ಪಾರಂಪರಿಕ ಗುಣಮಟ್ಟ ಮತ್ತು ಗ್ರಾಹಕ ಪ್ರೀತಿ ‘ಬಿಂದು’ ಹೆಗ್ಗುರುತುಕನ್ನಡಪ್ರಭ ವಾರ್ತೆ ಮಂಗಳೂರು
ಚಿನ್ನಾಭರಣ ಕ್ಷೇತ್ರದಲ್ಲಿ ಕೇರಳದಲ್ಲಿ ಮನೆಮಾತಾಗಿರುವ ‘ಬಿಂದು‘ ಜುವೆಲ್ಲರಿ ಮಂಗಳೂರಿಗೆ ಕಾಲಿಟ್ಟಿದೆ. ಮಂಗಳೂರು ಬೆಂದೂರ್‌ನ ಎಸ್‌ಸಿಎಸ್ ಆಸ್ಪತ್ರೆ ಸಮೀಪ ಸುಸಜ್ಜಿತ ಶೋರೂಂನ್ನು ತೆರೆದಿದ್ದು, ಇದು ಭಾನುವಾರ ಶುಭಾರಂಭಗೊಂಡಿತು.ದಕ್ಷಿಣ ಭಾರತದ ಪ್ರಖ್ಯಾತ ಚಲಚಿತ್ರ ನಟಿ ಸ್ನೇಹ ಪ್ರಸನ್ನ ಅವರು ಮಳಿಗೆಯನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ‘ಬಿಂದು‘ ಜುವೆಲ್ಲರಿ ತನ್ನ ಪಾರಂಪರಿಕತೆ ಮತ್ತು ಗುಣಮಟ್ಟದಿಂದ ಗ್ರಾಹಕರ ಪ್ರೀತಿಗೆ ಕಾರಣವಾಗಿದೆ. ಇದೇ ಮೊದಲ ಬಾರಿಗೆ ಸಂಸ್ಥೆಯ ಜೊತೆ ಗುರುತಿಸಿಕೊಂಡಿದ್ದು, ಹೆಮ್ಮೆಯ ಕ್ಷಣವಾಗಿದೆ. ಮಂಗಳೂರಿಗೂ ಮೊದಲ ಬಾರಿಗೆ ಭೇಟಿ ನೀಡಿದ್ದು, ಮಂಗಳೂರಿಗೆ ಹೆಗ್ಗುರುತಾಗಿ ಬಿಂದು ಸೇರ್ಪಡೆಗೊಂಡಿದೆ. ಕುಟುಂಬದಲ್ಲಿ ಮಹಿಳೆಗೆ ಪ್ರಮುಖ ಸ್ಥಾನವಿದ್ದು, ಆಕೆ ಪುರುಷರಿಗಿಂತಲೂ ಹೆಚ್ಚು ಶಕ್ತಿ ಶಾಲಿಯಾಗಿದ್ದಾಳೆ ಎಂದರು.ಈ ಸಂದರ್ಭ ಸಂಸ್ಥೆಯ ಸಿಎಸ್ಆರ್ ಚಟುವಟಿಕೆಯ ಭಾಗವಾದ ಮಹಿಳಾ ಸಬಲೀಕರಣ, ಶಿಕ್ಷಣ ಮತ್ತು ಸಮುದಾಯ ಅಭಿವೃದ್ಧಿ ಕಾರ್ಯಕ್ರಮ ‘ಸ್ವರ್ಣ ಬಿಂದು‘ ಯೋಜನೆಗೆ ಚಾಲನೆ ನೀಡಿದರು. ‘ಮೈ ಬ್ಲೂ ಡೈಮಂಡ್‘ ವಜ್ರಾಭರಣವನ್ನು ಸ್ನೇಹ ಪ್ರಸನ್ನ ಬಿಡುಗಡೆಗೊಳಿಸಿದರು.ಮಂಗಳೂರು ರಾಮಕೃಷ್ಣ ಮಠದ ಸ್ವಾಮಿ ಯೋಗೇಶಾನಂದಜೀ, ಶಾಸಕರಾದ ವೇದವ್ಯಾಸ ಕಾಮತ್, ಡಾ. ಭರತ್ ಶೆಟ್ಟ, ಕರ್ನಾಟಕ ರಾಜ್ಯ ಅಲೈಡ್ ಮತ್ತು ಹಲ್ತ್ ಕೇರ್ ಕೌನ್ಸಿಲ್ ಚೇರ್ಮನ್ ಡಾ. ಯು.ಟಿ. ಇಫ್ತಿಕರ್ ಅಲಿ ಫರೀದ್, ಕೆನರಾ ವಾಣಿಜ್ಯ ಮತ್ತು ಕೈಗಾರಿಕ ಸಂಸ್ಥೆ ಅಧ್ಯಕ್ಷ ಪಿ.