ಕೆಂಪೇಗೌಡರು ಪರೋಪಕಾರಿ ಆಡಳಿತಗಾರರಾಗಿದ್ದರು: ಡಾ.ದತ್ತಾತ್ರೆಯ ಗಾದಾ

KannadaprabhaNewsNetwork |  
Published : Jun 28, 2024, 12:47 AM IST
27ಶಿರಾ1: ಶಿರಾ ನಗರದ ಮಿನಿವಿಧಾನಸೌಧದಲ್ಲಿ ತಾಲೂಕು ಆಡಳಿತದ ವತಿಯಿಂದ ಏರ್ಪಡಿಸಿದ್ದ ನಾಡಪ್ರಭು ಕೆಂಪೇಗೌಡರ ಜಯಂತೋತ್ಸವ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಡಾ.ದತ್ತಾತ್ರೆಯ ಗಾದಾ ಅವರು ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು. ತಾಲೂಕು ಕುಂಚಿಟಿಗರ ಸಂಘದ ಕಾರ್ಯದರ್ಶಿ ಗುಳಿಗೇನಹಳ್ಳಿ ನಾಗರಾಜು, ನಗರಸಭೆ ಸದಸ್ಯರಾದ ಆರ್.ರಾಮು, ರಾಧಾಕೃಷ್ಣ, ನಗರಸಭೆ ಆಶ್ರಯ ಸಮಿತಿ ಸದಸ್ಯ ವಾಜರಹಳ್ಳಿ ರಮೇಶ್, ಮಾಜಿ ಎಪಿಎಂಸಿ ಅಧ್ಯಕ್ಷ ಶಶಿಧರ ಗೌಡ ಸೇರಿದಂತೆ ಹಲವರು ಹಾಜರಿದ್ದರು. | Kannada Prabha

ಸಾರಾಂಶ

ಮಿನಿವಿಧಾನಸೌಧದಲ್ಲಿ ತಾಲೂಕು ಆಡಳಿತದ ವತಿಯಿಂದ ಏರ್ಪಡಿಸಿದ್ದ ಕೆಂಪೇಗೌಡರ ಜಯಂತ್ಯುತ್ಸವ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಶಿರಾ ನಾಡಪ್ರಭು ಕೆಂಪೇಗೌಡ ಅವರು ಪರೋಪಕಾರಿ ಹಾಗೂ ಸಹಾನುಭೂತಿಯುಳ್ಳ ಆಡಳಿತಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಕೆಂಪೇಗೌಡರ ಆಳ್ವಿಕೆಯಲ್ಲಿ, ಕೃಷಿಕರು ಮತ್ತು ವ್ಯಾಪಾರಿಗಳು ನಿರ್ಭಯವಾಗಿ ಕಾರ್ಯನಿರ್ವಹಿಸುತ್ತಿದ್ದರು ಮತ್ತು ಸಾಕಷ್ಟು ಸಮೃದ್ಧಿಯನ್ನು ಹೊಂದಿದ್ದರು ಎಂದು ತಹಶೀಲ್ದಾರ್ ಡಾ.ದತ್ತಾತ್ರೆಯ ಗಾದ ತಿಳಿಸಿದರು. ಗುರುವಾರ ನಗರದ ಮಿನಿವಿಧಾನಸೌಧದಲ್ಲಿ ತಾಲೂಕು ಆಡಳಿತದ ವತಿಯಿಂದ ಏರ್ಪಡಿಸಿದ್ದ ಕೆಂಪೇಗೌಡರ ಜಯಂತ್ಯುತ್ಸವದಲ್ಲಿ ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು. ಬೆಂಗಳೂರನ್ನು ಕಟ್ಟಿದ ಕೆಂಪೇಗೌಡರು ತಮ್ಮ ಮಹತ್ ಕಾರ್ಯದಿಂದ ನಾಡಪ್ರಭುಗಳಾದರು. ಸಣ್ಣ ಗ್ರಾಮವಾಗಿದ್ದ ಬೆಂಗಳೂರನ್ನು ಆಧುನಿಕತೆಗೆ ಹೊಂದಿಕೊಳ್ಳುವಂತೆ ಅಂದಿನ ಕಾಲದಲ್ಲೇ ಅಭಿವೃದ್ದಿ ಮಾಡಿದವರು ಕೆಂಪೇಗೌಡರು. ಅವರ ಆಡಳಿತ ಇಂದಿಗೂ ಎಲ್ಲರಿಗೂ ಆದರ್ಶನೀಯ ಎಂದರು.ಎಲ್ಲಾ ಸಮುದಾಯಗಳ ವೃತ್ತಿಗಳ ಬೆಳವಣಿಗೆಗೆ ಪೂರಕವಾದ ವ್ಯವಹಾರದ ವಾತಾವರಣವನ್ನು ನಿರ್ಮಿಸಿದವರು. ಅದಕ್ಕಾಗಿ ವಿವಿಧ ಪೇಟೆಗಳು ಮತ್ತು ಬೀದಿಗಳನ್ನು ಹುಟ್ಟುಹಾಕಿದರು. ವಿಶಾಲ ರಸ್ತೆಗಳನ್ನು ನಿರ್ಮಿಸಿದ್ದವರು. ಕೆಂಪೇಗೌಡ ಅವರು ಬೆಂಗಳೂರಿನಲ್ಲಿ ಸ್ಥಾಪಿಸಿದ ಕೆರೆ ಕಟ್ಟೆಗಳು, ದೇವಸ್ಥಾನಗಳು, ದ್ವಾರಗಳು ಈಗಲೂ ನಾವು ನೋಡಬಹುದು ಎಂದರು.

