ಜಿಗಣೇಹಳ್ಳಿ ಶ್ರೀ ಮೈಲಾರಲಿಂಗಸ್ವಾಮಿ ದೇಗುಲ ಆವರಣದಲ್ಲಿ ಕೆಂಪೇಗೌಡ ಜಯಂತಿ
ಕನ್ನಡಪ್ರಭ ವಾರ್ತೆ , ಕಡೂರುದೂರದೃಷ್ಟಿ ಇಟ್ಟುಕೊಂಡು ತಾಂತ್ರಿಕವಾಗಿ ಬೆಂಗಳೂರು ನಗರ ಕಟ್ಟಿದ ಮಾಗಡಿ ಕೆಂಪೇಗೌಡರು ಸಮರ್ಥ ಆಡಳಿತಗಾರರೂ ಹೌದು ಎಂದು ಬಿಜೆಪಿ ಮುಖಂಡ ಜಿಗಣೇಹಳ್ಳಿ ನೀಲಕಂಠಪ್ಪ ಬಣ್ಣಿಸಿದರು.
ತಾಲೂಕಿನ ಜಿಗಣೇಹಳ್ಳಿ ಗ್ರಾಮದ ಶ್ರೀ ಮೈಲಾರಲಿಂಗಸ್ವಾಮಿ ದೇವಾಲಯದ ಆವರಣದಲ್ಲಿ ನಡೆದ ಕೆಂಪೇಗೌಡ ಜಯಂತಿ ಉದ್ಘಾಟಿಸಿ ಮಾತನಾಡಿದರು. ವಿಶ್ವಮಾನ್ಯ ಕೆಂಪೇಗೌಡರು ನಾಗರಿಕ ಸೌಲಭ್ಯಗಳನ್ನು ಒಳಗೊಂಡ ಬೆಂಗಳೂರು ನಗರ ನಿರ್ಮಿಸುವ ಕನಸು ಗೌಡರದ್ದಾಗಿತ್ತು. ಆ ನಗರದ ಕೋಟೆಗೆ ಕೆಂಪೇಗೌಡರ ಸೊಸೆ ಲಕ್ಷ್ಮೀದೇವಿ ಸ್ವಯಂ ಬಲಿದಾನದ ಮೂಲಕ ಕೋಟೆ ರಕ್ಷಿಸಿರುವುದು ಇತಿಹಾಸದ ದಾಖಲೆ. ಆ ಮಹಾ ಸಾಧ್ವಿ ಹೆಸರಿನ ದೇವಸ್ಥಾನ ಈಗಲೂ ಕೋರಮಂಗಲದಲ್ಲಿದೆ. ದೂರದೃಷ್ಟಿ ಇಟ್ಟುಕೊಂಡು ನಿರ್ಮಿಸಿದ ಬೆಂಗಳೂರು ಇಂದು ವಿಶ್ವಮಟ್ಟದಲ್ಲಿ ಹೆಸರಾಗಿದೆ. ವೃತ್ತಿ ಆಧಾರಿತ ಪೇಟೆಗಳನ್ನು ನಿರ್ಮಿಸಿ ಪ್ರತಿಯೊಂದು ವಸ್ತು ಸಿಗುವ ಮಹಾನಗರ ನಿರ್ಮಾಣದ ಕನಸನ್ನು ನನಸಾಗಿಸಿದ್ದು ಕೆಂಪೇಗೌಡರು. ಅಂತಹ ಧೀಮಂತ ವ್ಯಕ್ತಿ ಕೆಂಪೇಗೌಡರ ಆಡಳಿತ ಇಂದಿನವರಿಗೆ ಆದರ್ಶವಾಗಿದೆ ಎಂದರು.ನಮ್ಮ ನಿಕಟಪೂರ್ವ ಶಾಸಕ ಬೆಳ್ಳಿಪ್ರಕಾಶ್ ಅವರು ಎಲ್ಲ ಸಮಾಜಗಳನ್ನು ಸಮಾನವಾಗಿ ಕಾಣುವ ಮೂಲಕ ಕಡೂರು ತಾಲೂಕಿನ ವಕ್ಕಲಿಗ ಸಮಾಜದ ಮನವಿ ಪುರಸ್ಕರಿಸಿ ವೈಯುಕ್ತಿಕವಾಗಿ ಜಿಲ್ಲೆಯಲ್ಲಿಯೇ ಪ್ರಥಮವಾಗಿ ಕೆಂಪೇಗೌಡರ ಪ್ರತಿಮೆ ಮಾಡಿಸಿಕೊಟ್ಟು ಕಡೂರಿನ ಕೆ.ಎಂ.ರಸ್ತೆಯಿಂದ ಜಿಗಣೇಹಳ್ಳಿ ರಸ್ತೆ ಪಕ್ಕದಲ್ಲಿ ಪ್ರತಿಷ್ಟಾಪನೆಗೆ ಅನುವು ಮಾಡಿ ಕೊಟ್ಟು ಸಮಾಜಕ್ಕೆ ಗೌರವ ನೀಡಿದ್ದಾರೆ. ಅವರಿಗೆ ತಾಲೂಕಿನ ವಕ್ಕಲಿಗ ಸಮಾಜದ ಎಲ್ಲರ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.ಜಿಗಣೇಹಳ್ಳಿ ಗ್ರಾಮದ ಶ್ರೀ ಕೆಂಪೇಗೌಡ ಯುವಕ ಸಂಘದ ಮುಖಂಡ ರಘುವೀರಗೌಡ ಮಾತನಾಡಿ, ಜಿಗಣೇಹಳ್ಳಿ ಗ್ರಾಮದ ಮುಖಂಡರ ಹಾಗು ಯುವಕರ ಸಹಕಾರದಿಂದ ಕೆಂಪೇಗೌಡ ಜಯಂತಿ ಆಚರಣೆ ನಡೆಯುತ್ತಿದೆ. ವಕ್ಕಲಿಗ ಸಮಾಜ ಸಂಘಟಿತ ವಾಗಬೇಕು. ಆಗ ಸಮಾಜ ಅಭಿವೃದ್ಧಿ ಹೊಂದುತ್ತದೆ ಎಂದರು. ಗ್ರಾಮದಲ್ಲಿ ಕೆಂಪೇಗೌಡರ ಭಾವಚಿತ್ತದೊಂದಿಗೆ ಮೆರವಣಿಗೆ ನಡೆಯಿತು.ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರಾದ ಕರಿಯಪ್ಪ, ಕೆಂಚಪ್ಪ, ಭೈರೇಶ್, ಗ್ರಾಮದ ಗೌಡರು, ಕೆಂಪೇಗೌಡ ಅಭಿಮಾನಿ ಬಳಗದ ಸದಸ್ಯರು, ಜಿಗಣೇಹಳ್ಳಿ ಗ್ರಾಮಸ್ಥರು ಇದ್ದರು.
28ಕೆಕೆಡಿಯುಕಡೂರು ತಾಲೂಕಿನ ಜಿಗಣೇಹಳ್ಳಿ ಗ್ರಾಮದಲ್ಲಿ ಕೆಂಪೇಗೌಡ ಜಯಂತಿ ಆಚರಿಸಲಾಯಿತು.