ಬೆಂಗಳೂರು ಬೃಹದಾಕಾರವಾಗಿ ಬೆಳೆಯಲು ಕೆಂಪೇಗೌಡರು ಕಾರಣ: ರಮೇಶ ಬಂಡಿಸಿದ್ದೇಗೌಡ

KannadaprabhaNewsNetwork |  
Published : Jun 28, 2024, 12:45 AM IST
27ಕೆಎಂಎನ್ ಡಿ24 | Kannada Prabha

ಸಾರಾಂಶ

ಬೆಂಗಳೂರು ಇಂದು ಐಟಿ-ಬಿಟಿ ಅಭಿವೃದ್ಧಿಯಾಗಿ ಆಮದು, ರಪ್ತು ಮಾಡುವ ತಯಾರಿಕಾ ಕಾರ್ಖಾನೆಗಳು ಬೆಳೆದು ದೇಶದಲ್ಲಿ ವಹಿವಾಟಿಗೆ ಹೆಸರಾಗಿದೆ. ಕರ್ನಾಟಕದ ರಾಜಧಾನಿ ಬೆಂಗಳೂರು ಬೃಹದಾಕಾರವಾಗಿ ಬೆಳೆಯಲು ನಾಡಪ್ರಭು ಕೆಂಪೇಗೌಡರು ಕಾರಣ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಕರ್ನಾಟಕದ ರಾಜಧಾನಿ ಬೆಂಗಳೂರು ಬೃಹದಾಕಾರವಾಗಿ ಬೆಳೆಯಲು ನಾಡಪ್ರಭು ಕೆಂಪೇಗೌಡರು ಕಾರಣ ಎಂದು ಶಾಸಕ ರಮೇಶ ಬಂಡಿಸಿದ್ದೇಗೌಡ ಹೇಳಿದರು.

ಪಟ್ಟಣದ ತಾಲೂಕು ಕಚೇರಿಯಿಂದ ಕೆಂಪೇಗೌಡ ವೃತ್ತದ ವರೆಗೆ ನಡೆದ 515ನೇ ಜಯಂತ್ಯುತ್ಸವದಲ್ಲಿ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿ, ಬೆಂಗಳೂರು ಇಂದು ಐಟಿ-ಬಿಟಿ ಅಭಿವೃದ್ಧಿಯಾಗಿ ಆಮದು, ರಪ್ತು ಮಾಡುವ ತಯಾರಿಕಾ ಕಾರ್ಖಾನೆಗಳು ಬೆಳೆದು ದೇಶದಲ್ಲಿ ವಹಿವಾಟಿಗೆ ಹೆಸರಾಗಿದೆ ಎಂದರು.

ತಾಲೂಕು ಕಚೇರಿಯಿಂದ ವಾದ್ಯಗೋಷ್ಠಿ, ದೇವರ ಕುಣಿತ, ಡೊಳ್ಳುಕುಣಿತದೊಂದಿಗೆ ಸಮಾಜದ ಮುಖಂಡರು, ಶಾಲಾ ವಿದ್ಯಾರ್ಥಿಗಳು ಕೆಂಪೇಗೌಡ ವೃತ್ತದ ವೇದಿಕೆ ಕಾರ್ಯಕ್ರಮಕ್ಕೆ ಮೆರಣಿಗೆ ಮೂಲಕ ಸಾಗಿದರು. ದಾರಿಯುದ್ದಕ್ಕೂ ನಾಡಪ್ರಭು ಕೆಂಪೇಗೌಡ ರವರ ಪರ ಘೋಷಣೆ ಕೂಗಿದರು.

ವೇದಿಕೆಯಲ್ಲಿ ತಾಲೂಕಿನ ಪ್ರಗತಿಪರ ರೈತರು, ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಉದ್ಯೋಗದಾತ ಸಂಸ್ಥೆ ಮುಖ್ಯಸ್ಥ ಡಿ.ಬಿ ರುಕ್ಮಾಂಗದ ಕೆಂಪೇಗೌಡರ ಕುರಿತು ಉಪನ್ಯಾಸ ನೀಡಿದರು.

ಇದಕ್ಕೂ ಮುನ್ನ ತಾಲೂಕು ಆಡಳಿತದಿಂದ ತಾಲೂಕು ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾಸಕ ರಮೇಶಬಂಡಿಸಿದ್ದೇಗೌಡ, ತಹಸೀಲ್ದಾರ್ ಪರುಶುರಾಂ ಸತ್ತಿಗೇರಿ, ಪುರಸಭೆ ಸದಸ್ಯರು, ಸಮಾಜದ ಮುಖಂಡರು ಸೇರಿದಂತೆ ತಾಲೂಕು ಅಡಳಿತದ ಅಧಿಕಾರಿಗಳು ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.

ತಾಪಂ ಇಒ ವೇಣು, ಪುರಸಭೆ ಮುಖ್ಯಾಧಿಕಾರಿ ರಾಜಣ್ಣ, ಪುರಸಭಾ ಸದಸ್ಯ ಎಂ.ಎಲ್.ದಿನೇಶ್, ಎಸ್.ಪ್ರಕಾಶ್, ಕೃಷ್ಣಪ್ಪ, ಜಿ.ಎಸ್ ಶಿವು, ಒಕ್ಕಲಿಗರ ಸಂಘದ ಅಧ್ಯಕ್ಷ ಚಂದ್ರಶೇಖರ್, ಅಖಿಲ ಕರ್ನಾಟಕ ಒಕ್ಕಲಿಗ ಸಂಘದ ಅಧ್ಯಕ್ಷ ಗೌಡಹಳ್ಳಿ ದೇವರಾಜು, ಮುಖಂಡರಾದ ಪೈ. ಮುಕುಂದ, ಸುರೇಶ್, ಪುಟ್ಟಸ್ವಾಮಿ, ಚಂದಗಾಲು ಶಂಕರ್, ಸ್ವಾಮೀಗೌಡ, ದರ್ಶನ್ ಲಿಂಗರಾಜು, ಕೆಂಪೇಗೌಡ ಯುವ ಶಕ್ತಿ ವೇವಿಕೆ ಅಧ್ಯಕ್ಷ ಮಹೇಶ್, ಮ.ರ.ವೇ ಅಧ್ಯಕ್ಷ ಶಂಕರ್ ಬಾಬು ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಹಾಜರಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