ಈ ವೇಳೆ ಪ್ರಾಧ್ಯಾಪಕ ಡಾ.ಚಿಕ್ಕಣ್ಣ ಯೆಣ್ಣೇಕಟ್ಟೆ, ತಾ.ಪಂ. ಇ.ಓ. ಅನಂತರಾಜು, ಪೌರಾಯುಕ್ತ ರುದ್ರೇಶ್, ಸಹಾಯಕ ಕೃಷಿ ನಿರ್ದೇಶಕ ಎಚ್.ನಾಗರಾಜು, ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಸುಧಾಕರ್, ಹಿಂದುಳಿದ ವರ್ಗಗಳ ಅಧಿಕಾರಿ ಶಶಿಕಲಾ, ಬಿಇಓ ಕೃಷ್ಣಪ್ಪ, ಸಿಡಿಪಿಓ ರಾಜಾನಾಯ್ಕ, ನಗರಸಭೆ ಸದಸ್ಯರಾದ ಆರ್.ರಾಮು, ರಾಧಾಕೃಷ್ಣ, ನಗರಸಭೆ ಆಶ್ರಯ ಸಮಿತಿ ಸದಸ್ಯ ವಾಜರಹಳ್ಳಿ ರಮೇಶ್, ಮಾಜಿ ಎಪಿಎಂಸಿ ಅಧ್ಯಕ್ಷ ಶಶಿಧರ ಗೌಡ, ಮುಖಂಡರಾದ ಎಸ್.ಎಲ್.ಗೋವಿಂದರಾಜು, ಮುದ್ದುಗಣೇಶ್, ಲಕ್ಷ್ಮಣ ಗೌಡ, ಆರ್.ವಿ.ಪುಟ್ಟಕಾಮಣ್ಣ, ಲಿಂಗದಹಳ್ಳಿ ಸುಧಾಕರ ಗೌಡ, ಕರಿಯಣ್ಣ ಸೇರಿದಂತೆ ಹಲವರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ನಗರದಲ್ಲಿ 2026ಕ್ಕೆ ಅದ್ಧೂರಿ ಸ್ವಾಗತ
ನಗುವ ಜಗದ ಅಳುವ ಬಯಸಿದ ಚಿರಕವಿ ಸಣಕಲ್ಲ