ಹಂಪಿಯ ವೈಭವ ಕಂಡು ಬೆರಗಾಗಿದ್ದ ಕೆಂಪೇಗೌಡ

KannadaprabhaNewsNetwork | Updated : Jun 28 2024, 12:21 PM IST

ಸಾರಾಂಶ

ಮೊದಲನೆಯ ಕೆಂಪೇಗೌಡರು ವಿಜಯನಗರ ಸಾಮ್ರಾಜ್ಯದ ಸಾಮಂತ ರಾಜ್ಯವಾಗಿದ್ದ ಯಲಹಂಕ ನಾಡಿನ ಪಾಳೇಗಾರರಾಗಿದ್ದರು.

ಕಂಪ್ಲಿ: ಪಟ್ಟಣದ ತಹಶೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ತಾಲೂಕು ಆಡಳಿತದಿಂದ ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಗುರುವಾರ ಆಚರಿಸಲಾಯಿತು.

ಕೆಂಪೇಗೌಡರ ಭಾವಚಿತ್ರಕ್ಕೆ ವಿಶೇಷ ಪೂಜೆ ಹಾಗೂ ಪುಷ್ಪ ನಮನ ಸಲ್ಲಿಸಲಾಯಿತು. ನಂತರ ತಹಶೀಲ್ದಾರ ಶಿವರಾಜ ಶಿವಪುರ ಮಾತನಾಡಿ, ಮೊದಲನೆಯ ಕೆಂಪೇಗೌಡರು ವಿಜಯನಗರ ಸಾಮ್ರಾಜ್ಯದ ಸಾಮಂತ ರಾಜ್ಯವಾಗಿದ್ದ ಯಲಹಂಕ ನಾಡಿನ ಪಾಳೇಗಾರರಾಗಿದ್ದರು. 

ಹಂಪಿಯ ವೈಭವವನ್ನು ಕಂಡು ಬೆರಗಾಗಿದ್ದ ಕೆಂಪೇಗೌಡರು ದೂರದೃಷ್ಟಿಯಿಂದ ನಿರ್ಮಿಸಿದ ಬೆಂಗಳೂರು ನಗರ ರಾಜ್ಯದ ರಾಜಧಾನಿಯಾಗಿರುವುದಲ್ಲದೆ ಭಾರತದ ಪ್ರಮುಖ ನಗರಗಳಲ್ಲಿ ಒಂದಾಗಿದೆ. ಬೆಂಗಳೂರು ಅಪಾರ ಸಂಪತ್ತನ್ನು ಹೊಂದಿಕೊಂಡು, ರಾಜಧಾನಿಯಾಗಿ ಕೋಟಿ ಜನರಿಗೆ ನೆರಳು ಕೊಡಲು ಕೆಂಪೇಗೌಡರ ಶ್ರಮ ಕಾರಣವಾಗಿದೆ. ರಾಜ್ಯದ ಜನತೆ ಅವರನ್ನು ಎಂದೆಂದೂ ಮರೆಯಬಾರದು. ಅವರ ಮಾರ್ಗದರ್ಶನದಲ್ಲಿ ಪ್ರತಿಯೊಬ್ಬರು ನಡೆಯಬೇಕು ಎಂದರು.

