ಕನ್ನಡಪ್ರಭ ವಾರ್ತೆ ಹಲಗೂರು
ಕೆಂಪೇಗೌಡ ಜನ್ಮದಿನ ಆಚರಣಾ ಸಮಿತಿಯಿಂದ ಹಲಗೂರು ಪ್ರಮುಖ ವೃತ್ತದಲ್ಲಿ ಶನಿವಾರ ಆಯೋಜಿಸಿದ್ದ ಕೆಂಪೇಗೌಡ ಜಯಂತ್ಯುತ್ಸವದಲ್ಲಿ ಮಾತನಾಡಿ, ಮಳವಳ್ಳಿ ತಾಲೂಕಿನಲ್ಲೇ ಹಲಗೂರು ಒಂದು ವ್ಯಾಪಾರ ಕೇಂದ್ರವಾಗಿ ಬೆಳೆಯುತ್ತಿದೆ. ಎಲ್ಲಾ ಜಾತಿ ಜನಾಂಗ ಸಾರ್ವಜನಿಕರು ಕೆಂಪೇಗೌಡರ ಜಯಂತಿ ಆಚರಿಸುತ್ತಿರುವುದು ಉತ್ತಮ ಕಾರ್ಯಕ್ರಮ ಎಂದರು.
ಕೆಂಪೇಗೌಡರು 64 ಬಂಡೆಗಳನ್ನು ಹೊಡೆದು ಬೆಂಗಳೂರನ್ನು ಕಟ್ಟಿದರು. ವಿದೇಶದಲ್ಲಿ ಇಂಡಿಯಾ ಎಂದರೆ ನೀವು ಬೆಂಗಳೂರಿನವರ ಎಂದು ಕೇಳುವ ಮಟ್ಟಕ್ಕೆ ಬೆಂಗಳೂರು ಬೆಳೆದಿದೆ. ಇದಕ್ಕೆ ನಾಡಪ್ರಭುಗಳು ಕಟ್ಟಿದ ಬೆಂಗಳೂರು ಕಾರಣ ಎಂದರು.ನವ ಕರ್ನಾಟಕ ಯುವಶಕ್ತಿ ರಾಜ್ಯ ಅಧ್ಯಕ್ಷ ಕೆ.ಎನ್.ಲಿಂಗೇಗೌಡ ಮಾತನಾಡಿ, ನಾಡಪ್ರಭು ಧರ್ಮಪ್ರಭು ಕೆಂಪೇಗೌಡರ ಜನ್ಮದಿನೋತ್ಸವ ಮಣ್ಣಿನ ಮಕ್ಕಳ ತವರೂರು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ ಎಂದರು.
ಇದೇ ವೇಳೆ ಹಲಗೂರು ಹೋಬಳಿಯಲ್ಲಿ ವ್ಯಾಸಂಗ ಮಾಡಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು.ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಪಟ್ಟಲದಮ್ಮ ದೇವಾಲಯದ ಅವರಣದಿಂದ ಗ್ರಾಮದ ಪ್ರಮುಖ ರಸ್ತೆಯಲ್ಲಿ ಕೆಂಪೇಗೌಡ ಅವರ ಭಾವಚಿತ್ರವನ್ನು ಸಾರೋಟಿನಲ್ಲಿ ಇರಿಸಿ ಮೆರವಣಿಗೆ ಮಾಡಲಾಯಿತು. ವೀರಗಾಸೆ, ಪೂಜಾ ಕುಣಿತ, ತಮಟೆ ನಗಾರಿ ಮೆರವಣಿಗೆ ಮುಖಾಂತರ ವೇದಿಕೆಗೆ ಗಣ್ಯರನ್ನು ಕರೆತರಲಾಯಿತು.
ಈ ಸಂದರ್ಭದಲ್ಲಿ ಮುಖಂಡರಾದ ಎನ್.ಕೆ.ಕುಮಾರ್, ಎ.ಟಿ.ಶ್ರೀನಿವಾಸ್, ಭಾಸ್ಕರ್, ಕೃಷ್ಣೇಗೌಡ, ಎಚ್.ಎಸ್.ಕೃಷ್ಣ, ಶಿವು, ಜಿ.ಕೆ.ನಾಗೇಶ್, ಮನೋಹರ, ಸುಂದರ್ ರಾಜ್, ಶಿವಪ್ರಕಾಶ್, ಆನಂದ್, ಚಂದು, ಶಿವಣ್ಣ, ಸೇರಿದಂತೆ ಹಲವರು ಭಾಗವಹಿಸಿದ್ದರು.