ಹೊನ್ನಾಳಿ: ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆ ವ್ಯಾಪ್ತಿಯ ಶಿವಮೊಗ್ಗ ಹಾಲು ಒಕ್ಕೂಟದ ಐದು ವರ್ಷದ ಆಡಳಿತ ಮಂಡಳಿ ಚುನಾವಣೆಗೆ ನ್ಯಾಮತಿ ತಾಲೂಕಿನಿಂದ ಕುರುವ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕುರುವ ಕೆ.ಜಿ.ಸುರೇಶ್ ಬುಧವಾರ ನಾಮಪತ್ರ ಸಲ್ಲಿಸಿದರು.
ನಾನು ರೈತ ಕುಟುಂಬದಿಂದ ಬಂದವನು ನನಗೆ ರೈತರ ಕಷ್ಟ ಮತ್ತು ಹೈನುಗಾರಿಕೆಯಲ್ಲಿನ ಕಷ್ಟ-ಸುಖಗಳ ಬಗ್ಗೆ ತಿಳಿದುಕೊಂಡಿದ್ದೆನೆ. ಈಗಾಗಲೇ ಕುರುವ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷನಾಗಿ, ಶ್ರೀಕ್ಷೇತ್ರ ಧರ್ಮಸ್ಥಳ ಸಹಕಾರ ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದೆನೆ. ಆದ್ದರಿಂದ ರೈತರ ಹಿತಾಸಕ್ತಿ ಕಾಪಾಡಲು, ರೈತರ ಶ್ರೇಯೋಭಿವೃದ್ಧಿಗಾಗಿ ದುಡಿಯುತ್ತೇನೆ. ಅಲ್ಲದೆ ರೈತರ ಕಷ್ಟ ಸುಖದಲ್ಲಿ ಭಾಗಿಯಾಗುತ್ತೇನೆ. ಅದಕ್ಕಾಗಿ ಮತದಾನದ ಹಕ್ಕು ಪಡೆದ ಸಹಕಾರ ಬಂಧುಗಳು ನನ್ನನ್ನು ಬೆಂಬಲಿಸಿ ಎಂದು ಮಾನವಿ ಮಾಡಿದರು.