ಈ ಸಂದರ್ಭದಲ್ಲಿ ಗ್ರೇಡ್- 2 ತಹಶೀಲ್ದಾರ ಷಣ್ಮುಖಪ್ಪ, ಉಪತಹಶೀಲ್ದಾರ್ ರವೀಂದ್ರಕುಮಾರ, ಕಂದಾಯ ಅಧಿಕಾರಿ ಜಗದೀಶ, ಶಿರಸ್ತೇದಾರರಾದ ರಮೇಶ, ಪಂಪಾಪತಿ, ಎಫ್‌ಡಿಎ ಮಾಲತೇಶ ದೇಶಪಾಂಡೆ, ಗ್ರಾಮ ಆಡಳಿತ ಅಧಿಕಾರಿಗಳಾದ ಜಿಲಾನ್, ಲಕ್ಷ್ಮಣ ನಾಯ್ಕ, ಪ್ರಭುಲಿಂಗ, ವಿಜಯಕುಮಾರ, ಶಿಕ್ಷಣ ಇಲಾಖೆಯ ವೀರೇಶಪ್ಪ, ರಾಮಚಂದ್ರಪ್ಪ, ಸಾಹಿತಿ ವಿದ್ಯಾಲಯದ ಮುಖ್ಯಸ್ಥ ಸ್ವಪ್ನ ಉದಯಶಂಕರ್, ತಾಲೂಕು ಆಡಳಿತ ಸಿಬ್ಬಂದಿ ವನಿತಾ, ರಾಧಾ, ವಿಜಯಲಕ್ಷ್ಮಿ, ಮೂಗಮ್ಮ, ಕುಸುಮಾ, ಆಶಾ ಮಡಿವಾಳರ, ಸಂಗೀತಾ, ಅಶ್ವಿನಿ, ಗುರುಸಿದ್ದೇಶ್ವರ, ಪುರಸಭೆ ಸಿಬ್ಬಂದಿ ಮಹ್ಮದಗೌಸ್ ಸೇರಿದಂತೆ ಇತರರಿದ್ದರು.

ಇನ್ನು ಕೆಂಪೇಗೌಡರ ಜಯಂತಿ ಅಂಗವಾಗಿ ತಾಲೂಕು ಆಡಳಿತದಿಂದ ಭಾಷಣ ಹಾಗೂ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿತ್ತು. 

ಕನ್ನಡಲ್ಲಿನ ಭಾಷಣ ಸ್ಪರ್ಧೆಯಲ್ಲಿ ದೇವಸಮುದ್ರ ಸರ್ಕಾರಿ ಶಾಲೆಯ ವಿಜಯಲಕ್ಷ್ಮಿ ಪ್ರಥಮ, ಸಾಹಿತಿ ವಿದ್ಯಾಲಯದ ಸಾಯಿಚೇತನ ದ್ವಿತೀಯ, ಷಾಮಿಯಾಚಂದ್ ಶಾಲೆಯ ರಾಜೇಶ್ ತೃತೀಯ, ಇಂಗ್ಲಿಷ್ ನ ಭಾಷಣ ಸ್ಪರ್ಧೆಯಲ್ಲಿ ಸಾಹಿತಿ ವಿದ್ಯಾಲಯದ ಪಿ.ವಿಮಲಾ ಪ್ರಥಮ, ಚೇತನ ವಿದ್ಯಾನಿಕೇತನ ಶಾಲೆಯ ವಿವೇಕ್ ದ್ವಿತೀಯ, ಕನ್ನಡದಲ್ಲಿನ ಪ್ರಬಂಧ ಸ್ಪರ್ಧೆಯಲ್ಲಿ ದೇವಸಮುದ್ರ ಸರ್ಕಾರಿ ಪ್ರೌಢ ಶಾಲೆಯ ಗಾದಿಲಿಂಗಮ್ಮ ಪ್ರಥಮ, ಸಾಹಿತಿ ವಿದ್ಯಾಲಯದ ಎನ್. ವರ್ಷ ದ್ವಿತೀಯ, ಶಾರದಾ ವಿದ್ಯಾನಿಕೇತನ ಶಾಲೆಯ ಕಾವೇರಿ ತೃತೀಯ, ಇಂಗ್ಲಿಷ್ ಭಾಷೆಯಲ್ಲಿನ ಪ್ರಬಂಧ ಸ್ಪರ್ಧೆಯಲ್ಲಿ ಸಾಹಿತಿ ವಿದ್ಯಾಲಯದ ಕೆ.ರೇಣುಕೇಶ್ವರಿ ಪ್ರಥಮ, ಚೇತನ ವಿದ್ಯಾನಿಕೇತನ ಶಾಲೆಯ ಕೆ.ಸುದೇಷ್ಣ ದ್ವಿತೀಯ, ಶಾರದಾ ವಿದ್ಯಾನಿಕೇತನ ಶಾಲೆಯ ಫಾಜಿಯಾ ತೃತೀಯ ಸ್ಥಾನವನ್ನುಗಳಿಸುವ ಮೂಲಕ ಪ್ರಶಸ್ತಿ ಮೂಡಿಗೆರಿಸಿಕೊಂಡರು.

Share this article