ಕನ್ನಡಪ್ರಭ ವಾರ್ತೆ ಕೆಜಿಎಫ್ನಾವು ಎಲ್ಲರೂ ವಿದ್ಯಾವಂತರೂ, ಸರಕಾರ ಜನರ ಸೇವೆ ಮಾಡಲು ಅವಕಾಶ ಮಾಡಿಕೊಟ್ಟಿದೆ, ನಾವು ಜನರೊಂದಿಗೆ ಬೆರತು ಮುಂದಿನ ಪೀಳಿಗೆಗೆ ಉತ್ತಮ ಪರಿಸರ ನಿರ್ಮಾಣ ಮಾಡಲು ಪಣ ತೊಡಬೇಕು. ಅಕ್ಟೋಬರ್ ೨ರೊಳಗೆ ನಗರದಲ್ಲಿ ಎಲ್ಲಿಯೂ ಕಸದ ಬ್ಲಾಕ್ ಸ್ಪಾಟ್ ಕಾಣಬಾರದು ಎಂದು ಆರೋಗ್ಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಎಂ.ಆರ್. ರವಿ ಸೂಚಿಸಿದರು.
ಸ್ವಚ್ಛತೆ ಎಲ್ಲರ ಕರ್ತವ್ಯ
ಸಣ್ಣ ಸಣ್ಣ ನಗರಗಳಲ್ಲಿ ನಾವು ನಮ್ಮ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಲು ಏಕೇ ಸಾಧ್ಯವಾಗುತ್ತಿಲ್ಲ, ಅಧಿಕಾರಿಗಳು ಜನರೊಂದಿಗೆ ಬೆರೆತು ಉತ್ತಮ ಕೆಲಸವನ್ನು ಮಾಡಬೇಕು. ನಗರದ ಪಾರ್ಕ್‌ಗಳು, ರಸ್ತೆಗಳು ಚರಂಡಿಗಳನ್ನು ಸ್ವಚ್ಛ ಮಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿ ಉತ್ತಮ ಪರಿಸರವನ್ನು ನಿರ್ಮಾಣ ಮಾಡುವುದು ನಮ್ಮಲ್ಲರ ಕರ್ತವ್ಯ ಎಂದು ಹೇಳಿದರು.ಬಾರ್ ಕಂಡು ದಂಗಾದ ಡಿಸಿಏನಪ್ಪ ಎಲ್ಲಿಯಾದರೂ ಬಸ್ ನಿಲ್ದಾಣಗಳಲ್ಲಿ ಬಾರ್‌ಗೆ ಅನುಮತಿ ನೀಡಿರುವ ಊದಾಹರಣೆ ಇದೆಯೇ, ನಗರಸಭೆ ಮಳಿಗೆಗಳಲ್ಲಿ ಬಾರ್‌ಗೆ ಅನುಮತಿ ನೀಡಲು ಕಾನೂನು ಇದೆಯೇ ಎಂದು ಪೌರಾಯುಕ್ತರನ್ನು ಪ್ರಶ್ನಿಸಿದರು, ಕೂಡಲೇ ಬಾರ್‌ಗಳನ್ನು ತೆರವುಗೊಳಿಸಬೇಕು ನಾನು ಅಬಕಾರಿ ಇಲಾಖೆಯ ಡಿಸಿ ಜತೆ ಮಾತನಾಡುತ್ತೆನೆ ಎಂದರು. ಏನಮ್ಮ ನಿಮ್ಮ ಮನೆಯ ಮುಂದೆ ಬೆಳಿಗ್ಗೆ ಎದ್ದು ಕಸವನ್ನು ನೋಡಿದರೆ ನಿಮಗೆ ಏನು ಅನಿಸುತ್ತದೆ, ಹಾಗೇ ತಾನೇ ಸಾರ್ವಜನಿಕರ ಮನೆಗಳ ಮುಂದೆ ಕಸವನ್ನು ತಂದು ಬ್ಲಾಕ್ ಸ್ಪಾಟ್ ಮಾಡುತ್ತಿರುವುದು ನಿಮ್ಮ ಕಾಣಸಲಿಲ್ಲವೇ, ನೀವು ಏನು ಕೆಲಸ ಮಾಡುತ್ತಿದ್ದೀರಿ, ಬ್ಲಾಕ್ ಸ್ಪಾಟ್ ಜಾಗದಲ್ಲಿ ಸಿಸಿ ಕ್ಯಾಮೆರಾ ಏಕೆ ಕೆಲಸ ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷರಾದ ಇಂದಿರಗಾAಧಿ, ಸ್ಥಾಯಿ ಸಮಿತಿ ಅಆಧ್ಯಕ್ಷರಾದ ವಳ್ಳಲ್ ಮುನಿಸ್ವಾಮಿ, ನಗರಸಭೆ ಸದಸ್ಯರಾದ ಕರಣಾಕರನ್, ಮಾಣಿಕ್ಯಂ, ಕೆಜಿಎಫ್ ತಹಸೀಲ್ದಾರ್ ಭರತ್, ಪಿ.ಡಿ.ಅಂಬಿಕಾ, ಇಇ ಶ್ರೀನಿವಾಸ್, ಎಇ ಗಂಗಾಧರ್, ನಗರಸಭೆ ವ್ಯವಸ್ಥಾಪಕ ಶಶಿಕುಮಾರ್, ಜಯರಾಮ್, ಸರಕಾರಿ ನೌಕರರ ಸಂಘದ ಅಧ್ಯಕ್ಷರಾದ ನರಸಿಂಹಮೂರ್ತಿ ಹಾಗೂ ಇನ್ನಿತರ ಅಧಿಕಾರಿಗಳು ಸೈಕಲ್ ಜಾಥದಲ್ಲಿ ಭಾಗವಹಿಸಿದ್ದರು.