಿ ಬಿ.ಸಿ ಧನಂಜಯ, ಸಹ ಕಾರ್ಯದರ್ಶಿ ಗಿರೀಶ್, ಖಜಾಂಚಿ ಲಕ್ಷ್ಮೀನಾರಾಯಣ್, ಸಿದ್ಧರಾಜುಗೌಡ, ಕುಮಾರ್, ಮಂಜುನಾಥ್, ಸುರೇಶ್, ಬಿಲ್ಡರ್ ಶ್ರೀನಿವಾಸಗೌಡ, ಉಪ್ಪಾರಹಳ್ಳಿ ನಾಗರಿಕ ಹಿತರಕ್ಷಣಾ ಸಮಿತಿ, ಕಟ್ಟಡ ಕಾರ್ಮಿಕರ ಸಂಘ, ಶಿವ ಮಾರುತಿ ಯುವಕರ ಸಂಘ, ಕೆರೆಕಟ್ಟೆಅಭಿವೃದ್ಧಿ ಸಮಿತಿ ಪದಾಧಿಕಾರಿಗಳು, ನಾಗರಿಕ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಕರ ಹಕ್ಕುಗಳ ರಕ್ಷಣೆಗೆ ಸಂಸತ್ತಿನಲ್ಲಿ ಧ್ವನಿಯಾಗಲು ಮನವಿ
ಸಿದ್ದೇಶ್ವರ ಕೈ ಬಲಪಡಿಸಲು ಕಾರ್ಯಕರ್ತರಿಗೆ ಸುನಿಲ ಕರೆ