ಬಿ. ಅಹಮ್ಮದ್ ಮುದಸ್ಸರ್, ನಟರಾದ ಶೋಧನ್ ಶೆಟ್ಟಿ, ಅಮೀಶ್, ಬಿಂದು ಜುವೆಲ್ಲರಿ ಮಾಲೀಕರಾದ ಅಭಿಲಾಷ್ ಕೆ.ವಿ. ಮತ್ತು ಡಾ. ಅಜಿತೇಶ್ ಕೆ.ವಿ., ಮಾಲೀಕರ ತಾಯಿ ಶೋಭನಾ ಇದ್ದರು.ಶರ್ಮಿಳಾ ಅಮೀನ್ ನಿರೂಪಿಸಿದರು.---
ವಜ್ರ, ಚಿನ್ನಾಭರಣಗಳಿಗೆ ‘ಬಿಂದು’ ಹೆಚ್ಚಿನ ಆದ್ಯತೆ1981ರಲ್ಲಿ ಸಂಸ್ಥಾಪಕ ಕೆ.ವಿ. ಕುಂಞಿಕಣ್ಣನ್ ಅವರಿಂದ ಬಿಂದು ಚಿನ್ನಾಭರಣಗಳ ಈ ಪಯಣ ಆರಂಭಗೊಂಡಿತ್ತು. ಇದೀಗ ಕರ್ನಾಟಕ ಮತ್ತು ಕೇರಳದ ಗ್ರಾಹಕರಿಗೆ ಚಿನ್ನದ ಪರಿಶುದ್ಧತೆಯ ಬದ್ಧತೆಯೊಂದಿಗೆ ನವನವೀನ ವಿನ್ಯಾಸವನ್ನು ಒದಗಿಸುವ ಮೂಲಕ ಅವರ ವಿಶ್ವಾಸವನ್ನು ಗಳಿಸಿಕೊಂಡಿದೆ. ತಂದೆ ಆರಂಭಿಸಿದ ಈ ಚಿನ್ನಾಭರಣದ ಉದ್ದಿಮೆಯನ್ನು ಅಭಿಲಾಷ್ ಕೆ.ವಿ. ಮತ್ತು ಡಾ. ಅಜಿತೇಶ್ ಕೆ.ವಿ. ಮುಂದುವರಿಸಿಕೊಂಡು ಬರುತ್ತಿದ್ದಾರೆ.‘ಶುದ್ಧತೆ, ಶ್ರೇಷ್ಠತೆ ಹಾಗೂ ನಂಬಿಕೆಯ ವಾಗ್ದಾನದೊಂದಿಗೆ ಬಿಂದು ಜುವೆಲ್ಲರಿ ಕೇರಳ, ಕರ್ನಾಟಕದಲ್ಲಿ ಒಂದು ಭವ್ಯ ಪರಂಪರೆಯನ್ನು ಹುಟ್ಟುಹಾಕಿದೆ. ಕಲೆ, ನೈಪುಣ್ಯತೆ ಹಾಗೂ ನಂಬಿಕೆಯ ಬಿಂದು ಪಯಣದಲ್ಲಿ ಸಹಸ್ರ ಸಂಖ್ಯೆಯ ಜನರು ನಮ್ಮ ಜತೆಯಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಳ್ಯದ ಬಳಿಕ ಮಂಗಳೂರಿನಲ್ಲಿ ಬಿಂದು ಜುವೆಲ್ಲರಿ ತೆರೆಯಲಾಗಿದೆ. ಸಂಸ್ಕೃತಿ ಹಾಗೂ ವ್ಯಾಪಾರವನ್ನು ಒಟ್ಟಾಗಿ ಬೆಸೆದುಕೊಂಡಿರುವ ಮಂಗಳೂರಿನಲ್ಲಿ ಬಿಂದು ಜುವೆಲ್ಲರಿ ತನ್ನ ಕಲಾತ್ಮಕ ಪರಂಪರೆ, ವೈವಿಧ್ಯಮಯ ವಿನ್ಯಾಸಗಳೊಂದಿಗೆ ಗ್ರಾಹಕರನ್ನು ತಲುಪಲಿದ್ದೇವೆ. ವಜ್ರ ಹಾಗೂ ಚಿನ್ನಾಭರಣಗಳಿಗೆ ಹೆಚ್ಚು ಆದ್ಯತೆ ನೀಡಲಾಗುವುದು ಎಂದು ಅಭಿಲಾಷ್ ಕೆ.ವಿ. ಮತ್ತು ಡಾ. ಅಜಿತೇಶ್ ಕೆ.ವಿ. ತಿಳಿಸಿದರು.----------------